ಗಾಳಿಪಟ ಹಾಡುಗಳು ಲಭ್ಯ; ಕೇಳುಗ ಏನನ್ನುತ್ತಾನೋ?
'ಮುಂಗಾರು ಮಳೆ'ಚಿತ್ರ ಹಿಟ್ ಆಗಿದ್ದಕ್ಕೆ ಹಾಡುಗಳ ಕೊಡುಗೆ ದೊಡ್ಡದು. ಮನೋಮೂರ್ತಿ ಸಂಗೀತ, ಕಾಯ್ಕಿಣಿ ಸಾಹಿತ್ಯ ಇವೆಲ್ಲವೂ ಹಾಲುಜೇನು ಬೆರೆಸಿದಂತಿತ್ತು. 'ಮುಂಗಾರು ಮಳೆ'ನಂತರ ಯೋಗರಾಜ್ ಭಟ್ ನಿರ್ದೇಶನದ ಹೊಸ ಚಿತ್ರ 'ಗಾಳಿಪಟ'ಕುರಿತೇ ಎಲ್ಲೆಡೆ ಮಾತು. ಇದೀಗ ಚಿತ್ರದ ಆಡಿಯೋ ಕ್ಯಾಸೆಟ್ ಮತ್ತು ಸಿ.ಡಿ. ಬಿಡುಗಡೆಯಾಗಿವೆ.
ಎಸ್ ಪಿಆರ್ ಎಂಟರ್ ಪ್ರೈಸಸ್ ನಿರ್ಮಾಣದ ಈ ಚಿತ್ರದ ಆಡಿಯೋ ಕ್ಯಾಸೆಟ್ ಬಿಡುಗಡೆ ಸಮಾರಂಭ ವರ್ಣಮಯವಾಗಿತ್ತು. ರವಿಚಂದ್ರನ್, ರಾಕ್ ಲೈನ್ ವೆಂಕಟೇಶ್, ನಿರ್ದೇಶಕ ಸೂರಿ ಮತ್ತಿತರರ ಜೊತೆ ಯೋಗರಾಜ್ ಭಟ್ ಕ್ಯಾಸೆಟ್ ಬಿಡುಗಡೆಯ ಸಂಭ್ರಮ ಹಂಚಿಕೊಂಡರು. ನಟ ಗಣೇಶ್ ,ನಿರ್ಮಾಪಕ ಸೂರ್ಯ ಪ್ರಕಾಶ್ ರಾವ್, 'ಗಾಳಿಪಟ'ಹಾಡುಗಳಿಗೆ ಸಂಗೀತ ನೀಡಿರುವ ಹರಿಕೃಷ್ಣ ಸಮಾರಂಭದಲ್ಲಿ ಹಾಜರಿದ್ದರು.
ನಾಯಕ ಗಣೇಶ್ ಮಾತನಾಡುತ್ತಾ, ಯೋಗರಾಜ್ ಭಟ್ ಅವರಿಗೆ ಪ್ರಶಂಸೆಯ ಕಿರೀಟ ತೊಡಿಸಿದರು . ಮುಂಗಾರು ಮಳೆ ಮೀರಿಸುವ ಸಂಭಾಷಣೆಯನ್ನು ಯೋಗರಾಜ್ ಭಟ್ ಈ ಚಿತ್ರದಲ್ಲಿ ಬರೆದಿದ್ದಾರೆ. ಡಬ್ಬಿಂಗ್ ಮಾಡುವಾಗ ನಿಜಕ್ಕೂ ನಾನು ಬೆರಗಾದೆ ಎಂದರು. ಯೋಗರಾಜ್ ಭಟ್ ತುಂಬಾ ನರ್ವಸ್ ಆದಂತೆ ಕಂಡು ಬಂತು.
ಗಾಳಿ ಪಟ : ಒಂದು ರೊಮ್ಯಾಂಟಿಕ್ ಲವ್ ಸಾಂಗ್!
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications