»   » ಥಂಡ ಮತ್ಲಬ್ ಕೋಕಾ ಕೋಲದಲ್ಲಿ ಗಣೇಶ್

ಥಂಡ ಮತ್ಲಬ್ ಕೋಕಾ ಕೋಲದಲ್ಲಿ ಗಣೇಶ್

Subscribe to Filmibeat Kannada
Ganesh
ಅಮೀರ್ ಖಾನ್, ಐಶ್ವರ್ಯ ರೈ, ಕರೀನಾ ಕಪೂರ್, ಹೃತಿಕ್ ರೋಷನ್ ನಂತಹ ಘಟಾನುಘಟಿಗಳ ಸಾಲಿಗೆ ಗೋಲ್ಡನ್ ಸ್ಟಾರ್ ಗಣೇಶ್ ಸಹ ಸೇರ್ಪಡೆಯಾಗಿದ್ದಾರೆ! ಆಶ್ಚರ್ಯ ವಾಗುತ್ತಿದೆಯೇ. ಮುಂಗಾರು ಮಳೆ ಚಿತ್ರದಾಣೆಗೂ ನಿಜ! ಇದೇ ಮೊದಲ ಬಾರಿಗೆ ಕೋಕಾ ಕೋಲ ಕಂಪನಿ ಕನ್ನಡ ಜಾಹೀರಾತಿಗಾಗಿ ಗಣೇಶ್ ಅವರನ್ನು ಆಯ್ಕೆ ಮಾಡಿದೆ.

ಉಪೇಂದ್ರ,ದರ್ಶನ್, ರಮೇಶ್,ದಿಗಂತ್ ರಂತಹ ನಟರು ಹಾರ್ಪಿಕ್, ನಂದಿನಿ ಹಾಲು, ಸೋಡಾ ಜಾಹೀರಾತುಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ನಟಿಸುವ ಅವಕಾಶ ಕನ್ನಡ ನಟರಿಗೆ ಸಿಕ್ಕಿರಲಿಲ್ಲ. ಗಣೇಶ್ ಆ ಅದೃಷ್ಟಕ್ಕೆ ಪಾತ್ರರಾಗಿದ್ದಾರೆ. ಕೋಕಾ ಕೋಲ ಜಾಹೀರಾತಿನಲ್ಲಿ ದಕ್ಷಿಣ ಭಾರತದಲ್ಲಿ ತೆಲುಗಿನ ಚಿರಂಜೀವಿ, ತಮಿಳಿನ ವಿಜಯ್ ಮುಂತಾದವರು ಕಾಣಿಸಿಕೊಂಡಿದ್ದರು. ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗದಿಂದ ಗಣೇಶ್ ಆಯ್ಕೆಯಾಗಿದ್ದಾರೆ.

ಕೋಲಾ ಸಂಸ್ಥೆಯೊಂದಿಗೆ ಒಂದು ವರ್ಷದ ಕರಾರುಗೆ ಸಹಿಹಾಕಿ, ಜಾಹೀರಾತಿನ ಚಿತ್ರೀಕರಣದಲ್ಲೂ ಭಾಗವಹಿಸಿ ಬಂದಿದ್ದಾರೆ ಗಣೇಶ್. ರಿಲಯನ್ಸ್ ಕಂಪನಿಯ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಗಣೇಶ್ ಇನ್ನು ಮುಂದೆ ನಮ್ಮ ನಿಮ್ಮನ್ನ ಕೋಕಾ ಕೋಲಾ ಕುಡಿಯಿರಿ ಎಂದು ಮನವಿ ಮಾಡಲಿದ್ದಾರೆ. ಜಾಹೀರಾತಿಗೆ ಸಂಭಾವನೆ ಎಷ್ಟು ತೆಗೆಕೊಂಡಿದ್ದೀರಾ ಎಂದರೆ ಬೆಳ್ಳಗೆ ನಗುತ್ತ್ತಾರೆ. ಆ ನಗುವಿನ ಹಿಂದೆ ಎರಡು , ಮೂರೂ ಕೋಟಿ ಇರಬಹುದೆ!?

ಸಂಗಮ ಚಿತ್ರದಲ್ಲಿ 'ಹೇ ದಿಲ್ ಮಾಂಗೆ ಮೋರ್' ಎಂದು ಹಾಡಿ ಕುಣಿದ ಗಣೇಶ ಕಡೆಗೆ ಕೋಕಾ ಕೋಲ ಕಂಪನಿ ಕೊಟ್ಟ ಆಫರ್ ಗೆ ಮನಸೋತಿದ್ದಾರೆ. ಅದೆಲ್ಲಾ ಸರಿ, ಅಮೀರ್ ಖಾನ್ ಹಿಂದಿಯಲ್ಲೇನೊ 'ಥಂಡ ಮತ್ಲಬ್ ಕೋಕಾ ಕೋಲ' ಎಂದು ಹೇಳುತ್ತಿದ್ದ ಆದರೆ ಈಗ ಗಣೇಶ್ ಕನ್ನಡದಲ್ಲಿ ಏನೆಂದು ಹೇಳುತ್ತಾರೊ!

(ದಟ್ಸ್ ಕನ್ನಡ ಚಿತ್ರವಾರ್ತೆ)

ಸಂಕ್ರಾಂತಿಗೆ ಸರ್ಕಸ್; ಈಗ ಗೀತಸಂಭ್ರಮ

ನಿರ್ಮಾಪಕನಾಗಿ ಗೋಲ್ಡನ್ ಸ್ಟಾರ್ ಗಣೇಶ್

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada