»   » ವಿಷ್ಟುವರ್ಧನ್‌ಗೆ ಗೌರವ ಡಾಕ್ಟರೇಟ್‌

ವಿಷ್ಟುವರ್ಧನ್‌ಗೆ ಗೌರವ ಡಾಕ್ಟರೇಟ್‌

Subscribe to Filmibeat Kannada

ಬೆಂಗಳೂರು : ನಟ ವಿಷ್ಣುವರ್ಧನ್‌, ನೃತ್ಯಗಾರ್ತಿ ಮಾಯಾರಾವ್‌ ಸೇರಿದಂತೆ ನಾಲ್ಕು ಮಂದಿಗೆ ಗೌರವ ಡಾಕ್ಟರೇಟ್‌ ನೀಡಲು ಬೆಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ ಎಂದು ಕುಲಪತಿ ಡಾ. ಎಂ. ಎಸ್‌. ತಿಮ್ಮಪ್ಪ ತಿಳಿಸಿದ್ದಾರೆ.

ಜನವರಿ 6ರಂದು ಹಮ್ಮಿಕೊಳ್ಳಲಾಗಿರುವ ವಿವಿಯ 41ನೇ ವಾರ್ಷಿಕ ಘಟಿಕೋತ್ಸವದಲ್ಲಿ, ಗೌರವ ಡಾಕ್ಟರೇಟ್‌ಪ್ರದಾನ ಮಾಡುವುದಾಗಿ ಸುದ್ದಿಗಾರರಿಗೆ ಅವರು ವಿವರಿಸಿದ್ದಾರೆ.

ಸುಮಾರು 190 ಚಿತ್ರಗಳಲ್ಲಿ ನಟಿಸಿರುವ ವಿಷ್ಣುವರ್ಧನ್‌ ಸಿನಿಮಾ ಹೊರತಾಗಿ, ತಮ್ಮ ಸ್ನೇಹಲೋಕ ಸಂಘಟನೆಯ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರ ಸಮಗ್ರ ಸೇವೆಯನ್ನು ಪರಿಗಣಿಸಿ, ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ.

ಕಲಾವಿದ ವಿ. ಬಾಲು ಮತ್ತು ವಿದ್ವಾಂಸ ಎಸ್‌.ಕೆ. ರಾಮಚಂದ್ರರಾವ್‌ ಅವರಿಗೆ ಗೌರವ ಡಾಕ್ಟರೇಟ್‌ಪದವಿಗೆ ನೀಡಲಾಗುತ್ತಿದೆ. ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತರಾದ ಡಾ। ವಿ. ಶಾಂತಾ ಅವರು ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada