»   » ಲಗೋರಿ ಆಟ ರದ್ದಾಗಿ ಪುನೀತ್ ಬೆಲೆ ಹೆಚ್ಚಾಗಿದೆ

ಲಗೋರಿ ಆಟ ರದ್ದಾಗಿ ಪುನೀತ್ ಬೆಲೆ ಹೆಚ್ಚಾಗಿದೆ

Posted By: *ಜಯಂತಿ
Subscribe to Filmibeat Kannada
puneeth raj
ಬಿಂದಾಸ್, ವಂಶಿ ಮಕಾಡೆಯಾದ ಮೇಲೆ ಪುನೀತ್ ಹಾರ್ಸ್‌ಪವರ್ ಕಡಿಮೆಯಾಗಿದೆ ಅಂತ ಗಾಂಧೀನಗರ ಮಾತಾಡಿಕೊಳ್ಳುತ್ತಿದೆ. ಬಿಡುಗಡೆಗೆ ಮೊದಲೇ ವಂಶಿ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಏನೋ ಒಳ್ಳೆ ರೇಟಿಗೆ ವಿತರಣೆ ಹಕ್ಕು ಮಾರಿಕೊಂಡು ಸೇಫ್ ಆಗಿಬಿಟ್ಟರು. ಆದರೆ, ವಿತರಕರು ಹಾಕಿದ ಬಂಡವಾಳವಾದರೂ ಗಿಟ್ಟಲೆಂದು ಪರದಾಡುತ್ತಿದ್ದಾರೆ. ಹಾಗೂಹೀಗೂ ಸಪ್ನಾ ಚಿತ್ರಮಂದಿರದಲ್ಲಿ ನೂರನೇ ದಿನದವರೆಗೆ ಚಿತ್ರವನ್ನು ತಳ್ಳಿ ಕೃತಾರ್ಥರಾಗುವ ಉಸಾಬರಿ ಬೇರೆ.

ಸಾಮಾನ್ಯವಾಗಿ ಪುನೀತ್ ಚಿತ್ರಗಳು ಮಿನಿಮಮ್ ಗ್ಯಾರಂಟಿಯವು. ಆದರೆ, ಬಿಂದಾಸ್ ನಂತರ ಅವರ ಮೇಲಿನ ಈ ನಿರೀಕ್ಷೆ ಹುಸಿಯಾಗಿದೆ. ಆದಾಗ್ಯೂ ನಿರ್ಮಾಪಕರು ಮಾತ್ರ ಅವರ ಕಾಲ್‌ಶೀಟ್ ಪಡೆಯುವುದಕ್ಕೆ ಈಗಲೂ ನಾಮುಂದು ತಾಮುಂದು ಅಂತಿದಾರೆ. ಪ್ರೇಮ್ ನಿರ್ದೇಶನದ ರಾಜ್ ನಂತರ ಪುನೀತ್ ಕಾಲ್‌ಶೀಟ್ ಖಾಲಿಯಿದೆ. ಯಾಕೆಂದರೆ, ಲಗೋರಿ ಚಿತ್ರಕ್ಕೆಂದು ದೀರ್ಘ ಕಾಲವನ್ನು ಅವರು ಮೀಸಲಿಟ್ಟಿದ್ದರು. ಲಗೋರಿ ಆಟ ರದ್ದಾಗಿರುವುದರಿಂದ ಆ ಡೇಟ್ಸ್‌ನ ಬೆಲೆ ಇನ್ನೂ ಒಂದಿಷ್ಟು ಜಾಸ್ತಿಯೇ ಹೌದು.

ಉಲ್ಲಾಸ ಉತ್ಸಾಹ ಸಿನಿಮಾಕ್ಕೆ ಗಣೇಶ ಒಂದು ಕೋಟಿ 26 ಲಕ್ಷ ಎಣಿಸಿದ್ದೇ ತಡ ವ್ಯವಹಾರದ ಲೆಕ್ಕಾಚಾರದಲ್ಲಿ ಸಾಕಷ್ಟು ಏರುಪೇರಾಗಿದೆ. ಮೊನ್ನೆಯಷ್ಟೇ ಪುನೀತ್ ಮನೆಗೆ ಬಂದು ಆಂಧ್ರಾವಾಲಾಗಳ ತಂಡವೊಂದು ಮಾತಾಡಿಕೊಂಡು ಹೋಗಿದೆ. ಆ ತಂಡ ಯಾವುದು ಅನ್ನೋದನ್ನು ರಾಜ್ ಕುಟುಂಬ ಇನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿದೆ. ಹಾಗೆ ಬಂದ ನಿರ್ಮಾಪಕರಿಗೆ ಪುನೀತ್ ಹೇಳಿರುವ ರೇಟು ಬರೋಬ್ಬರಿ ಎರಡು ಕೋಟಿ. ಈ ವ್ಯವಹಾರ ಕುದುರಿದರೆ ಪುನೀತ್ ದರ ಒಂದೇ ವರ್ಷದಲ್ಲಿ ದುಪ್ಪಟ್ಟಾಗುವುದಂತೂ ಹೌದು.

ಇದರ ಬಾಟಮ್ ಲೈನ್ ಇಷ್ಟೆ,ಕುಸಿದಿರುವುದು ಗಾಂಧಿನಗರದ ಗ್ರಾಫ್ ಅಷ್ಟೆ; ನಾಯಕ ನಟರದ್ದಲ್ಲ! ಈಗ ಹೇಳಿ, ಪುನೀತ್ ಹಾರ್ಸ್‌ಪವರ್ ಜಾಸ್ತಿಯೋ, ಕಡಿಮೆಯೋ?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada