ವಿಷ್ಣು ಅಭಿಮಾನಿಯಿಂದ 'ಮರೆಯದ ಮಾಣಿಕ್ಯ' ಪುಸ್ತಕ

ಅಂತಹ ಅಭಿಮಾನಿಗಳಲ್ಲಿ ಒಬ್ಬರಾಗಿರುವ ಬೆಂಗಳೂರಿನ ಭುವಲ್ಕ ಗ್ರೂಪ್ ಆಫ್ ಕಂಪನೀಸ್ ನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಅವರ ಆಪ್ತ ಸಹಾಯಕರಾಗಿರುವ ಜನಾರ್ಧನ ರಾವ್ ಸಾಳಂಕೆಯವರು ತಮ್ಮ ಅಭಿಮಾನವನ್ನು 'ಮರೆಯದ ಮಾಣಿಕ್ಯ - ಯಜಮಾನ ಡಾ.ವಿಷ್ಣುವರ್ಧನ್' ಎಂಬ ಪುಸ್ತಕದಲ್ಲಿ ಮೆರೆದಿದ್ದಾರೆ.
2009ರಲ್ಲಿ ವಿಷ್ಣುವರ್ಧನ್ ಅವರ ಸಂದರ್ಶನ ಪಡೆದು, ಅವರ ಪರಿಚಯವಿದ್ದ ನೂರಾರು ನಿರ್ಮಾಪಕರು, ನಿರ್ದೇಶಕರು, ಕಲಾವಿದರನ್ನು ಸಂಪರ್ಕಿಸಿ, ಮಾಹಿತಿ ಪಡೆದು ಈ ಹೊತ್ತಗೆಯನ್ನು ಜನಾರ್ಧನ ರಾವ್ ಹೊರತಂದಿದ್ದಾರೆ. ಚೆನ್ನೈಗೆ ಹೋಗಿ ಗಾನ ಗಾರುಡಿಗ ಡಾ. ಪಿಬಿ ಶ್ರೀನಿವಾಸ್ ಅವರನ್ನೂ ಮಾತನಾಡಿಸಿ ವಿಷ್ಣು ಬಗ್ಗೆ ತಿಳಿದುಕೊಂಡಿದ್ದಾರೆ.
ವಿಷ್ಣು ಅವರು ತಮ್ಮ ಬಾಲ್ಯ ದಿನಗಳನ್ನು ಕಳೆದ ಮೈಸೂರಿನ ನಂಜುಮಳಿಗೆ ಮನೆ, ಗೋಪಾಲ ಶಿಶು ವಿಹಾರ ಶಾಲೆ, ಕಿಂಗ್ಸ್ ಕೋರ್ಟ್ ಹೋಟೆಲ್ ಮುಂತಾದ ಸ್ಥಳಗಳಿಗೆ ಕೂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ವಿಷ್ಣು ಬಗ್ಗೆ ಗೊತ್ತಿರುವ ಮತ್ತು ಗೊತ್ತಿರದ ಅನೇಕ ವಿಷಯಗಳನ್ನು ಪುಸ್ತಕ ಒಳಗೊಂಡಿದೆ ಅನ್ನುತ್ತಾರೆ ಸಾಳಂಕೆ.
ವಿಷ್ಣು ಬಗ್ಗೆ ಸಾಕಷ್ಟು ಮಾಹಿತಿ ಇರುವ ಈ ಪುಸ್ತಕ ಮುಂದಿನ ತಿಂಗಳು ಸೆಪ್ಟೆಂಬರ್ 15ರಂದು (ವಿಷ್ಣು ಹುಟ್ಟುಹಬ್ಬ ಸೆ. 18) ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ಬಿಡುಗಡೆಯಾಗುವ ಸ್ಥಳ ಸದ್ಯದಲ್ಲೇ ತಿಳಿಸಲಾಗುವುದು ಎಂದು ಜನಾರ್ಧನ ರಾವ್ ಅವರು ದಟ್ಸ್ ಕನ್ನಡಕ್ಕೆ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ದಟ್ಸ್ ಕನ್ನಡ ವೆಬ್ ಸೈಟನ್ನು ನೋಡುತ್ತಿರಿ.


Click it and Unblock the Notifications











