For Quick Alerts
  ALLOW NOTIFICATIONS  
  For Daily Alerts

  ಮಲೆನಾಡಿನ ಅರಮನೆಯಲ್ಲಿ ಮಲ್ಲಿಗೆಯ ಕಂಪು

  By Staff
  |

  ನಾಯಕಿ ರಾಧಿಕಾ ಗಾಂಧಿ ಮಲೆನಾಡಿನ ಸುಂದರ ಪರಿಸರ ಕಂಡು ಪುಳಕಿತರಾಗಿ, ಹುಮ್ಮಸ್ಸಿನಿಂದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎನ್ನುತ್ತದೆ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆ' ಚಿತ್ರ ತಂಡ.ಇತ್ತೀಚಿನ ವರದಿ ಪ್ರಕಾರ ಚಿತ್ರೀಕರಣ ಭರದಿಂದ ಸಾಗಿದ್ದು, ಮಾತಿನ ಲೇಪನ ಮಾತ್ರ ಬಾಕಿ ಉಳಿದಿದೆ.

  125 ವರ್ಷಗಳ ಹಿಂದಿನ ಅರಮನೆ. ಬೈಗೂರು ಅರಮನೆ ಎಂದೆ ಖ್ಯಾತಿಯಾಗಿರುವ ಈ ಸ್ಥಳ ಈಗ ಗೌರಮ್ಮ ದಾಸೇಗೌಡರ ಸ್ವಗೃಹ. ಈ ಅರಮನೆಯಲ್ಲಿ 'ಚಿಕ್ಕಮಗಳೂರ ಚಿಕ್ಕಮಲ್ಲಿಗೆಯ ಕೆಲವು ಮಾತಿನಭಾಗದ ಚಿತ್ರೀಕರಣವನ್ನು ನಿರ್ದೇಶಕ ಈ.ಚನ್ನಗಂಗಪ್ಪಚಿತ್ರೀಕರಿಸಿಕೊಂಡರು

  1883ರಲ್ಲಿ ನಿರ್ಮಿತವಾದ ಚಂದದ ಅರಮನೆಯನ್ನು ವೀಕ್ಷಿಸಲು ಹಲವು ತಾಸುಗಳೇ ಬೇಕಾಗುತ್ತದೆ. ಅಂದಿನ ಸಂಸ್ಕೃತಿಯ ಪ್ರತೀಕದಂತಿರುವ ಈ ಅರಮನೆ ಚಿತ್ರದಲ್ಲಿ ದ್ವಿತೀಯ ನಾಯಕ ಜಗದೀಶರ ವಾಸಸ್ಥಾನ. ಸಿ.ಆರ್.ಸಿಂಹ, ರಾಧಿಕಾಗಾಂಧಿ, ಶರತ್‌ಲೋಹಿತಾಶ್ವ, ಅವಿನಾಶ್ ಮುಂತಾದವರು ಈ ಮನೆಯಲ್ಲಿ ನಡೆದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

  ಕೆಂಪಾಬಿಕಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿ.ಅಶ್ವಥ್ ಹಾಗೂ ಡಿ.ರಾಮಚಂದ್ರ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ಈ.ಚನ್ನಗಂಗಪ್ಪ ಅವರು ಹೊತ್ತಿದ್ದಾರೆ. ಉಜಿರೆ, ಧರ್ಮಸ್ಥಳ, ಬೆಳ್ತಂಗಡಿ, ಸೆಂಟ್‌ಮೇರಿ ದ್ವೀಪ, ಜಮಾಲಬಾದ್ ಕೋಟೆ ಹಾಗೂ ಬೈಗೂರು ಅರಮನೆಯನ್ನೊಳಗೊಂಡಂತೆ ಇತರ ರಮಣೀಯ ಸ್ಥಳಗಳಲ್ಲಿ ಮಲ್ಲಿಗೆಯ ಚಿತ್ರೀಕರಣ ನಡೆಸಿ ಚಿತ್ರದ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದಾರೆ.

  ಪ್ರೇಮಕವಿ ಎಂದೇ ಖ್ಯಾತರಾಗಿರುವ ಕೆ.ಕಲ್ಯಾಣ್ ಚಿಕ್ಕಮಗಳೂರ ಚಿಕ್ಕಮಲ್ಲಿಗೆಗೆ ಮಧುರವಾದ ಗೀತೆಗಳನ್ನು ರಚಿಸಿರುವುದಲ್ಲದೆ ಸಂಗೀತವನ್ನು ಸಂಯೋಜಿಸಿದ್ದಾರೆ. ಮಲ್ಲಿಗೆಯ ಎಲ್ಲಾ ಹಾಡುಗಳನ್ನು ಕನ್ನಡಿಗರೇ ಹಾಡಿರುವುದು ವಿಶೇಷ. ಉಳಿದಂತೆ ಜೆ.ಜಿ.ಕೃಷ್ಣ ಛಾಯಾಗ್ರಹಣ, ರವಿ ಸಂಕಲನ, ಸುಂದರಂ ಕಲೆ, ಪ್ರಸಾದ್ ನೃತ್ಯ, ಪ್ರಕಾಶ್, ರುದ್ರೇಶ್ ಸಹ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರವಂತ್, ಜಗದೀಶ್, ಆನಂದ್, ರಾಧಿಕಾಗಾಂಧಿ, ಸಿ.ಆರ್.ಸಿಂಹ, ರಾಮಕೃಷ್ಣ, ಅವಿನಾಶ್, ವಿನಯಾಪ್ರಕಾಶ್, ಎ.ಎಸ್.ಮೂರ್ತಿ, ವಿಜಯಸಾರಥಿ ಮುಂತಾದವರಿದ್ದಾರೆ

  (ದಟ್ಸ್ ಸಿನಿವಾರ್ತೆ )

  ರಾಧಿಕಾ ಗಾಂಧಿ ಗ್ಯಾಲರಿ ನೋಡಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X