»   » ಕಾಸರವಳ್ಳಿಗೂ ವಿಮರ್ಶಕರ ಬಗ್ಗೆ ಅಸಮಾಧಾನವಿದೆ

ಕಾಸರವಳ್ಳಿಗೂ ವಿಮರ್ಶಕರ ಬಗ್ಗೆ ಅಸಮಾಧಾನವಿದೆ

Posted By: Staff
Subscribe to Filmibeat Kannada

ಕಾದಂಬರಿಕಾರ ಎಸ್‌.ಎಲ್‌.ಭೈರಪ್ಪನವರಾಗಲೀ, ಜ್ಞಾನಪೀಠಿ ಯು.ಆರ್‌.ಅನಂತಮೂರ್ತಿಯವರಿಗಾಗಲೀ ವಿಮರ್ಶಕರೆಂದರೆ ನಖಶಿಖಾಂತ ಉರಿದು ಹೋಗುತ್ತದೆ. ಅವರೊಟ್ಟಿಗೆ ಕೂತು ಮಾತಾಡಿದರೆ ಅದು ಸ್ಪಷ್ಟವಾಗುತ್ತದೆ. ಅದಕ್ಕೆ ಅವರದ್ದೇ ಆದ ಕಾರಣಗಳೂ ಉಂಟು. ಈಗ ಗಿರೀಶ್‌ ಕಾಸರವಳ್ಳಿ ಕೂಡ ತಮ್ಮ ಕ್ಷೇತ್ರದ ವಿಮರ್ಶಕರನ್ನು ಬಡಿದೆಚ್ಚರಿಸಿದ್ದಾರೆ.

ಕುಂಬಳಗೋಡಿನ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಜರ್ನಲಿಸಂ ಅಂಡ್‌ ನ್ಯೂ ಮೀಡಿಯಾದಲ್ಲಿ ಇತ್ತೀಚೆಗೆ ನಡೆದ 'ಮಾಧ್ಯಮ ಮತ್ತು ಸಿನಿಮಾ" ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಕಾಸರವಳ್ಳಿ ಮಾತಾಡಿದರು. ಕೇವಲ ಕಥೆಯ ಸಾರ ಮತ್ತು ಅದರ ಬಗ್ಗೆ ಅಭಿಪ್ರಾಯವನ್ನು ಕಡಿಮೆ ಜಾಗದಲ್ಲೇ ಕಕ್ಕುವುದೇ ವಿಮರ್ಶೆಯಾಗಿ ಬಿಟ್ಟಿದೆ. ಇಂಥಾ ವಿಮರ್ಶೆ ಅಥವಾ ವಿಶ್ಲೇಷಣೆಗಳೇ ಸಿನಿಮಾ ಮಾರುಕಟ್ಟೆಯನ್ನು ನಿರ್ಧರಿಸುವಂತಾಗಿರುವುದು ದೊಡ್ಡ ದುರಂತ ಎಂದು ವಿಷಾದಿಸಿದರು.

ಸಿನಿಮಾ ಲೋಕದ ಅನರ್ಘ್ಯ ರತ್ನ ಸತ್ಯಜಿತ್‌ ರೇ ಯಾವತ್ತೂ ಭಾರತೀಯ ಸಿನಿಮಾ ವಿಮರ್ಶಕರನ್ನು ಮೆಚ್ಚಿರಲಿಲ್ಲ. ಸಿನಿಮಾವನ್ನು ಅರ್ಥ ಮಾಡಿಕೊಳ್ಳುವ ಯತ್ನವನ್ನೇ ಮಾಡದವರ ಬಗ್ಗೆ ಅವರಿಗೆ ತೀವ್ರ ಅಸಮಾಧಾನವಿತ್ತು. ಓದುಗರನ್ನು ಪತ್ರಿಕೆ ಯಾವ ರೀತಿ ತಲುಪುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಬಣ್ಣ ಹಚ್ಚಿ ಬರೆಯುವ ಜಾಯಮಾನದವರು ಕೊಡುವ ವಿವರಣೆಗಳೂ ಅಸಮರ್ಪಕವಾಗಿರುತ್ತವೆ. ಈ ರೀತಿ ಬರೆಯುವ ಮುನ್ನ ಗಂಭೀರವಾಗಿ ಯೋಚಿಸುವ ಗೊಡವೆಗೇ ಹೋಗಿರುವುದಿಲ್ಲ. ಮೊದಲು ಸಿನಿಮಾ ಅರ್ಥ ಮಾಡಿಕೊಳ್ಳುವ ಪ್ರಜ್ಞೆ ಬೆಳೆಯಲಿ ಎಂದರು.

ಮುಖಪುಟ / ಸ್ಯಾಂಡಲ್‌ವುಡ್‌

English summary
Girish Kasaravalli throws bat on Film Critics

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada