ರಕ್ಷಿತಾಗೆ ನೋ ಎಂಟ್ರಿ ಎಂದಿದ್ದ ಜೋಗಿ ಪ್ರೇಮ್
ನಂಬಿದ್ರೆ ನಂಬಿ ಬಿಟ್ಟರೆ ಬಿಡಿ.. ಜೋಗಯ್ಯ ಚಿತ್ರದ ಒಂದು ತುಣುಕು ದೃಶ್ಯ ಕೂಡಾ ನಿರ್ಮಾಪಕಿ ರಕ್ಷಿತಾ ಪ್ರೇಮ್ ನೋಡಿಲ್ಲವಂತೆ. ಅಷ್ಟೇ ಏಕೆ, ಚಿತ್ರೀಕರಣ ಸಂದರ್ಭದಲ್ಲೂ ನಿರ್ಮಾಪಕಿ ದೂರನೇ ಇರುತ್ತಿದ್ದರಂತೆ. ಜೋಗಯ್ಯ ಚಿತ್ರ ವಿಮರ್ಶೆ ಓದಿ.
'ಏನ್ ಮಾಡೋದು ಸಾರ್ ಶೂಟಿಂಗ್ ಟೈಮ್ ನಲ್ಲಿ ನಾನು ಒಂಥರಾ ದೂರ್ವಾಸಾ ಇದ್ದಂಗೆ, ಯಾರೂ ಏನೂ ನೋಡಲ್ಲ. ರಕ್ಷಿತಾ ಬಂದ್ರೂ ಅಣ್ಣನ(ಶಿವರಾಜ್) ಮಾತಾಡಿಸಿಕೊಂಡು ಹೋಗ್ತಾ ಇದ್ರು, ನನ್ನ ಹತ್ರಾ ಬರ್ತಾ ಇರ್ಲಿಲ್ಲ'. ಆದರೆ, ಚಿತ್ರದ ಫಸ್ಟ್ ಕಾಪಿ ನನ್ನಎಲ್ಲಾ ತಂತ್ರಜ್ಞರಿಗೂ ತೋರಿಸಿದ್ದೀನಿ. ಏನಾದರೂ ತಪ್ಪು ಒಪ್ಪುಗಳಿದ್ದರೆ ತಿದ್ದಿಕೊಳ್ಳಬಹುದು ಅಂಥಾ ಅಷ್ಟೇ.
ಮುಂಚಿನಿಂದಲೂ ಅಷ್ಟೇ ನಾನು ಯಾವ ಸಿನಿಮಾನೂ ನಿರ್ಮಾಪಕರಿಗೆ ತೋರಿಸಿಲ್ಲ. ಜೋಗಯ್ಯ ನನ್ನ ಹೋಂ ಬ್ಯಾನರ್ ಆದ್ರೂ ಈ ನಿಯಮ ಮುರಿದಿಲ್ಲ ಎನ್ನುತ್ತಾರೆ ಪ್ರೇಮ್.
ಹೌದು ಬಿಗ್ ಬಜೆಟ್ ಚಿತ್ರನೇ ಮಾಡ್ತೀರಾ ಏಕೆ? ನನ್ನ ಚಿತ್ರ ಅಂದಮೇಲೆ ಮುಗಿತು ನಾನು ಪ್ರತಿ ದೃಸ್ಯ(ಶ್ಯ) ಹೇಗ್ ಬರ್ಬೇಕೋ ಅಂತಾ ಮನ್ಸ್ ನಲ್ಲಿ ಅನ್ಕೋತೀನಿ ಹಾಗೆ ತೆಗೆತ್ತೀನಿ.. ದುಡ್ಡು ಎಷ್ಟು ಖರ್ಚು ಆಯ್ ತ್ತೈತಿ ಅದೆಲ್ಲ ತಲೆ ಬಿಸಿ ನಿರ್ಮಾಪಕರಿಗೆ.. ನಾನು ಯಾವುದಕ್ಕೂ ಕಾಮ್ ಪ್ರಮೈಸ್ ಆಗಕ್ಕಿಲ್ಲ..ನಾನ್ ಸ್ಟೈಲೇ ಹಾಗೆ
ಕೋಟಿಕೋಟಿ ಹಾಗಿದ್ರೂ ಚಿತ್ರ ಲಾಸ್ ಆಗಕ್ಕಿಲ್ಲ ಒಂದು ವಾರದಲ್ಲೇ ಬಾಕ್ಸ್ ಫೀಸ್ ನಲ್ಲಿ ರೆಕಾರ್ಡ್ ಮಾಡಿಬಿಡುತ್ವೆ ಎಂದು ಪ್ರೇಮ್ ತಮ್ಮ ಬೆನ್ನು ತಾವೇ ತಟ್ಟಿಕೊಂಡರು.


Click it and Unblock the Notifications











