ಗರ್ಭಿಣಿ ಐಶ್ವರ್ಯ ರೈಗೆ ಅತ್ತೆ ಮನೆಯಲ್ಲಿ ಮಂಗಳ ಸ್ನಾನ
ಬಾಲಿವುಡ್ ತಾರೆ ಐಶ್ವರ್ಯ ರೈ ಈಗ ಎಂಟು ತಿಂಗಳ ಗರ್ಭಿಣಿ. ಚೊಚ್ಚಿಲ ಬಸುರಿಯಾಗಿರುವ ಆಕೆಗೆ ಸೋಮವಾರ(ಸೆ.17) ಮುಂಬೈನ ಅತ್ತೆ ಮನೆಯಲ್ಲಿ ಸಂಪ್ರದಾಯದಂತೆ ಮಂಗಳ ಸ್ನಾನ ಮಾಡಿಸಲಾಯಿತು. ಇದಕ್ಕಾಗಿ ಆರು ಮಂದಿ ಮುತ್ತೈದೆಯರನ್ನೂ ಆಹ್ವಾನಿಸಲಾಗಿತ್ತು.
ಐಶೂ ಅವರ ಅತ್ತೆ ಜಯಾ ಬಚ್ಚನ್ ಮಂಗಳ ಕಾರ್ಯದ ಮುಂದಾಳತ್ವ ವಹಿಸಿ ಬಾಲಿವುಡ್‌ನ ಮುತ್ತೈದೆಯನ್ನು ಆಹ್ವಾನಿಸಲಾಗಿತ್ತು. ಗೌರಿ ಖಾನ್, ಸುಸಾನೆ ರೋಷನ್, ಮಾನ್ಯತಾ ದತ್, ಮನಾ ಶೆಟ್ಟಿ, ಕಾಜೋಲ್ ಹಾಗೂ ಟ್ವಿಕಲ್ ಆಹ್ವಾನಿತ ಆರು ಮಂದಿ ಮುತ್ತೈದೆಯರು.
ನವೆಂಬರ್ ಮಾಹೆಯಲ್ಲಿ ಐಶ್ವರ್ಯ ರೈ ಮಗುವಿಗೆ ಜನ್ಮ ನೀಡಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಿಷೇಕ್, ಡೇಟ್ ಇನ್ನೂ ಪಕ್ಕಾ ಆಗಿಲ್ಲ. ಒಟ್ಟಿನಲ್ಲಿ ನವೆಂಬರ್ ಬೇಬಿ ನಿರೀಕ್ಷೆಯಲ್ಲಿದ್ದೇವೆ. ನಮ್ಮ ವಂಶದಲ್ಲಿ ಐಶೂ, ಅವರ ಪಪ್ಪ, ನಮ್ಮ ತಾತ, ಸೋದರಳಿಯ ಹಾಗೂ ನಮ್ಮ ಮುದ್ದಿನ ಸಾಕುನಾಯಿ ಶನೂಕ್ ಕೂಡ ಹುಟ್ಟಿದ್ದು ನವೆಂಬರ್‌ನಲ್ಲಿ ಎಂದಿದ್ದಾರೆ.
ಹೆಣ್ಣಿನ ವೈವಾಹಿಕ ಜೀವನದಲ್ಲಿ ಗರ್ಭಾವಸ್ಥೆಯು ಅತ್ಯಂತ ಅಮೂಲ್ಯವಾದ ಕ್ಷಣವಾಗಿದ್ದು ಗರ್ಭವತಿಯಾಗಿದ್ದಾಗ ಉತ್ತಮ ಚಿಂತನೆಯಗಳನ್ನು ಬೆಳಸಿಕೊಂಡು ದೇವರ ಧ್ಯಾನ, ಅಧ್ಯಾತ್ಮಿಕ ಚಿಂತನೆಗಳಲ್ಲಿ ತೊಡಗಿಕೊಂಡಲ್ಲಿ ಯಾವುದೇ ತೊಂದರೆ ಇಲ್ಲದೆ ಉತ್ತಮ ಮಗುವಿಗೆ ಪ್ರಸವ ನೀಡಬಹುದು. ಇದನ್ನು ಐಶ್ವರ್ಯ ರೈ ಕೂಡ ಚಾಚೂ ತಪ್ಪದಂತೆ ಆಚರಿಸುತ್ತಿದ್ದಾರಂತೆ. (ಏಜೆನ್ಸೀಸ್)


Click it and Unblock the Notifications











