»   » ಬಾಕ್ಸಾಫೀಸ್ ಗಳಿಕೆಯಲ್ಲಿ ಬೊಂಬಾಟ್ ಮುನ್ನಡೆ

ಬಾಕ್ಸಾಫೀಸ್ ಗಳಿಕೆಯಲ್ಲಿ ಬೊಂಬಾಟ್ ಮುನ್ನಡೆ

Posted By:
Subscribe to Filmibeat Kannada

ನಟ ಗಣೇಶ್‌ರ ಈ ಹಿಂದಿನ ಎಲ್ಲ ದಾಖಲೆಗಳನ್ನು 'ಬೊಂಬಾಟ್'ಚಿತ್ರ ಅಳಿಸಿಹಾಕುತ್ತಿದೆ. ಕರ್ನಾಟಕದಾದ್ಯಂತ 80 ಕೇಂದ್ರಗಳಲ್ಲಿ ಹಾಗೂ ಅಮೆರಿಕ,ಆಸ್ಟ್ರೇಲಿಯಾ,ಲಂಡನ್,ಸೌದಿ ಅರೇಬಿಯಾ,ಕೆನಡಾ ಹಾಗೂ ನ್ಯೂಜಿಲ್ಯಾಂಡ್‌ಗಳಲ್ಲಿ ಬಿಡುಗಡೆಯಾಗಿರುವ ಚಿತ್ರ ಬೊಂಬಾಟ್ ಲಾಭವನ್ನು ಗಳಿಸುತ್ತಿದೆ . ಒಂದೇ ದಿನದಲ್ಲಿ ಅತ್ಯಧಿಕ ಪ್ರದರ್ಶನಗಳನ್ನು ಕಂಡು ಗಣೇಶ್ ತಮ್ಮ ಹಿಂದಿನ ಚಿತ್ರದ ದಾಖಲೆಯನ್ನು ತಾವೇ ಮುರಿದಿದ್ದಾರೆ.

ಒಂದು ಅಂದಾಜಿನ ಪ್ರಕಾರ ಬೊಂಬಾಟ್ ಚಿತ್ರ ದಿನವೊಂದಕ್ಕೆ 300 ಪ್ರದರ್ಶನಗಳನ್ನು ಕಾಣುತ್ತಿದೆ. ಪ್ರೇಕ್ಷಕರು ದೊಡ್ಡ ಸಂಖ್ಯೆಯಲ್ಲಿ ಚಿತ್ರಮಂದಿರಕ್ಕೆ ಬರುತ್ತಿರುವ ಕಾರಣ ರಾಕ್‌ಲೈನ್ ವೆಂಕಟೇಶ್ ಸಖತ್ ಖುಷಿಯಾಗಿದ್ದಾರೆ. ರಾಕ್‌ಲೈನ್ ಪ್ರೊಡಕ್ಷನ್ಸ್‌ನಡಿ ಈ ಚಿತ್ರವನ್ನು ಅವರು 5 ಕೊಟಿ ರು.ಗಳ ವೆಚ್ಚದಲ್ಲಿ ನಿರ್ಮಿಸಿದ್ದರು. ಉತ್ತಮ ಚಿತ್ರಕಥೆ, ನಟಿ ರಮ್ಯಾರ ಮೋಹಕ ಅಭಿನಯ ಹಾಗೂ ರೊಮ್ಯಾಂಟಿಕ್ ಪಾತ್ರಗಳಿಂದ ಆಕ್ಷನ್ ಪಾತ್ರಕ್ಕೆ ಗಣೇಶ್ ಬದಲಾದ ಗಣೇಶರ ನಟನೆ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣಲು ಕಾರಣವಾಗಿದೆ.

ನಿರ್ದೇಶಕ ಆರ್.ಚಂದ್ರು ಅವರ ಪ್ರಥಮ ಕಾಣಿಕೆ 'ತಾಜ್‌ಮಹಲ್' ಸಹ ಉತ್ತಮ ಪ್ರದರ್ಶನ ಕಾಣುತ್ತಿದೆ. ಪೂಜಾಗಾಂಧಿ ಮತ್ತು ಅಜಯ್ ರಾವ್ ನಟನೆ ಹಾಗೂ ಹಾಡುಗಳು ಚಿತ್ರದ ಪ್ರಧಾನ ಆಕರ್ಷಣೆ. ದುರಂತ ಕಥೆಯನ್ನು ಹೊಂದಿರುವ ಈ ಚಿತ್ರ ಚಂದ್ರುಗೆ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿದೆ. ಬೊಂಬಾಟ್ ಹಾಗೂ ತಾಜ್ ಮಹಲ್ ಚಿತ್ರಗಳು 'ಮೊಗ್ಗಿನ ಮನಸಿ'ನ ಮೇಲೆ ಪರೋಕ್ಷವಾಗಿ ಪ್ರಭಾವ ಬೀರಿ ಚಿತ್ರದ ಗಳಿಕೆಯನ್ನು ಕುಂಟಿತಗೊಳಿಸಿವೆ. ಶುಕ್ರವಾರ(ಆ.14) ತೆರೆಕಂಡ 'ಅರ್ಜುನ್' ಹಾಗೂ 'ಅಂತು ಇಂತು ಪ್ರೀತಿ ಬಂತು' ಚಿತ್ರಗಳು ಬಾಕ್ಸಾಫೀಸ್ ಗಳಿಕೆಯಲ್ಲಿ ಮುಂದಿವೆ.

(ದಟ್ಸ್‌ಕನ್ನಡ ಸಿನಿವಾರ್ತೆ)

ಚಿತ್ರವಿಮರ್ಶೆ: ಗಣೇಶ್ ,ರಮ್ಯಾರ ಬೊಂಬಾಟ್!
ಅಂತು ಇಂತು ಒಳ್ಳೆ ಸಿನಿಮಾ ಬಂತು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada