ಥುತ್,..ತಿರುಮಲದಲ್ಲೂ ಜೋಗಯ್ಯ ಟಿಕೆಟ್ ಸಿಗಲಿಲ್ಲ
ಹೊಸಪೇಟೆಯ ಮೀರ್ ಅಲಂ ಚಿತ್ರಮಂದಿರದಲ್ಲಿ ಗುರುವಾರ ಮಧ್ಯರಾತ್ರಿ ನಂತರ ಜನಜಂಗುಳಿ ಸೇರಿದ್ದರೆ ಅದು ಜೋಗಯ್ಯನದ್ದೇ ದರ್ಬಾರು ಎಂದು ಸುಲಭವಾಗಿ ಹೇಳಬಹುದು. ಜೋಗಯ್ಯ ಚಿತ್ರ ಅಪರ ವೇಳೆಯಲ್ಲಿ 2.30ಕ್ಕೆ ರಿಲೀಸ್ ಆಗುತ್ತಿದೆ. ಬಹುಶಃ ಕಪಾಲಿಯಲ್ಲಿ ಬೆಳಗಿನ ಆಟ ಆರಂಭವಾಗುವ ಮುಂಚೆ ಬೇರೆ ಕಡೆ ಎಲ್ಲಾ ಜೋಗಯ್ಯನ ಅಬ್ಬರ ಆರಂಭವಾಗಿರುತ್ತದೆ ಎಂದು ಪ್ರೇಮ್ ಹೇಳುತ್ತಾರೆ.
ಬೆಂಗಳೂರಿನ ಕಪಾಲಿ ಮುಂತಾದ ದೊಡ್ಡ ಥೇಟರ್ ಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಖಾಲಿ ಆದಮೇಲೆ, ಚಿಕ್ಕ ಚಿತ್ರಮಂದಿರಗಳತ್ತ ಅಭಿಮಾನಿಗಳು ದೌಡಾಯಿಸಿದ್ದರು. ಅಗರದ ತಿರುಮಲ ಚಿತ್ರಮಂದಿರದಲ್ಲಿ ಇಂದಿನಿಂದ ಅಡ್ವಾನ್ಸ್ ಬುಕ್ಕಿಂಗ್ ಆರಂಭ ಎಂದು ಬೋರ್ಡ್ ಬಿದ್ದಿದ್ದೆ ತಡ ನೆನ್ನೆ ರಾತ್ರಿಯಿಂದ ಅಲ್ಲಿ ಅಭಿಮಾನಿಗಳು ಬೀಡು ಬಿಟ್ಟಿದ್ದರು. ನಾಳೆ ಚಿತ್ರದ ಆರಂಭದೊಂದಿಗೆ ಕಟೌಟ್ ಗೆ ಭಾರಿ ಹೂವಿನ ಹಾರ ಹಾಕುವ ಕಾರ್ಯಕ್ರಮ ಕೂಡಾ ಹಮ್ಮಿಕೊಳ್ಳಲಾಗಿದೆ. [ಟ್ರೈಲರ್ ನೋಡಿ]
ಗೌಡನಪಾಳ್ಯದ ಶ್ರೀನಿವಾಸ ಥೇಟರ್ ನಲ್ಲಿ ಬೆಳಗ್ಗೆ 8 ಗಂಟೆಗೆ ಮೊದಲ ಪ್ರದರ್ಶನ ಆರಂಭವಾಗಲಿದೆ. ದಿನವಾಹಿ ಜೋಗಯ್ಯ ಒಟ್ಟು ಐದು ಪ್ರದರ್ಶನಗಳನ್ನು ಇಲ್ಲಿ ಕಾಣಲಿದೆ. ಉಳಿದಂತೆ ಕಪಾಲಿ, ಸಂತೋಷ್ ಹಾಗೂ ವೀರೇಶ್ ಚಿತ್ರಮಂದಿರದಲ್ಲಿ 3ಡಿ ಸೌಲಭ್ಯ ದೊರೆಯಲಿದೆ. 3ಡಿ ಹಾಡು ಹಾಗೂ ಫೈಟ್ ಉಳ್ಳ ಭಾರತದ ಪ್ರಥಮ ಚಿತ್ರ ಎಂಬ ಹೆಗ್ಗಳಿಕೆ ಜೋಗಯ್ಯನದ್ದಾಗಿದೆ. ಒಟ್ಟಿನಲ್ಲಿ ಜೋಗಯ್ಯನ ಜಾತ್ರೆಗೆ ಎಲ್ಲವೂ ಸಿದ್ಧವಾಗಿದೆ.


Click it and Unblock the Notifications












