ನಯನತಾರಾ ದೇಹತೂಕ ಐವತ್ತು ಕೆಜಿ ಅಷ್ಟೇ!
ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವನನ್ನು ಮದುವೆಯಾಗಲು ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಯನತಾರಾ ಇಂದು(ಆ.18) ಕೇರಳದ ದೇಗುಲದಲ್ಲಿ ತುಲಾಭಾರ ಮಾಡಿಸಿಕೊಂಡಿದ್ದಾರೆ.
ಅಳಪ್ಪುಳ ಜಿಲ್ಲೆಯ ಚೆಟ್ಟಿಕುಲಂಗರ ಶ್ರೀಭಗವತಿ ದೇಗುಲಕ್ಕೆ ನಯನತಾರಾ ತನ್ನ ಗೆಳತಿ ಲತಾ ಎಂಬುವರ ಜೊತೆ ಬೆಳಗ್ಗೆ 10 ಗಂಟೆಗೆ ಭೇಟಿ ನೀಡಿದ್ದಾರೆ. ಚಂಡಾಟಂ ಪೂಜೆಯಲ್ಲಿ ಭಾಗವಹಿಸಿ ಭಕ್ತಿಯಿಂದ ದೇವರಲ್ಲಿ ಹರಕೆ ಸಲ್ಲಿಸಿದ್ದಾರೆ.
ಮೂಲಗಳ ಪ್ರಕಾರ ತುಲಾಭಾರಕ್ಕೆ ಬೆಲ್ಲವನ್ನು ಬಳಸಲಾಗಿತ್ತು. 50 ಕೆ.ಜಿ ತೂಗಿದ ಬೆಲ್ಲವನ್ನು ದೇವರಿಗೆ ಅರ್ಪಿಸಲಾಗಿದೆ. ಪೂಜಾ ಕೈಂಕರ್ಯ ನಂತರ ಬಡ ಬಗ್ಗರ ಹೊಟ್ಟೆಗೆ ಪ್ರಸಾದ ರೂಪದಲ್ಲಿ ಅನ್ನದಾನ ಕಾರ್ಯಕ್ರಮವನ್ನು ನಯನತಾರಾ ನಡೆಸಿದ್ದಾರೆ. ದೇಗುಲದ ಗೋಪುರಕ್ಕೆ ಒಂದಿಷ್ಟು ವಂತಿಗೆ ನೀಡಿ ನಂತರ ಮನೆಗೆ ತೆರಳಿದ್ದಾರೆ.
2009ರಲ್ಲೂ ಇದೇ ದೇಗುಲದಲ್ಲಿ ತುಲಾಭಾರ ಮಾಡಿಸಿಕೊಂಡಿದ್ದ ನಯನತಾರಾ ತೂಕ ಆಗ ಸ್ವಲ್ಪ ಹೆಚ್ಚಿತ್ತು ಎನ್ನಲಾಗಿದೆ. ಆಗ ತಕ್ಕಡಿಯಲ್ಲಿ ಒಂದೆಡೆ ಬಾಳೆಹಣ್ಣು, ಇನ್ನೊಂದೆಡೆ ನಯನತಾರಾರನ್ನು ಇಟ್ಟು ತೂಗಿ ಅಳೆಯಲಾಗಿತ್ತು.
English summary
Nayantara, who embraced the Hinduism by getting converted from the Christianity, performed Thulabaram at Chettikulangara Sree Bhagavathi temple, Alappuzha district, Kerala. Nayantara reportedly offered 50 kilos of jaggery to the temple


Click it and Unblock the Notifications