»   » ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಸಿಂಹ

ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ಸಿಂಹ

Subscribe to Filmibeat Kannada

2007 08ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗೆ ನಟ ಮತ್ತು ರಂಗಕರ್ಮಿ ಸಿ.ಆರ್.ಸಿಂಹ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಸಿಂಹ ಅವರು ಸೇರಿದಂತೆ ಸಲಹಾ ಸಮಿತಿಯಲ್ಲಿ ಒಟ್ಟು ಒಂಬತ್ತು ಮಂದಿ ಸದಸ್ಯರಿದ್ದಾರೆ.

ಸದಸ್ಯರ ಹೆಸರುಗಳು ಹೀಗಿವೆ; ನಿರ್ದೇಶಕ ಆನಂದ್ ಪಿ ರಾಜು, ಗಾಯಕಿ ರತ್ನಮಾಲಾ ಪ್ರಕಾಶ್, ರಂಗಭೂಮಿಯಿಂದ ಮಾಲತಿ ಸುಧೀರ್, ನಿರ್ಮಾಪಕ ವಿಜಯ್ ಕುಮಾರ್, ಛಾಯಾಗ್ರಾಹಕ ಅಶೋಕ್ ನಾಯ್ಡು, ನಿರ್ದೇಶಕ ಕೇಸರಿ ಹರವೂ, ಪತ್ರಕರ್ತ ಕೆ ಎಸ್ ವಾಸು ಹಾಗೂ ನಟ ಸಂಕೇತ್ ಕಾಶಿ.

ಪ್ರಶಸ್ತಿಯ ಸ್ಪರ್ಧಾ ಕಣದಲ್ಲಿ 2007ರಲ್ಲಿ ತೆರೆಕಂಡ 47 ಚಿತ್ರಗಳಿವೆ. ಮೊದಲ ಮೂರು ಅತ್ಯುತ್ತಮ ಚಿತ್ರಗಳು, ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳು, ಶ್ರೇಷ್ಠ ನಟ, ನಟಿ ಹಾಗೂ ಇನ್ನಿತರ ವಿಭಾಗಗಳಿಗೆ ಶ್ರೇಷ್ಠರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಸಮಿತಿಗೆ ವಹಿಸಲಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada