ಕಿಚ್ಟ ಸುದೀಪ್ ಹೊಸ ಮನೆಗೆ ಸದ್ಯದಲ್ಲಿಯೇ ಶಿಫ್ಟ್
ಕನ್ನಡದ ಹೆಮ್ಮೆಯ ನಟ ಸುದೀಪ್ ಹೊಸತನಕ್ಕೆ ತುಡಿಯುವ ನಟ. ಅವರೀಗ ಹೊಸ ಮನೆಗೂ ಹೋಗುತ್ತಿದ್ದಾರೆ. ಹೆಬ್ಬಾಳದ 'ಎಸ್ಟೀಮ್ ಮಾಲ್' ಸಮೀಪ, ಮುಖ್ಯರಸ್ತೆಯಲ್ಲೇ ಸುದೀಪ್ ರ ಭರ್ಜರಿ ಬಂಗಲೆ ತಲೆಎತ್ತುತ್ತಿದೆ. ಜೆ.ಪಿ ನಗರದಲ್ಲಿ ಅವರಪ್ಪ ಸರೋವರ ಸಂಜೀವ್ ಕಟ್ಟಿಸಿರುವ ಬಂಗಲೆ ಹಾಗೇ ಇದೆ. ಮತ್ತೆ ಯಾಕೆ ಸುದೀಪ್ ಗೆ ಹೊಸ ಮನೆ ಎಂಬುದು ಎಲ್ಲರ ಪ್ರಶ್ನೆ.
ಅದಕ್ಕುತ್ತರವಾಗಿ ಸುದೀಪ್ "ಶೂಟಿಂಗ್ ಸ್ಪಾಟ್ ಗೆ ಜೆ.ಪಿ. ನಗರ ತುಂಬಾ ದೂರ. ಬೆಂಗಳೂರು ಸೌತ್ ನಲ್ಲಿ ಶೂಟಿಂಗ್ ಸ್ಪಾಟ್ ಇರುವುದು ಕಡಿಮೆ. ಚಿತ್ರೀಕರಣ ತಾಣವೆಲ್ಲಾ ದೇವನಹಳ್ಳಿಯ ಆಸುಪಾಸೇ ಇದೆ ಹಾಗೂ ಏರ್ ಪೋರ್ಟ್ ಗೂ ಹತ್ತಿರ ಇರುವುದರಿಂದ ಅಲ್ಲಿ ಮನೆ ಇದ್ದರೆ ಅನುಕೂಲ. ಅಪ್ಪ-ಅಮ್ಮ ಕೂಡ ನನ್ನ ಸಂಸಾರದ ಜೊತೆ ಇರುತ್ತಾರೆ. ಈಗಿರುವ ಮನೆಯನ್ನು ಸಹೋದರಿ ಉಪಯೋಗಿಸುವ ಸಾಧ್ಯತೆ ಇದೆ" ಎಂದಿದ್ದಾರೆ.
'ವಿಷ್ಣುವರ್ಧನ' ಚಿತ್ರದ ಮೂಲಕ ಭರ್ಜರಿ ಯಶಸ್ಸಿನ ನಿರೀಕ್ಷೆಯಲ್ಲಿದ್ದಾರೆ ಈ ನಮ್ಮ ಕಿಚ್ಚ. ಸದ್ಯಕ್ಕಂತೂ ತೆಲುಗು ಚಿತ್ರ 'ಈಗ' ಶೂಟಿಂಗ್ ನಲ್ಲಿ ಬ್ಯುಸಿ. ಹೈದರಾಬಾದ್, ಮುಂಬೈ ಅಂತ ಓಡಾಡಿಕೊಂಡಿದ್ದಾರೆ ಸುದೀಪ್. ನಂತರ ವರದನಾಯಕ ಚಿತ್ರಕ್ಕೆ ಬರಲಿದ್ದಾರೆ. ಹೀಗೇ ಸಾಗಲಿದೆ ಸುದೀಪ್ ಸಿನಿಮಾ ಜರ್ನಿ. (ಒನ್ ಇಂಡಿಯಾ ಕನ್ನಡ)


Click it and Unblock the Notifications











