ಪ್ರಚಂಡ ಕುಳ್ಳ ದ್ವಾರಕೀಶ್ ಗೆ ಪ್ರಿಯಾಮಣಿ ಸಾಥ್

ಕಥೆ, ಚಿತ್ರಕಥೆಯ ಜತೆ ನಿರ್ದೇಶನದ ಹೊಣೆಯೂ ವಿ. ಕುಮಾರ್ ಅವರದ್ದು. ಇದೇ ಮಾರ್ಚ್ 23ರ ಯುಗಾದಿಯ ಶುಭ ದಿನದಂದು ಸೆಟ್ಟೇರುತ್ತಿರುವ ಚಾರುಲತಾಗೆ ಉಳಿದ ಪಾತ್ರಗಳ ಆಯ್ಕೆ ಸೇರಿದಂತೆ ಇನ್ನಿತರ ಸಂಗತಿಗಳನ್ನು ದ್ವಾರಕೀಶ್ ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರಂತೆ. ಸದ್ಯಕ್ಕೆ ತಮ್ಮ ನಿರ್ಮಾಣದ ಕಿಚ್ಚ ಸುದೀಪ್ ನಾಯಕತ್ವದ 'ವಿಷ್ಣುವರ್ಧನ' ಶತಕ ಭಾರಿಸಿದ ಸಂತೋಷವನ್ನು ದ್ವಾರ್ಕಿ ಅನುಭವಿಸುತ್ತಿದ್ದಾರೆ.
ಬೆಂಗಳೂರಿನ ಮೇನಕಾದಲ್ಲಿ ಮಾತ್ರವಲ್ಲದೇ, ಕರ್ನಾಟಕದ ಸುಮಾರು ಎಂಟು ಕಡೆ ಇನ್ನೂ ವಿಷ್ಣುವರ್ಧನ ಚೆನ್ನಾಗಿ ಓಡುತ್ತಿದ್ದಾನೆ. ಶೀರ್ಷಿಕೆ ವಿವಾದದಲ್ಲಿ ಸಿಲುಕಿದರೂ, ಅತ್ಯುತ್ತಮ ಕಥೆ ಮತ್ತು ನಿರ್ದೇಶನದಿಂದಾಗಿ ಚಿತ್ರ ಗೆದ್ದು ಟೀಕಾಕಾರರು ಬಾಯಿ ಮುಚ್ಚಿ ಕಣ್ಣುಕಣ್ಣು ಬಿಡುತ್ತಿದ್ದಾರೆ. ಒಟ್ಟಿನಲ್ಲಿ ದ್ವಾರಕೀಶ್ ಖುಷಿಯಾಗಿದ್ದಾರೆ ಹಾಗೂ ಮತ್ತೊಂದು ಚಿತ್ರದತ್ತ ತಮ್ಮ ಚಿತ್ತ ಹರಿಯಬಿಟ್ಟಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actor Dwarakish is going to Produce another movie called Charulata, very shortly. Priyamani acts in Lead Role.


Click it and Unblock the Notifications











