twitter
    For Quick Alerts
    ALLOW NOTIFICATIONS  
    For Daily Alerts

    ಪರಭಾಷೆಗೆ ನೆಗೆದ ಆ ದಿನಗಳು ಆಯಿಲ್ ಕುಮಾರ್!

    By Rajendra
    |

    ಕನ್ನಡದಿಂದ ಪರಭಾಷೆಗೆ ನೆಗೆದ ಅದೆಷ್ಟೋ ನಟರ ಸಾಲು ನಮ್ಮ ಕಣ್ಮುಂದಿದೆ. ಕಿಶೋರ್, ಸುದೀಪ್, ಅವಿನಾಶ್, ನೀನಾಸಂ ಅಶ್ವತ್ಥ್ ಅದೆ ಕ್ಯಾಟಗರಿಗೆ ಸೇರುತ್ತಾರೆ. ಪೋಷಕ ಪಾತ್ರಗಳಲ್ಲಿ ಭಾವನಾತ್ಮಕವಾಗಿ ಅಭಿನಯಿಸುತ್ತಿದ್ದ ಅಚ್ಯುತ್ ಕುಮಾರ್ ಕೂಡ ತಮಿಳಿಗೆ ನೆಗೆದಿದ್ದರು. ಈಗ ಅಲ್ಲಿಂಗ ಅವರ ಪಯಣ ಮಲಯಾಳಂನತ್ತ ಸರಿದಿದೆ.

    'ಆ ದಿನಗಳು' ಚಿತ್ರದಲ್ಲಿ ಅಚ್ಯುತ್ ಕುಮಾರ್ ಆಯಿಲ್ ಕುಮಾರನಾಗಿ ಗಮನಸೆಳೆದಿದ್ದರು. ಬಳಿಕ ಪ್ರಕಾಶ್ ರೈ ಅವರ 'ನಾನು ನನ್ನ ಕನಸು' ಚಿತ್ರದಲ್ಲೂ ಅಚ್ಯುತ್ ತಮ್ಮ ಪ್ರತಿಭೆಯನ್ನು ತೋರಿದ್ದರು. ಇನ್ನೇನು ತೆರೆಕಾಣಲಿರುವ 'ಪುಟ್ಟಕ್ಕನ ಹೈವೇ' ಚಿತ್ರದಲ್ಲಿ ತಾವೇನು ಎಂಬುದನ್ನು ಮತ್ತೊಮ್ಮೆ ನಿರೂಪಿಸಿಕೊಳ್ಳಲಿದ್ದಾರೆ.

    ತಮಿಳಿನಲ್ಲಿ ಅಭಿನಯಿಸಿದ 'ಕೋ' ಚಿತ್ರ ಅಚ್ಯುತ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ. ಬಾಕ್ಸಾಫೀಸ್‌ನಲ್ಲೂ ಈ ಚಿತ್ರ ಭರ್ಜರಿ ವಸೂಲಿ ಮಾಡಿದೆಯಂತೆ. ಈಗ ಮಲಯಾಳಂನ 'ಚಾಲೆಂಜ್' ಚಿತ್ರ ಅಚ್ಯುತ್‌ರನ್ನು ಹುಡುಕಿಕೊಂಡು ಬಂದಿದೆ. ಪತ್ರಿಕೆಯೊಂದರ ಸಂಪಾದಕನಾಗಿ ಅಚ್ಯುತ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಇದೊಂದು ಸಾಹಸಪ್ರಧಾನ ಚಿತ್ರವಂತೆ.

    ಕನ್ನಡದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ ಅಚ್ಯುತ್ ಈಗ ಪರಭಾಷೆಯಲ್ಲಿ ಮಿಂಚುತ್ತಿದ್ದಾರೆ. ಸದ್ಯಕ್ಕೆ ಅಚ್ಯುತ್ ಅಭಿನಯದ ಕನ್ನಡದ'ಆಟ' ಮತ್ತು 'ಅದ್ವೈತ' ಚಿತ್ರಗಳು ತೆರೆಕಾಣಬೇಕಾಗಿದೆ. ಅಚ್ಯುತ್ ಕುಮಾರ್ ತಮ್ಮ ನಿಜನಾಮಧೇಯಕ್ಕಿಂತ ಹೆಚ್ಚಾಗಿ ರಂಗಣ್ಣ, ಆಯಿಲ್ ಕುಮಾರ್, ಪ್ರಭಾಕರ್, ಶಾಸ್ತ್ತ್ರಿ ಎಂಬ ತಮ್ಮ ಪಾತ್ರಗಳ ಮೂಲಕ ಗುರುತಿಸಲ್ಪಟ್ಟವರು. ಅಷ್ಟರ ಮಟ್ಟಿಗೆ ಅವರ ಪಾತ್ರಗಳು ಪ್ರಭಾವ ಬೀರಿವೆ. (ದಟ್ಸ್‌ಕನ್ನಡ ಸಿನಿವಾರ್ತೆ)

    English summary
    Kannada films character artist Achyuth Kumar making debut in Malayalam. The film is titled as Challenge. Kamraj is the producer and director of this film. Kannada actor Avinash recently made debut in Mammooty starring Malayalam film Doubles.
    Wednesday, May 18, 2011, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X