ಸುದೀಪ್ 'ಸಿಂಪಲ್ ಹ್ಯೂಮನ್ ಬೀಯಿಂಗ್': ದೀಪಾ

<ul id="pagination-digg"><li class="next"><a href="/news/18-actor-sudeep-actress-dubbing-artist-deepa-aid0172.html">Next »</a></li></ul>

Sudeep
ಮೈ ಆಟೋಗ್ರಾಫ್ ಚಿತ್ರದಲ್ಲಿ ಮೀನಾರ ಪಾತ್ರಕ್ಕೆ ಡಬ್ಬಿಂಗ್ ವಾಯ್ಸ್ ಟೆಸ್ಟ್ ನೀಡಲು ಹೋಗಿದ್ದೆ. ನನ್ನಲಿರುವ ಕಲಾವಿದೆಯನ್ನು ಗುರುತಿಸಿದ ಸುದೀಪ್ ಕಮಲಿ ಪಾತ್ರದಲ್ಲಿ ಅಭಿನಯಸುವಂತೆ ಕೇಳಿಕೊಂಡರು. ಆರಂಭದಲ್ಲಿ ಹತ್ತನೇ ತರಗತಿಯ ಹುಡುಗಿ, ಮುಂದಿನ ದಿನಗಳಲ್ಲಿ ಮೂವತ್ತು ವರ್ಷ ಮೀರಿದ ಹೆಣ್ಣುಮಗಳಿನ ಸವಾಲಿನ ಪಾತ್ರ.

ಸುದೀಪ್ ನಿರ್ದೇಶನದಲ್ಲಿ ನನಗೆ ಅಭಿನಯ ಕಷ್ಟ ಎನಿಸಲಿಲ್ಲ. ಸುದೀಪ್ ಅವರಿಗೆ ಅದು ಮೊದಲ ನಿರ್ದೇಶನದ ಚಿತ್ರ, ನಮಗೆ ಅದು ಹಾಗೆ ಅನಿಸಲೇ ಇಲ್ಲ. ಶಾಟ್ಸ್ ಗಳ ಬಗ್ಗೆ ಖಚಿತತೆ, ಸ್ಟಾರ್ ಎಂಬ ಗಡಸುತನ ಇರದ ಸೌಜನ್ಯಪೂರ್ಣ ನಡವಳಿಕೆಯಿಂದಾಗಿ ನಾನು ಸರಾಗವಾಗಿ ಅಭಿನಯಿಸಿದೆ.

ದೊಡ್ಡ ನಟ ಎಂಬ ಭಯವಿತ್ತು. ಅವರನ್ನು ಮೂಡಿ ಎನ್ನುವವರಿದ್ದಾರೆ. ನನಗೆ ಹಾಗೆ ಅನ್ನಿಸಲಿಲ್ಲ. ಎಲ್ಲಾ ಕಲಾವಿದರಿಗೂ ಒಂದೇ ತರನಾದ ಆತ್ಮೀಯ ಟ್ರೀಟ್ ಮೆಂಟ್ ವಾತಾವರಣ ಅಲ್ಲಿತ್ತು. ಸ್ಟಾರ್ ಗಿರಿಯ ರಭಸ ಇರಲಿಲ್ಲ. ತುಂಬಾ ಚೆನ್ನಾಗಿ ನೋಡಿಕೊಂಡರು.

ಅದಕ್ಕೂ ಮುನ್ನ ಬಾಲನಟಿಯಾಗಿ ದೀಪಾವಳಿ, ಶ್ರೀರಸ್ತು ಶುಭಮಸ್ತು, ಪುಟ್ಟಿ ಚಿತ್ರಗಳಲ್ಲಿ ಅಭಿನಯಿಸಿದ್ದೆ. ಪುಟ್ಟಿ ಚಿತ್ರ ಅಭಿನಯಕ್ಕೆ ಶ್ರೇಷ್ಠ ಬಾಲನಟಿ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ನೀಡಿತ್ತು. ನಂತರ #73 ಶಾಂತಿ ನಿವಾಸದಲ್ಲಿ ನಾಯಕಿಯಾಗಿ ಅಭಿನಯಿಸಿದೆ.

ಜಸ್ಟ್ ಮಾತ್ ಮಾತಲ್ಲಿ ಚಿತ್ರದಲ್ಲಿ ಅಭಿನಯ ಇರದಿದ್ದರೂ ಚಿತ್ರದ ನಾಯಕಿಗೆ ಡಬ್ಬಿಂಗ್ ಮಾಡಿದ್ದೇನೆ. ಶ್ರೇಷ್ಠ ಕಂಠದಾನ ಕಲಾವಿದೆ ಎಂಬ ಪ್ರಶಸ್ತಿ ಮತ್ತೆ ಸಿಕ್ಕಿತು. ಅದಕ್ಕೂ ಮುನ್ನ ಇದೇ ಪ್ರಶಸ್ತಿ ರಂಗ ಎಸ್ ಎಸ್ ಎಲ್ ಸಿ , ಅರಸು ಚಿತ್ರಗಳಿಗೂ ದೊರಕಿತ್ತು. ಮುಂದಿನ ಪುಟದಲ್ಲಿದೆ, ನೋಡಿ....

<ul id="pagination-digg"><li class="next"><a href="/news/18-actor-sudeep-actress-dubbing-artist-deepa-aid0172.html">Next »</a></li></ul>

More from Filmibeat

English summary
Actress cum Dubbing Artist Deepa told that Actor Kichcha Sudeep is simple Human Being. &#13; &#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X