For Quick Alerts
  ALLOW NOTIFICATIONS  
  For Daily Alerts

  ಆಕ್ಷನ್ ಕ್ವೀನ್ ಮಾಲಾಶ್ರೀ ದಾರಿಯಲ್ಲಿ ಶುಭಾ ಪೂಂಜಾ

  |

  ಕನ್ನಡದ ನಟಿಮಣಿಯರಿಗೆ ಈಗ ಮಾಲಾಶ್ರೀ ಆದರ್ಶವಾಗಿದ್ದಾರೆ. ಕಾರಣ ಒಬ್ಬರಾಗಿ ಮಾಲಾಶ್ರೀ ದಾರಿಯಲ್ಲಿ ಸಾಗುತ್ತಿದ್ದಾರೆ. ಕನಸಿನ ರಾಣಿ, ಆಕ್ಷನ್ ಕ್ವೀನ್ ಮುಂತಾದ ಬಿರುದು ಗಳಿಸಿ ಕನ್ನಡಿಗರ ಮನ-ಮನೆ ಮಾತಾಗಿರುವ ಮಾಲಾಶ್ರೀ ತಾರಾಮೌಲ್ಯಕ್ಕೆ ಈಗಿನ ನಟಿಯರು ಶರಣಾಗಿದ್ದಾರೆ. ಆದರೆ ಯಾರೂ ಅವರ ಹತ್ತಿರವೂ ಸುಳಿಯಲಾಗಲಿಲ್ಲ ಎಂಬುದು ಬೇರೆ ಮಾತು.

  ಪ್ರಿಯಾ ಹಾಸನ್ ಹಾಗೂ ಆಯೇಷಾ ಸದ್ಯ ಕನ್ನಡದಲ್ಲಿ ಮಾಲಾಶ್ರೀ ದಾರಿಯಲ್ಲಿ ಸಾಗುತ್ತಿರುವ ನಟಿಯರು. ಅದಕ್ಕೀಗ ಹೊಸ ಸೇರ್ಪಡೆ ನಟಿ ಶುಭಾ ಪೂಂಜಾ ಸುದ್ದಿ. ಮೊಗ್ಗಿನ ಮನಸ್ಸು ಚಿತ್ರದಲ್ಲಿ ಗಮನಸೆಳೆದ ಶುಭಾ, ನಂತರ ಯಾಕೋ ಸಾಲು ಸಾಲು ಚಿತ್ರಗಳ ಸೋಲಿಗೆ ಸಿಲುಕಿ ನಲುಗಿಹೋಗಿದ್ದರು. ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡರಲ್ಲೂ ಹೆಸರು ಕೆಡಿಸಿಕೊಂಡು ನೇಪಥ್ಯಕ್ಕೆ ಸರಿದಿದ್ದರು.

  ಮತ್ತೆ, ಅಣಜಿ ನಾಗರಾಜ್ ನಿರ್ಮಾಣ ಹಾಗೂ 'ಆ ದಿನಗಳು' ಸತ್ಯ ನಾಯಕತ್ವದ ಚಿತ್ರ 'ಬೀರ'ದಲ್ಲಿ ನಾಯಕಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡರು ಶುಭಾ ಪೂಂಜಾ. 'ನಮ್ಮ ಪ್ರೀತಿಯ ರಾಮು' ಎಂಬ ಸದಭಿರುಚಿ ಚಿತ್ರದ ನಿರ್ದೆಶಕ ಸಂಜಯ್ ಈ ಚಿತ್ರಕ್ಕೆ ನಿರ್ದೆಶಕರು. ಸೆಟ್ಟೇರಿ ತುಂಬಾ ದಿನಗಳಾಗಿವೆ. ಸಾಕಷ್ಟು ಶೂಟಿಂಗ್ ಕೂಡ ನಡೆದಿರುವ ಈ ಚಿತ್ರ ಈಗ ಯಾವ ಹಂತದಲ್ಲಿದೆ ಎಂಬ ಸರಿಯಾದ ಸುದ್ದಿ ಇಲ್ಲ. ಇನ್ನೊಬ್ಬಳು ಮಾಲಾಶ್ರೀ ಆಗುವ ಶುಭಾ ಆಸೆ ಸದ್ಯಕ್ಕೆ ನೆರವೇರಿಲ್ಲ. (ಒನ್ ಇಂಡಿಯಾ ಕನ್ನಡ)

  English summary
  Actress shubha poonja goes towards Malashri's way. She turned to action Movie. Now she acts in movie action based 'Beera'. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X