ಪರಭಾಷೆಗೆ ನೆಗೆದ ಆ ದಿನಗಳು ಆಯಿಲ್ ಕುಮಾರ್!

'ಆ ದಿನಗಳು' ಚಿತ್ರದಲ್ಲಿ ಅಚ್ಯುತ್ ಕುಮಾರ್ ಆಯಿಲ್ ಕುಮಾರನಾಗಿ ಗಮನಸೆಳೆದಿದ್ದರು. ಬಳಿಕ ಪ್ರಕಾಶ್ ರೈ ಅವರ 'ನಾನು ನನ್ನ ಕನಸು' ಚಿತ್ರದಲ್ಲೂ ಅಚ್ಯುತ್ ತಮ್ಮ ಪ್ರತಿಭೆಯನ್ನು ತೋರಿದ್ದರು. ಇನ್ನೇನು ತೆರೆಕಾಣಲಿರುವ 'ಪುಟ್ಟಕ್ಕನ ಹೈವೇ' ಚಿತ್ರದಲ್ಲಿ ತಾವೇನು ಎಂಬುದನ್ನು ಮತ್ತೊಮ್ಮೆ ನಿರೂಪಿಸಿಕೊಳ್ಳಲಿದ್ದಾರೆ.
ತಮಿಳಿನಲ್ಲಿ ಅಭಿನಯಿಸಿದ 'ಕೋ' ಚಿತ್ರ ಅಚ್ಯುತ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಬಾಕ್ಸಾಫೀಸ್‌ನಲ್ಲೂ ಈ ಚಿತ್ರ ಭರ್ಜರಿ ವಸೂಲಿ ಮಾಡಿದೆಯಂತೆ. ಈಗ ಮಲಯಾಳಂನ 'ಚಾಲೆಂಜ್' ಚಿತ್ರ ಅಚ್ಯುತ್‌ರನ್ನು ಹುಡುಕಿಕೊಂಡು ಬಂದಿದೆ. ಪತ್ರಿಕೆಯೊಂದರ ಸಂಪಾದಕನಾಗಿ ಅಚ್ಯುತ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇದೊಂದು ಸಾಹಸಪ್ರಧಾನ ಚಿತ್ರವಂತೆ.
ಕನ್ನಡದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಅಚ್ಯುತ್ ಈಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಸದ್ಯಕ್ಕೆ ಅಚ್ಯುತ್ ಅಭಿನಯದ ಕನ್ನಡದ'ಆಟ' ಮತ್ತು 'ಅದ್ವೈತ' ಚಿತ್ರಗಳು ತೆರೆಕಾಣಬೇಕಾಗಿದೆ. ಅಚ್ಯುತ್ ಕುಮಾರ್ ತಮ್ಮ ನಿಜನಾಮಧೇಯಕ್ಕಿಂತ ಹೆಚ್ಚಾಗಿ ರಂಗಣ್ಣ, ಆಯಿಲ್ ಕುಮಾರ್, ಪ್ರಭಾಕರ್, ಶಾಸ್ತ್ತ್ರಿ ಎಂಬ ತಮ್ಮ ಪಾತ್ರಗಳ ಮೂಲಕ ಗುರುತಿಸಲ್ಪಟ್ಟವರು. ಅಷ್ಟರ ಮಟ್ಟಿಗೆ ಅವರ ಪಾತ್ರಗಳು ಪ್ರಭಾವ ಬೀರಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











