Don't Miss!
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ? ಈ ಬಗೆಯ ಆಹಾರ ಸೇವನೆ ಒಳ್ಳೆಯದು
- News
7th Pay Commission DA: ನೌಕರರಿಗೆ 18 ತಿಂಗಳ ಬಾಕಿ DA ಹಣ ಎಷ್ಟು ಕಂತುಗಳಲ್ಲಿ ಸಿಗಲಿದೆ? ತಿಳಿಯಿರಿ
- Automobiles
ಬೆಲೆ ಏರಿಕೆ ಪಡೆದುಕೊಂಡ ಜನಪ್ರಿಯ ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್
- Finance
7th Pay Commission: ನೌಕರರಿಗೆ ಸಿಹಿ ಸುದ್ದಿ: ಬಾಕಿ DA ಹಣ ನೀಡಲು ಕೇಂದ್ರ ಸರ್ಕಾರ ನಿರ್ಧಾರ, ಹೇಗೆ?
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಚಿಂಗಾರಿ ಪ್ರಚಾರಕ್ಕೆ ಬಂದಿಲ್ಲವೆಂದು ಹರಿಹಾಯ್ದ ದರ್ಶನ್
ಸಾರಥಿ ಯಶಸ್ವಿಯಾದ ನಂತರ ದರ್ಶನ್ ಯಾಕೆ ಹೀಗಾಡುತ್ತಿದ್ದಾರೆ? ಕೊಡಬೇಕಾದದ್ದನ್ನಲ್ಲಾ ದರ್ಶನ್ ಗೆ ಕೊಟ್ಟಾಗಿದೆ, ಆದರೂ ಈಗ ಜಗಳವಾಡುವುದು ಯಾಕೆ? ದರ್ಶನ್ ಎಲ್ಲಾ ನಿರ್ಮಾಪಕರ ಜೊತೆಯೂ ಹೀಗೇಕೆ ಮಾಡುತ್ತಾರೆ? ಕುಡಿಯುವುದು ಅವರ ವೈಯಕ್ತಿಕ ವಿಷಯವಾದರೂ ನಮಗೆ ಆಗ ಫೋನ್ ಕರೆ ಮಾಡಿ ಅನಾವಶ್ಯಕ ಬೈಯ್ಯುವುದು ಯಾಕೆ? ಎಂಬುದೀಗ ಚಿಂಗಾರಿ ನಿರ್ಮಾಪಕರಿಬ್ಬರ ಪ್ರಶ್ನೆ. ಈ ವಿಷಯವನ್ನು ಸ್ವತಃ ನಿರ್ಮಾಪಕರು 'ಒನ್ ಇಂಡಿಯಾ ಕನ್ನಡ'ಕ್ಕೆ ತಿಳಿಸಿದ್ದಾರೆ.
ಈ ವಿಷಯದ ಕುರಿತು ಅವರು ಸದ್ಯದಲ್ಲೇ ದರ್ಶನ್ ಚಿತ್ರ ನಿರ್ಮಾಪಕರ ಸಭೆ ಕರೆಯುವ ನಿರ್ಧಾರ ಮಾಡಿದ್ದಾರೆ. ಕುಡಿದು ಬಾಯಿಗೆಬಂದಂತೆ ಮಾತನಾಡುವ ದರ್ಶನ್ ಗೆ ಸುಮ್ಮನಿದ್ದು ಪ್ರಯೋಜನವಿಲ್ಲ ಎಂಬುದನ್ನು ಅರಿತಿದ್ದಾರಂತೆ. ಈ ಕುರಿತು ಸುದ್ದಿಗೋಷ್ಠಿ ಕರೆಯುವ ಯೋಚನೆಯಲ್ಲಿದ್ದಾರೆ ಎಂಬುದು ಸುದ್ದಿ. ಆದರೆ ಈಗತಾನೇ ವೈಯಕ್ತಿಕ ಜೀವನ ಸರಿಹೋಗಿ ವೃತ್ತಿಜೀವನದಲ್ಲಿ ಉತ್ತುಂಗದಲ್ಲಿರುವ ದರ್ಶನ್, ಯಾಕೆ ಮತ್ತೆ ಬೀದಿಗೆ ಬೀಳುತ್ತಿದ್ದಾರೆ, ಮತ್ತೆ ಮತ್ತೆ ಕುಡಿದು ಗಲಾಟೆ ಮಾಡುವುದ್ಯಾಕೆ ಎಂಬುದೀಗ ದರ್ಶನ್ ಅಭಿಮಾನಿಗಳ ಪ್ರಶ್ನೆ...