Don't Miss!
- News
ವಿಧಾನಸಭಾ ಚುನಾವಣೆ: ಮತ್ತೆ ರಾಜ್ಯಕ್ಕೆ ಅಮಿತ್ ಶಾ, ಮತ ಬೇಟೆಗೆ ಕುಂದಗೋಳದಲ್ಲಿ ಬೃಹತ್ ಸಾರ್ವಜನಿಕ ಸಭೆ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿಂಗಾರಿ ನಿರ್ಮಾಪಕರು ಹಾಗೂ ದರ್ಶನ್ ಮಧ್ಯೆ ಕಿತ್ತಾಟ
ಚಿಂಗಾರಿ ಚಿತ್ರವನ್ನು ಬರೋಬ್ಬರಿ ರು. 9 ಕೋಟಿಗೆ ಮಾರಾಟ ಮಾಡಿರುವ ಮಹಾದೇವ್ ಹಾಗೂ ಮನು ಗೌಡ, ಅದರಿಂದ ಲಾಭ ಮಾಡಿಕೊಂಡಿದ್ದು ಸಹಜ. ಅದೇ ರೀತಿ ಈಗ ಕೊಂಡುಕೊಂಡಿರುವ ಪ್ರಸಾದ್ ಕೂಡ ಲಾಭ ಮಾಡಿಕೊಳ್ಳುವುದೂ ಖಚಿತ. ಏಕೆಂದರೆ ಮೊದಲ ವಾರವೇ ಚಿಂಗಾರಿ ರು. 6.72 ಕೋಟಿ ಗಳಿಸಿದೆ ಎಂದೂ ಸ್ವತಃ ಪ್ರಸಾದ್ ಅವರೇ ಮಾಧ್ಯಮದ ಮುಂದೆ ಘೋಷಿಸಿದ್ದಾರೆ. ಈಗಲೂ ಚಿಂಗಾರಿ ಕಲೆಕ್ಷನ್ ಚೆನ್ನಾಗಿಯೇ ಇದೆ. ಅಂದ ಮೇಲೆ ಲಾಭ ಗ್ಯಾರಂಟಿ.
ಈ ನಡುವೆ ನಡೆಯಿತೆನ್ನಲಾದ ಘಟನೆ ಸುದ್ದಿ ಚಿತ್ರರಂಗವನ್ನು ಬೆಚ್ಚಿಬೀಳಿಸಿದೆ. ಚಿಂಗಾರಿ ಹೀರೋ ದರ್ಶನ್ ಹಾಗೂ ನಿರ್ಮಾಪಕರಾದ ಮಹಾದೇವ್ ನಡುವೆ ಮನಸ್ತಾಪವಾಗಿದೆ. ಮಹಾದೇವ್ ಮಗ ಹಾಗೂ ಚಿಂಗಾರಿ ಇನ್ನೊಬ್ಬ ನಿರ್ಮಾಪಕರಾದ ಮನು ಗೌಡ ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ವಿತರಕ ಪ್ರಸಾದ್ ಹಾಗೂ ಚಿಂಗಾರಿ ನಿರ್ಮಾಪಕರ ನಡುವೆ ಕೂಡ ಮನಸ್ತಾಪ ಮೂಡಿದೆ. ಹೀಗೆ ಇದೀಗ ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ.
ಅದಕ್ಕೆ ಸಾಕ್ಷಿಯೆಂಬಂತೆ ಮೊನ್ನೆ 'ಗೋಲ್ಡ್ ಪಿಂಚ್' ಹೊಟೆಲ್ ನಲ್ಲಿ ನಡೆದ ಸಂತೋಷಕೂಟಕ್ಕೆ ನಿರ್ಮಾಪಕರು ಬಂದಿರಲಿಲ್ಲ. ಆದರೆ ಅಲ್ಲಿ ಮಾಧ್ಯಮದ ಮುಂದೆ ಬಂದ ಆ ಪ್ರಶ್ನೆಗೆ "ಬರುತ್ತೇನೆಂದು ಹೇಳಿದ್ದರು, ಬಂದಿಲ್ಲ ಯಾಕೋ ಏನೋ..." ಎಂದು ತಿಪ್ಪೆ ಸಾರಿಸಿದೆ ಚಿತ್ರತಂಡ. ಈಗ ಮಾಧ್ಯಮಗಳಲ್ಲಿ ಈ ಕುರಿತು ಸುದ್ದಿ ಬರುತ್ತಿರುವುದರ ರಹಸ್ಯವಾದರೂ ಏನು? ಮುಂದಿನ ಪುಟ ನೋಡಿ...