ತೆಲುಗು 'ಬಿಜಿನೆಸ್‌ಮ್ಯಾನ್' ಮೇಲೆ ಬಜರಂಗ ದಳ ದೂರು

By Rajendra

ತೆಲುಗು ನಟ ಮಹೇಶ್ ಬಾಬು ಅಭಿನಯ 'ಬಿಜಿನೆಸ್‌ಮ್ಯಾನ್' ಚಿತ್ರದ ವಿರುದ್ಧ ಪ್ರಮುಖ ಹಿಂದೂ ಸಂಘಟನೆ ಬಜರಂಗ ದಳ ಕಾರ್ಯಕರ್ತರು ಹೈದರಾಬಾದ್‌ನಲ್ಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಚಿತ್ರದಲ್ಲಿನ ಒಂದು ಹಾಡು ತೀರಾ ಅಸಭ್ಯವಾಗಿದ್ದು,ಸಾಹಿತ್ಯವಂತೂ ಕೇಳುವಂತೆಯೇ ಇಲ್ಲ ಎಂದು ಬಜರಂಗ ದಳ ತನ್ನ ದೂರಿನಲ್ಲಿ ತಿಳಿಸಿದೆ.

'ಬಿಜಿನೆಸ್‌ಮ್ಯಾನ್' ಚಿತ್ರದ ಐಟಂ ಹಾಡು "ಬ್ಯಾಡ್ ಬಾಯ್ಸ್"ನಲ್ಲಿ ಬಳಸಿರುವ ಭಾಷೆ ಅಸಭ್ಯವಾಗಿದೆ. ಶ್ವೇತಾ ಭಾರದ್ವಾಜ್ ಎಂಬ ನಟಿ ಈ ಹಾಡಿಗೆ ಕುಣಿದಿರುವುದು ಅಷ್ಟೇ ಅಶ್ಲೀಲವಾಗಿದೆ. ಚಿತ್ರದ ನಿರ್ದೇಶಕ ಪುರಿ ಜಗನ್ನಾಥ್ ಮೇಲೆ ಕ್ರಮಕೈಗೊಳ್ಳಬೇಕು ಎಂದು ಬಜರಂಗ ದಳ ಆಗ್ರಹಿಸಿದೆ.

ಈ ಸಂಬಂಧ ಹೈದರಾಬಾದಿನ ಮಹಂಕಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಎಸ್ ರಂಗರಾವ್ ಅವರು ಕಂಪ್ಲೇಂಟ್‌ನ್ನು ಬರೆದುಕೊಂಡಿದ್ದು, "ಕಾನೂನು ತಜ್ಞರನ್ನು ಭೇಟಿ ಮಾಡಿ ನಿರ್ದೇಶಕ ಪುರಿ ಜಗನ್ನಾಥ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ" ಭರವಸೆ ನೀಡಿದ್ದಾರೆ. (ಏಜೆನ್ಸೀಸ್)

More from Filmibeat

English summary
The leading Hindu organization Bajrang Dal has lodged a complaint in Mahankali police station against a song in Prince Mahesh Babu's new release Businessman, alleging that the song contains vulgar lyrics which is strictly unacceptable.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X