ಮಾಲಾಶ್ರೀಗೇ 'ಶಕ್ತಿ' ಕೊಟ್ಟ ದಾವಣಗೆರೆ ಬೆಣ್ಣೆ ದೋಸೆ

By Rajendra

'ಗುಂಡಿನ ಹುಡುಗಿ' ಮಾಲಾಶ್ರೀ ತಮ್ಮ ಡಿಶುಂ ಡಿಶುಂ ಚಿತ್ರಗಳಿಂದ ಈಗ ಡ್ಯಾಶ್ ಅಂಡ್ ಡೇರಿಂಗ್ ಲೇಡಿಯಾಗಿ ಬದಲಾಗಿದ್ದಾರೆ. ತಮ್ಮ ಇತ್ತೀಚೆಗೆ 'ಶಕ್ತಿ' ಚಿತ್ರಕ್ಕೆ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಅನ್ಯಾಯ, ಅಕ್ರಮಗಳ ವಿರುದ್ಧ ಮಾಲಾಶ್ರೀ ಸಿಡಿದೇಳುತ್ತಾರೆ.

ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರ ಇದಾಗಿದೆ ಎಂದು ಮಾಲಾಶ್ರೀ ಅಭಿಪ್ರಾಯಪಟ್ಟರು. ಅವರು ಮಂಗಳವಾರ (ಜ.17) ದಾವಣಗೆರೆಗೆ ಭೇಟಿ ನೀಡಿ ಚಿತ್ರದ ತಮ್ಮ 'ಶಕ್ತಿ' ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಅವರು ಜಗದ್ವಿಖ್ಯಾತ ದಾವಣಗೆರೆ ಬೆಣ್ಣೆ ದೋಸೆ ಸವಿದು ಆಹಾ ಏನು ರುಚಿ ಎಂದರು. ದಾವಣಗೆರೆ ಅಭಿಮಾನಿಗಳು ಅವರ 'ಶಕ್ತಿ' ಚಿತ್ರವನ್ನು ಬೆಣ್ಣೆ ದೋಸೆಯಂತೆಯೇ ಸವಿದಿದ್ದಾರೆ.

ಅಭಿಮಾನಿಗಳು ತಮ್ಮ ಮೇಲೆ ತೋರಿಸುತ್ತಿರುವ ಪ್ರೇಮಾಭಿಮಾನಕ್ಕೆ ನಾನು ಚಿರರುಣಿಯಾಗಿದ್ದೇನೆ. ಭವಿಷ್ಯದಲ್ಲೂ ಇದೇ ರೀತಿಯ ವಿಭಿನ್ನ ಪಾತ್ರಗಳನ್ನು ಪೋಷಿಸುವುದಾಗಿ ಮಾಲಾಶ್ರೀ ತಿಳಿಸಿದರು. ತಾರೆ ಹೇಮಾ ಚೌದರಿ ಮಾತನಾಡುತ್ತಾ, 'ಶಕ್ತಿ' ಚಿತ್ರ ಜಯಭೇರಿ ಬಾರಿಸಿರುವುದು ನನಗೆ ತುಂಬ ಸಂತಸ ತಂದಿದೆ ಎಂದರು. ಚಿತ್ರದ ನಿರ್ಮಾಪಕ ರಾಮು ಸೇರಿದಂತೆ ಇತರರು ಉಪಸ್ಥಿತರಿದ್ದರು. ದಾವಣಗೆರೆಯಿಂದ ಚಿತ್ರತಂಡ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಿತು. (ಒನ್‌ಇಂಡಿಯಾ ಕನ್ನಡ)

More from Filmibeat

English summary
Action Queen Malashri visits Davangere for success of her latest movie Shakti on Tuesday Jan 17th. Meanwhile she likes Davangere Benne Dose. Shakti is a good action film solely for the masses said the actress.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X