ಐಯಾಮ್ ಸ್ಸಾರಿ ತಮಿಳು ರಿಮೇಕ್ ಗೆ ಮಾಧವನ್

By Mahesh

Madhavan in Iam Sorry matte banni pritsona remake
ಪ್ರೇಮ್ ಕುಮಾರ್ ನಾಯಕತ್ವದ 'ಐಯಾಮ್ ಸ್ಸಾರಿ ಮತ್ತೆ ಬನ್ನಿ ಪ್ರೀತ್ಸೋಣ..' ಚಿತ್ರ ನಿರ್ಮಿಸಿ, ನಿರ್ದೇಶಿಸಿ ಭಾರಿ ಲಾಸ್ ಮಾಡಿಕೊಂಡ ರವೀಂದ್ರ ಈಗ ತಮಿಳಿಗೆ ಹಾರಿದ್ದಾರೆ.

ತೆಲುಗು, ತಮಿಳು ಇಂಡಸ್ಟ್ರಿಯಲ್ಲಿ ಒಳ್ಳೆ ಕಾಂಟ್ಯಾಕ್ಟ್ ಹೊಂದಿರುವ ರವೀಂದ್ರ ಮೊದಲ ಎಂಟ್ರಿ ಕನ್ನಡದಲ್ಲೇ ಮಾಡ್ತೀನಿ ಎಂದು ನಿರ್ಮಿಸಿದ ಚಿತ್ರ ಗೋತಾ ಹೊಡೆದಿದ್ದು ನೋಡಿ ಪ್ರೇಕ್ಷಕರಿಗಷ್ಟೇ ಅಲ್ಲ ಸ್ವತಃ ನಿರ್ದೇಶಕ ರವೀಂದ್ರ ಕೂಡಾ ಬೇಜಾರಾಗಿಬಿಟ್ಟಿತ್ತು. ಐಯಾಮ್ ಸ್ಸಾರಿ, ಥೇಟರ್ ನಿಂದ ಚಿತ್ರ ತೆಗೆದುಬಿಡು ಎಂದು ಬಹಿರಂಗವಾಗೇ ಹೇಳಿಕೆ ಕೊಟ್ಟಿದ್ದರು.

ಈಗ ಹ್ಯಾಂಗೋವರ್ ನಿಂದ ಹೊರ ಬಂದು ಮತ್ತೆ ನಿರ್ದೇಶಕನ ಕ್ಯಾಪ್ ಧರಿಸಿದ್ದಾರೆ. ತಮಿಳಿಗೆ ರಿಮೇಕ್ ಆಗುತ್ತಿರುವ ಈ ಚಿತ್ರಕ್ಕೆ ಸುಂದರ ನಟ ಆರ್ ಮಾಧವನ್ ಅವರನ್ನು ಆಯ್ಕೆ ಮಾಡಿದ್ದಾರೆ. ಇದಲ್ಲದೆ ಪಾರ್ಥಿಬನ್ ಕೂಡಾ ನಟಿಸುತ್ತಿದ್ದಾರಂತೆ.

ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಐಯಾಮ್ ಸ್ಸಾರಿ ಚಿತ್ರ ಮೂರು ದಿನದ ಮೇಲೆ ಚಿತ್ರಮಂದಿರದಲ್ಲಿ ಉಳಿಯಲಿಲ್ಲ. ಆದರೂ ಯಾವ ಧೈರ್ಯದ ಮೇಲೆ ಚಿತ್ರವನ್ನು ರಿಮೇಕ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಪ್ರೇಮ್ ಗೆ ಒಂದು ಒಳ್ಳೆ ಹಿಟ್ ಚಿತ್ರ ನೀಡಲಾಗಲಿಲ್ಲವಲ್ಲ ಎಂಬ ಕೊರಗಿನಿಂದ ರವೀಂದ್ರ ಹೊರಬಂದಿದ್ದಾರೆ.

ಪ್ರೇಮ್ ಕುಮಾರ್ ಅವರ ಮುಂದಿನ ಚಿತ್ರ 'ಕೆಟ್ಟವನು' ನಿರ್ದೇಶಿಸಲು ತಮ್ಮ ಅಸಿಸ್ಟೆಂಟ್ ಪ್ರಿಯಾ ಬೆಳ್ಳಿಯಪ್ಪ ಅವರನ್ನು ಕಳಿಸಿದ್ದಾರೆ. ಏನಾದರೂ ರವೀಂದ್ರ ಸಾಹಸ ಹಾಗೂ ಸಹನೆಯನ್ನು ಮೆಚ್ಚಬೇಕು.

More from Filmibeat

English summary
Director cum producer Ravindra has confirmed that Kollywood star Madhavan to play lead role in Tamil version of I am Sorry Mathe Banni Pritsona Kaannada movie remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X