For Quick Alerts
  ALLOW NOTIFICATIONS  
  For Daily Alerts

  'ಪಟ್ರೆ ಲವ್ಸ್ ಪದ್ಮಾ' ಶ್ರೀವಾತ್ಸವ್ ಮತ್ತೆ ಬಂದಿದ್ದಾರೆ

  By * ಚಿತ್ರಗುಪ್ತ
  |

  "ಪಟ್ರೆ ಲವ್ಸ್ ಪದ್ಮ " ಚಂದ್ರಶೇಖರ್ ಶ್ರೀವಾತ್ಸವ್ ಮತ್ತೆ ಬಂದಿದ್ದಾರೆ. "ಅರ್ಜುನ್ ಅವರ ಒಂದಷ್ಟು ಅದ್ಭುತ ಹಾಡುಗಳನ್ನು 'ಪಟ್ರೆ' ಚಿತ್ರದಲ್ಲಿ ವೇಸ್ಟ್ ಮಾಡಿದ್ದಾರೆ" ಎಂಬ ವಿಮರ್ಶೆಗೆ ಕೋಪಗೊಂಡು, ಸಿಕ್ಕಾಪಟ್ಟೆ ಕೂಗಾಡಿ, ಮೂಲೆ ಸೇರಿದ್ದ ಅದೇ ಶ್ರೀ ವಾಸ್ತವ್, ಈಗ ಲೂಸ್ ಮಾದ ಎಂಬ ಓಲ್ಡನ್ ಸ್ಟಾರ್ ಹಿಂದೆ ಬಿದ್ದಿದ್ದಾರೆ.

  ಅಜಿತ್‌ನನ್ನು ಹೀರೋ ಮಾಡಿದ್ದು ಇದೇ ಚಂದ್ರಶೇಖರ್. ಅದೇ ರೀತಿ ಅಜಿತ್ ತಾಯಿ ಪ್ರಮಿಳಾ ಅವರು ಒಂದು ಕೋಟಿಯನ್ನು ಹಾಳು ಮಾಡಿದ್ದೂನಿಜ. ಈಗ ಇನ್ನೊಬ್ಬ ನಿರ್ಮಾಪಕರನ್ನು ಹುಡುಕಿತಂದಿದ್ದಾರೆ! ಇದೇ ಹದಿನೆಂಟರಂದು ಚಿತ್ರದ ಮುಹೂರ್ತ ನಡೆಯಲಿದ್ದು, ಅದಕ್ಕೆ 'ಕಾಲಾಯ ತಸ್‌ಮೈ ನಮಃ' ಎಂದು ಹೆಸರಿಟ್ಟಿದ್ದಾರೆ.

  ಅಂದಹಾಗೆ 'ಪಟ್ರೆ ಲವ್ಸ್ ಪದ್ಮಾ' ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅಜಿತ್ ಅಭಿನಯಿಸಿದ್ದರು. ಕೃತಿಕಾ, ದೀಪಿಕಾ, ವಿಜಯಲಕ್ಷ್ಮಿ, ಪವಿತ್ರಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. 'ಕಾಲಾಯ ತಸ್ ಮೈ ನಮಃ' ಚಿತ್ರ ಕಾಲಾಯ ಠುಸ್‌ಮೈ ನಮಃ ಆಗದಿರಲಿ ಎನ್ನುವುದು ನಮ್ಮ ಹಾರೈಕೆ ಮತ್ತು ಎಚ್ಚರಿಕೆ!

  English summary
  Patre loves Padma fame director Chandrashekhar Srivathsa back with one more film in Kannada. The movie is titled as Kalaya Tasmai Namaha. The regular shooting of the movie starts from Feb 18, 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X