ದೀಪಿಕಾ ಪಡುಕೋಣೆ ಶೌಚಾಲಯದಲ್ಲಿ ಗುಪ್ತಚರ
ಕೊಂಕಣಿ ಬೆಡಗಿ ದೀಪಿಕಾ ಪಡುಕೋಣೆಯ ಸ್ನಾನದ ಕೋಣೆ ಸೀಕ್ರೆಟ್ ಗಳು ಬಯಲಾಗಿವೆ. ಗುಪ್ತಚರನೊಬ್ಬ ಅಲ್ಲಿನ ಚಲನವಲನಗಳನ್ನು ರಹಸ್ಯವಾಗಿ ಬಯಲು ಮಾಡಿದ್ದಾನೆ. ದೀಪಿಕಾ ಶೌಚಾಲಯ ಸುದ್ದಿ ಸ್ಫೋಟಗೊಂಡಿದ್ದೆ ತಡ ಬಾಲಿವುಡ್ ನಲ್ಲಿ ಕಂಪನ ಶುರುವಾಗಿದೆ.
ಇದೆಲ್ಲಾ ನಡೆದದ್ದು 'ಬ್ರೇಕ್ ಕೆ ಬಾದ್' ಚಿತ್ರೀಕರಣ ಸಮಯದಲ್ಲಿ. ನಟಿಯರಿಗೆ ಒಂದು ಶೌಚಾಲಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಹಾಯಕನೊಬ್ಬ ಅದು ಹೇಗೋ ಒಳಗೆ ಪ್ರವೇಶಿಸಿ ರಹಸ್ಯವಾಗಿ ಅಲ್ಲೇನು ನಡೆಯುತ್ತಿದೆ ಎಂಬುದನ್ನು ಚಿತ್ರದ ನಿರ್ಮಾಪಕನಿಗೆ ವರದಿ ಮಾಡಿದ್ದಾನೆ.
ಈ ಕೃತ್ಯಕ್ಕೆ ನಿರ್ಮಾಪಕ ದನಿಶ್ ಅಸ್ಲಾಂ ಪರೋಕ್ಷ ಬೆಂಬಲ ನೀಡಿದ್ದಾನೆ ಎಂಬ ಆರೋಪವು ಕೇಳಿಬಂದಿದೆ. ದೀಪಿಕಾರ ಪ್ರತಿಯೊಂದು ಚಲನವಲನಗಳ ಮೇಲೆ ಕಣ್ಣಿಡುವಂತೆ ಆತ ಸಹಾಯಕರಿಗೆ ಆದೇಶಿಸಿದ್ದ ಎನ್ನಲಾಗಿದೆ. ಆದರೆ ಸಹಾಯಕನೊಬ್ಬ ಇನ್ನು ಒಂದು ಅಡಿ ಮುಂದಿಟ್ಟು ದೀಪಿಕಾಗೆ ಗೊತ್ತಗದಂತೆ ಶೌಚಾಲಯಕ್ಕೂ ಪ್ರವೇಶಿಸಿ ಅಲ್ಲಿನ ಚಲನವಲನಗಳನ್ನು ನಿರ್ಮಾಪಕನಿಗೆ ಒಪ್ಪಿಸಿದ್ದಾನೆ.
ಈ ವಿಷಯ ದೀಪಿಕಾರ ಕಿವಿಗೂ ಬಿದ್ದು ದೊಡ್ಡ ರಾದ್ಧಾಂತವಾಗಿದೆ. ಕಡೆಗೆ ನಿರ್ಮಾಪಕನೇ ಮಧ್ಯ ಪ್ರವೇಶಿಸಿ ದೀಪಿಕಾರನ್ನು ಸಮಾಧಾನ ಪಡಿಸಿದ್ದಾನೆ. ಶೌಚಾಲಯಕ್ಕೆ ರಹಸ್ಯವಾಗಿ ನುಗ್ಗಿದ್ದ ಸಹಾಯಕನಿಗೂ ಧಮ್ ಕಿ ಹಾಕಿ ಎಚ್ಚರಿಕೆ ಕೊಡಲಾಗಿದೆ. ಈ ಘಟನೆಯಿಂದ ದೀಪಿಕಾ ಮನಸ್ಸಿಗೆ ತುಂಬ ನೋವಾಗಿದೆಯಂತೆ.


Click it and Unblock the Notifications











