ಅವಳಿ ಜವಳಿ ನಿರೀಕ್ಷೆಯಲ್ಲಿ ಶ್ರೀಮತಿ ಸೆಲೀನಾ ಜೇಟ್ಲಿ
ಬಾಲಿವುಡ್‌ನಲ್ಲಿ ಈಗ ಪರ್ವಕಾಲ. ಐಶ್ವರ್ಯ ರೈ, ಲಾರಾ ದತ್ತ ಕಂದನ ನಿರೀಕ್ಷೆಯಲ್ಲಿದ್ದಾರೆ. ಈಗ ಇದೇ ಕ್ಯಾಟಗರಿಗೆ ಮತ್ತೊಬ್ಬ ಬಾಲಿವುಡ್ ಚೆಲುವೆ ಸೆಲೀನಾ ಜೇಟ್ಲಿ ಹೊಸದಾಗಿ ಸೇರ್ಪಡೆಯಾಗಿದ್ದಾರೆ. ದುಬೈ ಮೂಲದ ಹೋಟೆಲ್ ಉದ್ಯಮಿ ಪೀಟರ್ ಹಗ್ ಅವರನ್ನು ಸೆಲೀನಾ ವರಿಸಿದ್ದರು.
ಅವರ ದಾಂಪತ್ಯದ ಫಲವಾಗಿ ಸೆಲೀನಾ ಈಗ ಗರ್ಭಿಣಿ. ಈ ಬಗ್ಗೆ ಟ್ವೀಟ್ ಮಾಡಿರುವ ಸೆಲೀನಾ ತಾವು ಅವಳಿ ಜವಳಿ ಕಂದಮ್ಮಗಳ ನಿರೀಕ್ಷೆಯಲ್ಲಿದ್ದೇನೆ ಎಂದಿದ್ದಾರೆ. "ಡಿಯರ್ ಫ್ರೆಂಡ್ಸ್ ಪೀಟರ್ ಮತ್ತು ನಾನು ನಿಮ್ಮ ಶುಭಹಾರೈಕೆ ಬಯಸುತ್ತಿದ್ದೇನೆ. ಈಗ ನಾನು ಪರಿಪೂರ್ಣ ಮಹಿಳೆ" ಎಂದು ಟ್ವೀಟ್ ಮಾಡಿದ್ದಾರೆ.
ಸೆಲೀನಾ ಮದುವೆ ಪೀಟರ್ ಜೊತೆ ತರಾತುರಿಯಲ್ಲಿ ನಡೆದುಹೋಗಿತ್ತು. ಮದುವೆ ಮುಂಚೆಯೇ ಸೆಲೀನಾ ಗರ್ಭಿಣಿ ಆಗಿದ್ದರು. ಹಾಗಾಗಿ ಇವರ ಮದುವೆ ಅರ್ಜೆಂಟಾಗಿ ನಡೆದು ಹೋಗಿತ್ತು ಎನ್ನಲಾಗಿತ್ತು. ಆದರೆ ಈ ಸುದ್ದಿಯನ್ನು ಸೆಲೀನಾ ಅಲ್ಲಗಳೆದಿದ್ದರು. ಕನ್ನಡದಲ್ಲಿ ಉಪೇಂದ್ರ ಜೊತೆ 'ಶ್ರೀಮತಿ' ಚಿತ್ರದಲ್ಲಿ ಸೆಲೀನಾ ಅಭಿನಯಿಸಿದ್ದಾರೆ. (ಏಜೆನ್ಸೀಸ್)
More from Filmibeat
English summary
Bollywood actress Celina Jaitley is in the family way. She is married to Dubai based hotelier Peter Haag earlier this year declared on twitter that she is pregnant. The actress is reportedly expecting twins.


Click it and Unblock the Notifications











