For Quick Alerts
  ALLOW NOTIFICATIONS  
  For Daily Alerts

  ಭಾವನಾ ರೋಮಿಯೋ ಆಗಿ ಗೋಲ್ಡನ್ ಸ್ಟಾರ್ ಗಣೇಶ್

  By Rajendra
  |

  ಗೋಲ್ಡನ್ ಸ್ಟಾರ್ ಗಣೇಶ್ ಈಗ ರೋಮಿಯೋ. ಮಲ್ಲು ಬೆಡಗಿ ಭಾವನಾ ಜೂಲಿಯಟ್. ರೋಮಿಯೋ ಜೂಲಿಯಟ್ ಕತೆ ಎಂದ ಮೇಲೆ ಪ್ರೀತಿ ಪ್ರೇಮ ಪ್ರಣಯ ಇಲ್ಲದಿರಲು ಸಾಧ್ಯವೆ? 'ಕೂಲ್' ಚಿತ್ರದ ಬಳಿಕ ಗಣೇಶ್ ಸಹಿ ಹಾಕಿರುವ ಪಕ್ಕಾ ರೊಮ್ಯಾಂಟಿಕ್ ಲವ್ ಸ್ಟೋರಿ ಇದು. ಜೂನ್ ತಿಂಗಳ ಅಂತ್ಯಕ್ಕೆ ರೋಮಿಯೋ ಚಿತ್ರ ಸೆಟ್ಟೇರಲಿದೆ.

  ಈ ಹಿಂದೆ ಕನ್ನಡದಲ್ಲಿ 'ನಾಯಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಶೇಖರ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ನವೀನ್ ಹಾಗೂ ರಾಗಿಣಿ ಮುಖ್ಯಭೂಮಿಕೆಯಲ್ಲಿದ್ದ 'ನಾಯಕ' ಚಿತ್ರದ ಸಹ ನಿರ್ಮಾಪಕರೂ ಆಗಿದ್ದರು ಶೇಖರ್. 'ರೋಮಿಯೋ' ಚಿತ್ರಕ್ಕೆ ಅರ್ಜುನ್ ಜನ್ಯಾ ಅವರ ಸಂಗೀತ, ವೈಧಿ ಅವರ ಛಾಯಾಗ್ರಹಣವಿದೆ.

  'ಜಾಕಿ' ಹಾಗೂ 'ವೀರ ವಿಷ್ಣುವರ್ಧನ' ಚಿತ್ರಗಳ ಬಳಿಕ ಭಾವನಾ ಅಭಿನಯಿಸುತ್ತಿರುವ ಮೂರನೇ ಕನ್ನಡ ಚಿತ್ರವಿದು. ಸುದೀಪ್ ಮುಖ್ಯಭೂಮಿಕೆಯಲ್ಲಿರುವ ವೀರ ವಿಷ್ಣುವರ್ಧನ ಚಿತ್ರ ನಿರ್ಮಾಣದ ಹಂತದಲ್ಲಿದೆ.ಎಸ್ ನಾರಾಯಣ್ ಆಕ್ಷನ್ ಕಟ್ ಹೇಳುತ್ತಿರುವ 'ಶೈಲೂ' ಮೊದಲ ಹಂತದ ಚಿತ್ರೀಕರಣ ಬಳಿಕ 'ರೋಮಿಯೋ' ಸೆಟ್ಟೇರಲಿದೆ. (ದಟ್ಸ್‌ಕನ್ನಡ ಸಿನಿವಾರ್ತೆ)

  English summary
  Golden Star Ganesh new flick titled as Romeo. The film is being directing by Shekhar, earlier he directed the suspense thriller Nayaka featuring Naveen and Raagini. Actress Bhavana plays opposite to Ganesh. After Jackie and Veera Vishnuvardhana this will be the third Kannada film for Bhavana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X