twitter
    For Quick Alerts
    ALLOW NOTIFICATIONS  
    For Daily Alerts

    ಕುಂದಾಪುರದ 'ಬುದ್ಧಿವಂತ'ನಿಗೆ ಹುಟ್ಟುಹಬ್ಬ ಸಂಭ್ರಮ

    By Rajendra
    |

    ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದಂತಹ ಛಾಪು ಮೂಡಿಸಿದ ಕುಂದಾಪುರದ ಹುಡುಗ ಉಪೇಂದ್ರನಿಗೆ ಹುಟ್ಟುಹಬ್ಬದ ಶುಭಾಶಯಗಳು. ಕನ್ನಡ ಚಿತ್ರರಂಗಕ್ಕೆ ಸಿಕ್ಕಂತಹ 'ಬುದ್ಧಿವಂತ' ನಿರ್ದೇಶಕ ಎಂದರೂ ತಪ್ಪಾಗಲಾರದು. ಸೆಪ್ಟೆಂಬರ್18ರ ಮಧ್ಯರಾತ್ರಿ ಕಳೆಯುತ್ತಿದ್ದಂತೆ ಕೇಕ್ ಕತ್ತರಿಸುವ ಮೂಲಕ ಉಪೇಂದ್ರ 43ನೇ ವಸಂತವನ್ನು ಸ್ವಾಗತಿಸಿದರು.

    ಶನಿವಾರ ಬೆಳಗ್ಗೆ ಅವರ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಉಪ್ಪಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಸಂಭ್ರಮಿಸಿದರು. ಇದು ನನ್ನ ಹುಟ್ಟುಹಬ್ಬವಲ್ಲ, ಇದು ಅಭಿಮಾನಿಗಳ ಹುಟ್ಟುಹಬ್ಬ ಎಂದು ಉಪ್ಪಿ ಈ ಸಂದರ್ಭದಲ್ಲಿ ಹೇಳಿದರು. ಅಭಿಮಾನಿಗಳ ಒತ್ತಾಯದ ಮೇರೆಗೆ 'ರಕ್ತಕಣ್ಣೀರು' ಚಿತ್ರದಸೂಪರ್ ಡೈಲಾಗ್‌ ಹೇಳಿ ಚಪ್ಪಾಳೆ, ಶಿಳ್ಳೆ ಗಿಟ್ಟಿಸಿದರು.

    "ಪ್ಯೂಚರ್ ಇಲ್ದಿರೋ ದೇಶ, ನೇಚರ್ ಇಲ್ದಿರೋ ನಾಡು, ಟೀಚರ್ಸ್ ಇಲ್ದಿರೋ ಸ್ಕೂಲ್ಸು, ಲೀಡರ್ಸ್ ಇಲ್ದಿರೋ ಪಾರ್ಟೀಸ್, ಪ್ಲಾನಿಂಗ್ ಇಲ್ದಿರೋ ಫ್ಯಾಮಿಲೀಸು, ಒಬ್ಬೊಬ್ಬನಿಗೆ ಡಜನ್ ಡಜನ್ ಮಕ್ಳು, ಅದ್ರಲ್ಲಿ ಅರ್ಧ ಪುಕ್ಲು, ಇನ್ನರ್ಧ ತಿಕ್ಳು ತಿಕ್ಳು...." ಎನ್ನುತ್ತಿದ್ದರೆ ಪ್ರೇಕ್ಷಕರು ಕ್ಲೀನ್ ಬೌಲ್ಡ್ ಆಗದೆ ಇರಲು ಸಾಧ್ಯವೆ? ಉಪೇಂದ್ರ ಡೈಲಾಗ್‍ನ ಮತ್ತೊಂದು ವರಸೆ ಇಲ್ಲಿದೆ ಓದಿ.

    ಅಣ್ಣ: ಕಳ್ಳತನ ಮಾಡೋದಕ್ಕೆ ನಾಚಿಕೆ ಆಗೋಲ್ವಾ?
    ತಮ್ಮ: ನೀನೂ ಕಳ್ಳತನ ಮಾಡ್ತೀಯಲ್ಲ, ನಿಂಗೆ ನಾಚಿಕೆ ಆಗೋಲ್ವಾ?
    ಅಣ್ಣ: ನಾನೆಲ್ಲಿ ಕಳ್ಳತನ ಮಾಡ್ತೀನಿ?
    ತಮ್ಮ: ಹಾಲು ಕುಡಿಯೋದಿಲ್ವಾ ನೀನು? ಹಸು ಹಾಲಿರೋದು ಕರುವಿಗಾಗಿ, ಅದನ್ನು ನೀನು ಕುಡಿದರೆ ಕಳ್ಳತನ.
    ಅಣ್ಣ: ಕರುವಿಗೆ ಬೇಕಾದಷ್ಟ ಬಿಟ್ಟು ಜಾಸ್ತಿ ಇರೋದನ್ನು ಮಾತ್ರ ತಗೋತೀನಿ ನಾನು.
    ತಮ್ಮ: ನಾನು ಅಷ್ಟೇ, ತುಂಬಾ ದುಡ್ಡಿರೋರ ಬಳಿ ಸ್ವಲ್ಪ ಕದೀತೀನಿ ಅಷ್ಟೆ.

    Saturday, September 18, 2010, 14:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X