»   » ಕಥೆ, ಚಿತ್ರಕಥೆ ಮತ್ತು ಸಂಭಾಷಣೆ-ಉಪೇಂದ್ರ

ಕಥೆ, ಚಿತ್ರಕಥೆ ಮತ್ತು ಸಂಭಾಷಣೆ-ಉಪೇಂದ್ರ

Posted By:
Subscribe to Filmibeat Kannada
Upendra
ಸೂಪರ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಹಿರಿಹಿರಿ ಹಿಗ್ಗುವ ಸುದ್ದಿಯೊಂದು ಬಂದಿದೆ. ಸುದೀರ್ಘ ವಿರಾಮದ ನಂತರ ಅವರು ಮತ್ತೆ ಪೆನ್ನು, ಕಾಗದಗಳಿಗೆ ಕೆಲಸ ಕೊಟ್ಟಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಹೆಣೆದಿರುವ ಅವರ ಚಿತ್ರ ಇತ್ತೀಚೆಗಷ್ಟೆ ಮುಹೂರ್ತ ಮುಗಿಸಿಕೊಂಡಿದೆ.

ಕೆ.ಸಾಗರ್ ಮತ್ತು ಕೆವಿ ರೆಡ್ಡಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶೀರ್ಷಿಕೆ ಇನ್ನು ಇಟ್ಟಿಲ್ಲ. ಸಜ್ಜನ್ ರಾವ್ ವೃತ್ತದ ಶ್ರೀ ಸುಬ್ರಮಣ್ಯೇಶ್ವರ ದೇವಾಲಯದಲ್ಲಿ ಮುಹೂರ್ತ ಮುಗಿಸಿಕೊಂಡಿರುವ ಈ ಚಿತ್ರ ಶೀಘ್ರದಲ್ಲೇ ಸೆಟ್ಟೇರಲಿದೆ. ಉಪೇಂದ್ರ ಚಿತ್ರಕಥೆ ಎಂದರೆ ಹೊಸತನ, ಭಾವನೆಗಳ ತುಯ್ದಾಟ, ಪ್ರೇಕ್ಷಕರನ್ನು ಹುಚ್ಚೆಬ್ಬಿಸುವ ಸಂಭಾಷಣೆಗಳು ನೆನಪಾಗುತ್ತವೆ. ಈ ಜೀವಂತಿಕೆಯನ್ನೇ ಪ್ರೇಕ್ಷಕರೂ ನಿರೀಕ್ಷಿಸುತ್ತಾರೆ.

ತೆಲುಗಿನ ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಸಂಪತ್ ನಂದಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಜಾನಿ ಲಾಲ್ ಛಾಯಾಗ್ರಹಣ ಮತ್ತು ಗುರು ಕಿರಣ್ ಸಂಗೀತ ಈ ಚಿತ್ರಕ್ಕಿದೆ. ಹೆಚ್ ಟುಓ ಚಿತ್ರದ ನಂತರ ಉಪೇಂದ್ರ ಯಾಕೋ ಏನೋ ಚಿತ್ರಕಥೆ, ಸಂಭಾಷಣೆ ಬರೆಯುವುದನ್ನು ಮರೆತೆ ಬಿಟ್ಟಿದ್ದರು. ಅಂದಹಾಗೆ ಈ ಚಿತ್ರಕ್ಕೆ ಉಪೇಂದ್ರ ಅವರೆ ನಾಯಕ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada