ಜೋಗಯ್ಯ ರೌಡಿಸಂ ಚಿತ್ರ ಅಲ್ಲವೇ ಅಲ್ಲ, ಕಥೆ ಎಳೆ

By Mahesh
<ul id="pagination-digg"><li class="next"><a href="/news/18-movie-jogayya-producer-rakshitha-prem-restriction-aid0039.html">Next »</a></li></ul>

ಜೋಗಿ ಚಿತ್ರದಂತೆ ಜೋಗಯ್ಯದಲ್ಲಿ ಶಿವಣ್ಣ ಲಾಂಗ್ ಹಿಡಿದು ಆರ್ಭಟಿಸುವ ಪೋಸ್ಟರ್ ನೋಡಿರಬಹುದು ಆದ್ರೆ ಜೋಗಯ್ಯ ಪಕ್ಕಾ ರೌಡಿಸಂ ಚಿತ್ರ ಅಲ್ಲವೇ ಅಲ್ಲ ಎನ್ನುತ್ತಾರೆ ಪ್ರೇಮ್. ಜೋಗಯ್ಯ ಚಿತ್ರ ವಿಮರ್ಶೆ ಓದಿ.

ಜೋಗಿಯಲ್ಲಿ ಹೀರೋ ಹೇಗೆ ರೌಡಿಸಂ ಫೀಲ್ಡ್ ಗೆ ಎಂಟ್ರಿ ಕೊಟ್ಟ ಎಂಬ ಕಥೆ ಬರುತ್ತದೆ. ಜೋಗಯ್ಯದಲ್ಲಿ ರೌಡಿಸಂ ಫೀಲ್ಡ್ ನಲ್ಲಿ ಹೀರೋ ಹೇಗೆ ಲೆಜೆಂಡ್ ಆಗುತ್ತಾನೆ ಎಂಬುದನ್ನು ಕಾಣಬಹುದು. ಶಿವಣ್ಣ ಹಿಡಿದು ಕೊಳ್ಳುವ ಮಂಚು, ಲಾಂಗು ಕೂಡಾ ವಿಶಿಷ್ಟವಾಗಿ ರೂಪಿಸಲಾಗಿದೆ.

ಓಡಲೇ ಹಾಡಿನಲ್ಲಂತೂ ಶಿವಣ್ಣ ಅಭಿನಯ ನೋಡಲು ಎರಡು ಕಣ್ಣು ಸಾಲದು ಎಂದು ಪ್ರೇಮ್ ಹೇಳುತ್ತಾರೆ.

ಜೋಗಿಯಲ್ಲಿ ಇದ್ದಂತೆ ಜೋಗಯ್ಯದಲ್ಲೂ ತಾಯಿ ಸೆಂಟಿಮೆಂಟ್ ಇರುತ್ತಾ? ಅಯ್ಯೋ ಅದು ಇಲ್ಲದಿದ್ದರೆ ಹೇಗೆ ಇಡೀ ಚಿತ್ರದ ಜೀವಾಳವೇ ಅದು. ಪ್ರೇಮ್ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ತೆಗೆದಂಗೆ ಬೇರೆ ಯಾರು ತೆಗೆಯೋಕ್ಕಿಲ್ಲ ಎಂಬ ಹೊಗಳಿಕೆ ಮಾತನ್ನು ನಾನು ಉಳಿಸಿಕೊಳ್ಳಬೇಕು.

ಹೊಡಿಮಗ ಕಿರಿಕ್ ಫ್ಲ್ಯಾಶ್ ಬ್ಯಾಕ್: ಹುಚ್ಚು ಅಭಿಮಾನಿಗಳ ಕಾಟ ತಡೆಯೋದು ಸಕತ್ ಕಷ್ಟ. ಜೋಗಿ ರಿಲೀಸ್ ಆದ ಟೈಮ್ ನಲ್ಲಿ ಎಷ್ಟೋ ಅಭಿಮಾನಿಗಳು ಮಚ್ಚು ಲಾಂಗ್ ಸಮೇತ ಥೇಟರ್ ಗೆ ಬಂದಿದ್ದರು. ಹೊಡಿಮಗ ಹಾಡು ಅಷ್ಟೊಂದು ಕ್ರೇಜ್ ಹುಟ್ಟಿ ಹಾಕಿತ್ತು. ಕಡೆಗೆ ನಂಗೆ ಏನು ಮಾಡೋಕೆ ತಿಳಿದೆ ಅಣ್ಣಾವ್ರ(ಡಾ.ರಾಜ್) ಬಳಿ ಹೋಗಿ ಕೇಳಿಕೊಂಡೆ.

ಈ ರೀತಿ ಸೆನ್ಸೇಷನ್ ಆಗುವುದು ಸಾಮಾನ್ಯ. ಜನರ ಮನಸ್ಸು ನಿಧಾನವಾಗಿ ಎಲ್ಲದ್ದಕ್ಕೂ ಒಗ್ಗಿಕೊಳ್ಳುತ್ತದೆ. ಹಾಡಿನ ಸಾಹಿತ್ಯ ನಾನು ಕೇಳಿದ್ದೇನೆ. 'ನಾನು ಅನ್ನುವವನು ಕೊನೆಗು ಮಣ್ಣು..' ಸಾಲು ಅರ್ಥಪೂರ್ಣವಾಗಿದೆ., ಧೈರ್ಯವಾಗಿರಿ ಏನು ಆಗಲ್ಲ ಎಂದು ರಾಜ್ ಬೆನ್ನುತಟ್ಟಿ ಕಳಿಸಿದ್ದರು. ಆ ಘಟನೆ ಆದ ಮೇಲೆ ಜನರ ನಾಡಿ ಮಿಡಿತ ಏನು ಎಂದು ನನಗೆ ಸರಿಯಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಯಿತು ಎಂದು ಬೆಸಗರ ಹಳ್ಳಿ ಹೈದ ಪ್ರೇಮ್ ಸಂತಸದಿಂದ ಹೇಳುತ್ತಾರೆ.

ಸಿಡಿ ಹಂಚಿಕೆ: ಈ ಮುಂಚೆ ಘೋಷಿಸಿದಂತೆ ಪಿವಿಆರ್, ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಹೊರತುಪಡಿಸಿ ಬೆಂಗಳೂರು, ಕೋಲಾರ, ತುಮಕೂರಿನ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದು ವಾರ ಎಲ್ಲಾ ಪ್ರದರ್ಶನಗಳಲ್ಲಿ' ಜೋಗಯ್ಯ' ಚಿತ್ರದ ಆಡಿಯೋ ಸಿಡಿಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಪ್ರೇಮ್ ಹೇಳಿದರು.

<ul id="pagination-digg"><li class="next"><a href="/news/18-movie-jogayya-producer-rakshitha-prem-restriction-aid0039.html">Next »</a></li></ul>

More from Filmibeat

English summary
Director Prem remembers Dr. Rajkumar's supporting words during the release of Jogi. Now Hat Trick Hero Shivarajkumar lead movie Jogayya all set to release on 19th August. Prem is full confident about the success.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X