twitter
    For Quick Alerts
    ALLOW NOTIFICATIONS  
    For Daily Alerts

    ದರ್ಶನ್ ವೃತ್ತಿ ಜೀವನದಲ್ಲೇ ಇಂದು ಮರೆಯಲಾಗದ ದಿನ

    By Bharath Kumar
    |

    Recommended Video

    ದರ್ಶನ್ ವೃತ್ತಿ ಜೀವನದಲ್ಲೇ ಇದು ಮರೆಯಲಾಗದ ದಿನ | Filmibeat Kannada

    ಫೆಬ್ರವರಿ 16 ಕ್ಕಾಗಿ ಡಿ-ಬಾಸ್ ಅಭಿಮಾನಿಗಳು ವರ್ಷವೀಡಿ ಕಾಯ್ತಿರುತ್ತಾರೆ. ಯಾಕಂದ್ರೆ, ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ದಿನ. ಅದಕ್ಕಾಗಿ ಒಂದು ತಿಂಗಳ ಮುಂಚೆಯೇ ದಾಸನ ಭಕ್ತರು ಹಬ್ಬವನ್ನ ಮಾಡ್ತಿದ್ದಾರೆ. ಆದ್ರೆ, ಚಕ್ರವರ್ತಿಯ ಹುಟ್ಟುಹಬ್ಬಕ್ಕಿಂತ ಒಂದು ವಾರದ ಮುಂಚೆ ದರ್ಶನ್ ಗೆ ಮತ್ತೊಂದು ಮಹತ್ವದ ದಿನ ಇದೆ ಅಂದ್ರೆ ನಂಬಲೇಬೇಕು.

    ಹೌದು, ಫೆಬ್ರವರಿ 16 ಕ್ಕಾಗಿ ಹೇಗೆ ದರ್ಶನ್ ಫ್ಯಾನ್ಸ್ ಕಾದು ಕುಂತಿರ್ತಾರೋ, ಅದೇ ರೀತಿ ಫೆಬ್ರವರಿ 8ನೇ ತಾರೀಖು ಬಂದಾಗ, ಸ್ವತಃ ಚಾಲೆಂಜಿಂಗ್ ಸ್ಟಾರ್ ತಮ್ಮ ಜೀವನದ ಹಾದಿಯನ್ನ ಹಿಂತಿರುಗಿ ನೋಡಿಕೊಳ್ಳುತ್ತಾರೆ.

    ಮೆಜೆಸ್ಟಿಕ್ 'ದಾಸ'ನಿಗೆ 15 ವರ್ಷ: ಅಂದು ಹೇಗಿತ್ತು ಗೊತ್ತಾ 'ಮೆಜೆಸ್ಟಿಕ್' ಮೆಜೆಸ್ಟಿಕ್ 'ದಾಸ'ನಿಗೆ 15 ವರ್ಷ: ಅಂದು ಹೇಗಿತ್ತು ಗೊತ್ತಾ 'ಮೆಜೆಸ್ಟಿಕ್'

    ಖ್ಯಾತ ಖಳನಟನ ಮಗನಾಗಿದ್ದರೂ, ಲೈಟ್ ಬಾಯ್ ಆಗಿ, ಪೋಷಕ ನಟನಾಗಿ ನಟಿಸುತ್ತಿದ್ದ ದರ್ಶನ್ ತೂಗುದೀಪ, ಇಂದು ಸ್ಯಾಂಡಲ್ ವುಡ್ ಗೆ ಬಾಸ್ ಆಗಿದ್ದಾರೆ. ಅಷ್ಟಕ್ಕೂ, ಫೆಬ್ರವರಿ 8 ದರ್ಶನ್ ಪಾಲಿಗೆ ಯಾಕೆ ವಿಶೇಷ. ಇದು ದಾಸನಿಗೆ ಮರೆಯಲಾಗದ ದಿನವೇಕೆ? ಆ ದಿನ ಹೇಗಿತ್ತು? ಎಂಬ ಕುತೂಹಲಕಾರಿ ವಿಷ್ಯಗಳನ್ನ ತಿಳಿಯಲು ಈ ಸ್ಟೋರಿ ಓದಿ......

    ದರ್ಶನ್ ನಾಯಕನಾದ ದಿನ

    ದರ್ಶನ್ ನಾಯಕನಾದ ದಿನ

    ಫೆಬ್ರವರಿ 8, 2002.....ದರ್ಶನ್ ತೂಗುದೀಪ, ದಾಸನಾಗಿ ಮೆಜೆಸ್ಟಿಕ್ ಗೆ ಎಂಟ್ರಿ ಕೊಟ್ಟಿದ್ದ ದಿನ. ಪೋಷಕ ಕಲಾವಿದನಾಗಿ ನಟಿಸುತ್ತಿದ್ದ ದರ್ಶನ್, ನಾಯಕನಾಗಿ ಅಭಿನಯದ ಮೊಟ್ಟ ಮೊದಲ ಸಿನಿಮಾ 'ಮೆಜೆಸ್ಟಿಕ್' ರಿಲೀಸ್ ಆದ ದಿನ.

    ಹುಟ್ಟುಹಬ್ಬದ ಹಿನ್ನೆಲೆ ದರ್ಶನ್ ಮನೆ ಮುಂದೆ ಅಭಿಮಾನಿಗಳು ಮಾಡಿದ್ದೇನು?ಹುಟ್ಟುಹಬ್ಬದ ಹಿನ್ನೆಲೆ ದರ್ಶನ್ ಮನೆ ಮುಂದೆ ಅಭಿಮಾನಿಗಳು ಮಾಡಿದ್ದೇನು?

    ದರ್ಶನ್ ವೃತ್ತಿ ಜೀವನವನ್ನೇ ಬದಲಿಸಿದ ಚಿತ್ರ

    ದರ್ಶನ್ ವೃತ್ತಿ ಜೀವನವನ್ನೇ ಬದಲಿಸಿದ ಚಿತ್ರ

    ದರ್ಶನ್ ನಾಯಕನಾಗಿ ಅಭಿನಯದ 'ಮೆಜೆಸ್ಟಿಕ್' ಸಿನಿಮಾ ದಾಸನ ವೃತ್ತಿ ಬದುಕನ್ನೇ ಬದಲಿಸಿತ್ತು. ಮೊದಲ ಚಿತ್ರದಲ್ಲಿಯೇ ಅಮೋಘ ಗೆಲುವು ಕಂಡ ದರ್ಶನ್ ಮತ್ತೆ ಹಿಂತಿರುಗಿ ನೋಡಲೇ ಇಲ್ಲ. 'ಮೆಜೆಸ್ಟಿಕ್' ತೆರೆಕಂಡ ವರ್ಷವೇ 'ಧ್ರುವ', 'ಕಿಟ್ಟಿ', 'ನಿನಗೋಸ್ಕರ' ಎಂಬ ಮೂರು ಚಿತ್ರಗಳು ಬಿಡುಗಡೆಯಾದವು. ಇದಾದ ನಂತರ 2003ರಲ್ಲಿ ಸುಮಾರು 9 ಸಿನಿಮಾ ರಿಲೀಸ್ ಆಗಿದ್ದವು.

    ಅಂಬರೀಷ್ ದಂಪತಿಯ ಆರ್ಶೀವಾದ

    ಅಂಬರೀಷ್ ದಂಪತಿಯ ಆರ್ಶೀವಾದ

    ಅಂದ್ಹಾಗೆ, 'ಮೆಜೆಸ್ಟಿಕ್' ಸಿನಿಮಾದ ಮುಹೂರ್ತ ಸಮಾರಂಭಕ್ಕೆ ರೆಬಲ್ ಸ್ಟಾರ್ ಅಂಬರೀಷ್ ಮತ್ತು ಪತ್ನಿ ಸಮಲತಾ ಇಬ್ಬರು ಆಗಮಿಸಿ ದರ್ಶನ್ ಗೆ ಶುಭಾ ಕೋರಿದ್ದರು. ಆಗಸ್ಟ್ 20, 2001 ರಂದು ಈ ಸಿನಿಮಾ ಸೆಟ್ಟೇರಿತ್ತು. ಇವರಿಬ್ಬರು ಇಂದಿಗೂ ದರ್ಶನ್ ಪಾಲಿಗೆ ವಿಶೇಷವಾದ ವ್ಯಕ್ತಿಗಳೇ.

    ದರ್ಶನ್ ಅಭಿಮಾನಕ್ಕೆ ಅಭಿಮಾನಿಗಳ ಕೈ ಮೀಸಲುದರ್ಶನ್ ಅಭಿಮಾನಕ್ಕೆ ಅಭಿಮಾನಿಗಳ ಕೈ ಮೀಸಲು

    ಮುನಿರತ್ನ ಕ್ಲಾಪ್ ಮಾಡಿದ್ದರು

    ಮುನಿರತ್ನ ಕ್ಲಾಪ್ ಮಾಡಿದ್ದರು

    ದರ್ಶನ್ ಅಭಿನಯದ 50ನೇ ಚಿತ್ರ 'ಕುರುಕ್ಷೇತ್ರ'ವನ್ನ ನಿರ್ಮಾಣ ಮಾಡುತ್ತಿರುವ ಶಾಸಕ ಮತ್ತು ನಿರ್ಮಾಪಕ ಮುನಿರತ್ನ, ಅಂದು 'ಮೆಜೆಸ್ಟಿಕ್' ಚಿತ್ರದ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡಿದ್ದರು. 'ಮೆಜೆಸ್ಟಿಕ್' ಸಿನಿಮಾ 100 ದಿನಗಳ ಪೂರೈಸಿ ಕನ್ನಡದ ಟ್ರೆಂಡ್ ಬದಲಿಸಿತ್ತು.

    ಪಿ.ಎನ್ ಸತ್ಯ ನಿರ್ದೇಶನ

    ಪಿ.ಎನ್ ಸತ್ಯ ನಿರ್ದೇಶನ

    ದರ್ಶನ್ ಅಭಿನಯದ 'ಮೆಜೆಸ್ಟಿಕ್' ಚಿತ್ರವನ್ನ ನಿರ್ದೇಶನ ಮಾಡಿದ್ದು ಪಿ.ಎನ್.ಸತ್ಯ. ಇದು ಸತ್ಯ ಅವರಿಗೂ ಚೊಚ್ಚಲ ಸಿನಿಮಾ. ಈ ಚಿತ್ರದ ನಂತರ ಸತ್ಯ ಅವರ ವೃತ್ತಿ ಜೀವನ ಕೂಡ ದರ್ಶನ್ ರೀತಿಯಲ್ಲೇ ಬದಲಾಯಿತು. ತದ ನಂತರ 'ಡಾನ್', 'ದಾಸ', 'ಶಾಸ್ತ್ರಿ', 'ಗೂಳಿ', 'ಕೆಂಚ', 'ಸರ್ದಾರ' ಅಂತಹ ಸೂಪರ್ ಹಿಟ್ ಸಿನಿಮಾಗಳನ್ನ ನಿರ್ದೇಶನ ಮಾಡಿದರು. ಇನ್ನು ಎಂ.ಜೆ ರಾಮಮೂರ್ತಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದರು. ದರ್ಶನ್ ಪ್ರತಿಬೆಯನ್ನ ಗುರುತಿಸಿ ಅವಕಾಶ ಕೊಟ್ಟ ಖ್ಯಾತಿ ಇವರಿಗೆ ಸಲ್ಲುತ್ತೆ ಎಂದು ಸ್ವತಃ ದರ್ಶನ್ ಹೇಳುತ್ತಾರೆ.

    ದರ್ಶನ್ 51ನೇ ಚಿತ್ರಕ್ಕೆ ಹೊಸ ನಾಯಕಿ ಎಂಟ್ರಿದರ್ಶನ್ 51ನೇ ಚಿತ್ರಕ್ಕೆ ಹೊಸ ನಾಯಕಿ ಎಂಟ್ರಿ

    ಸಾಧು ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯ

    ಸಾಧು ಸಂಗೀತ, ನಾಗೇಂದ್ರ ಪ್ರಸಾದ್ ಸಾಹಿತ್ಯ

    'ಮೆಜೆಸ್ಟಿಕ್' ಚಿತ್ರದಲ್ಲಿ ಒಟ್ಟು ಐದು 5 ಹಾಡುಗಳು ಇದ್ದವು. ಎಲ್ಲವೂ ಸೂಪರ್ ಹಿಟ್ ಆದವು. ಈ ಚಿತ್ರಕ್ಕೆ ಸಾಧುಕೋಕಿಲಾ ಸಂಗೀತ ಸಂಯೋಜನೆ ಮಾಡಿದ್ದರು ಮತ್ತು ಸಾಹಿತಿ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದರು.

    English summary
    February 8 marks the 16th anniversary of the release of Majestic, the film that launched the career of Darshan in a big way. It was the first film in which Darshan played the lead role. Movie was produced by MG Ramamurthy and directed by PN Sathya.
    Friday, February 8, 2019, 17:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X