ಹಿಂದಿಯ ‘ಸೈನೈಡ್’ನಲ್ಲಿ ಅಮಿತಾಭ್, ನಾನಾ ಗ್ಯಾರಂಟಿ
ಬೆಂಗಳೂರು : ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾದ ಕನ್ನಡ ಚಿತ್ರ ‘ಸೈನೈಡ್’, ಹಿಂದಿ ಮತ್ತು ತಮಿಳಿನಲ್ಲಿ ಸಿದ್ಧಗೊಳ್ಳಲಿದೆ. ಅಮಿತಾಭ್ ಬಚ್ಚನ್ ಮತ್ತು ನಾನಾ ಪಾಟೇಕರ್ ತಾರಾಬಳಗದಲ್ಲಿದ್ದಾರೆ.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡುತ್ತಿದ್ದ ‘ಸೈನೈಡ್’ ನಿರ್ದೇಶಕ ರಮೇಶ್, ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಚಿತ್ರದ ಹಕ್ಕುಗಳನ್ನು ನಿರ್ದೇಶಕ ರಾಮ ಗೋಪಾಲ್ ವರ್ಮ ಪಡೆದಿದ್ದು, ಚಿತ್ರ ಸದ್ಯದಲ್ಲಿಯೇ ಸೆಟ್ಟೇರಲಿದೆ. ರಾಜೀವ್ ಗಾಂಧಿ ಹಂತಕರ ಕಡೆಯ ದಿನಗಳನ್ನು ಆಧಾರವಾಗಿಟ್ಟುಕೊಂಡು ‘ಸೈನೈಡ್’ ರೂಪುಗೊಂಡಿತ್ತು ಎಂದು ರಮೇಶ್ ಹೇಳಿದರು.
ನನ್ನ ಮುಂದಿನ ಚಿತ್ರದಲ್ಲಿ ನರಹಂತಕ ವೀರಪ್ಪನ್ ಹತ್ಯೆಯನ್ನು ಮತ್ತು ಪೊಲೀಸರ ಕಾರ್ಯಾಚರಣೆಯನ್ನು ಬಿಂಬಿಸುತ್ತೇನೆ. ಚಿತ್ರದ ಆರಂಭಕ್ಕೆ ಸಿದ್ಧತೆಗಳು ನಡೆದಿವೆ ಎಂದು ರಮೇಶ್ ತಿಳಿಸಿದರು.
(ಯುಎನ್‌ಐ)


Click it and Unblock the Notifications