ಕುಡಿದು ಬಾಯಿಗೆ ಬಂದಂತೆ ಬಯ್ದರೇ ದರ್ಶನ್?

ಆಡಿಯೋ ಬಿಡುಗಡೆಯ ನಂತರ 2 ದಿನ ಎಲ್ಲವೂ ಚೆನ್ನಾಗಿತ್ತು. ಆದರೆ ನಂತರ ನಡೆದದ್ದೇ ಬೇರೆ. ಚಿಂಗಾರಿ ಚಿತ್ರವನ್ನು 9 ಕೋಟಿ ರು. ಗೆ ಮಾರಿದ ನಿರ್ಮಾಪಕರು ಲಾಭ ಗಳಿಸಿದ್ದರು. (ಲಾಭ ಮಾಡಲಿಕ್ಕೆ ತಾನೇ ಚಿತ್ರ ನಿರ್ಮಾಣ ಮಾಡುವುದು?) ಆದರೆ ಪ್ರಚಾರಕಾರ್ಯ ಲೇಟಾಗುತ್ತಿದೆ ಎಂದು ದರ್ಶನ್ ಗೆ ಯಾರೋ ಕಿವಿ ಊದಿದ್ದಾರೆ. ಅದೇ ವಿಷಯವನ್ನಿಟ್ಟುಕೊಂಡು ದರ್ಶನ್ ಕುಡಿದು ನಿರ್ಮಾಕರಿಗೆ ಕರೆ ಮಾಡಿದ್ದಾರಂತೆ. ಆದರೆ ಯಾವುದೇ ವಿಷಯವನ್ನು ಸ್ಪಷ್ಟಪಡಿಸಿಲ್ಲವಂತೆ.
ದರ್ಶನ್ ಕುಡಿಯುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕುಡಿದು ನಿರ್ಮಾಪಕರಿಗೆ ಕರೆ ಮಾಡುವುದೇ ಎಂಬುದು ಮಹಾದೇವ್ ಅವರ ಪ್ರಶ್ನೆ. ಕುಡಿದ ಅಮಲಿನಲ್ಲಿದ್ದ ದರ್ಶನ್ ಅನ್ನಹಾಕಿದ ನಿರ್ಮಾಪಕರಿಗೆ ಬಾಯಿಗೆ ಬಂದಂತೆ ಬಯ್ದಿದ್ದಾರಂತೆ. ಅದೂ ಯಾವುದೇ ವಿಷಯಕ್ಕೆ ಸರಿಯಾಗಿ ಸಂಬಂಧಿಸದೇ. ಜೈಲಿನಲ್ಲಿದ್ದಾಗ ಬಿಡಿಸಿಕೊಂಡು ಬಂದಿದ್ದಕ್ಕೆ ಈ ರೀತಿ ಉಪಚಾರವೇ ಎಂದು ನೊಂದಿದ್ದಾರೆ ಮಹಾದೇವ್ ಹಾಗೂ ಮನ ಗೌಡ. ಮುಂದಿನ ಪುಟ ನೋಡಿ....
English summary
Misunderstanding happened between Challenging Star Darshan and Chingari movie Producers, Mahadev and Manu Gowda.


Click it and Unblock the Notifications