ಸುಚಿತ್ರಾದಲ್ಲಿ ಮಿ. ಶಾನಭಾಗ್ಸ್ ಶಾಪ್ ಕಿರುಚಿತ್ರ

By Prasad

Shanbhag, Premier Book Shop owner
ಗುಬ್ಬಚ್ಚಿ ಗೂಡಿನಂತಿದ್ದ ಪುಟ್ಟ ಅಂಗಡಿಯಲ್ಲಿ ಮಾಳಿಗೆವರೆಗೆ ಏರಿನಿಂತಿದ್ದ ಆ ಪುಸ್ತಕಗಳ ಸಾಲನ್ನು, ಅಲ್ಲಿ ಹುದುಗಿ ಕುಳಿತಿದ್ದ ಅಪರೂಪದ ಜ್ಞಾನಭಂಡಾರವನ್ನು ಹೊಂದಿದ್ದ 'ಪ್ರೀಮಿಯರ್ ಬುಕ್ ಸ್ಟೋರ್'ನ್ನು ಬೆಂಗಳೂರಿನ ಪುಸ್ತಕ ಪ್ರೇಮಿಗಳು ಮರೆಯಲು ಸಾಧ್ಯವೆ?

ಅದೇ ಪುಟ್ಟ ಗೂಡಿನಲ್ಲಿ ಪುಸ್ತಕ ರಾಶಿಗಳ ನಡುವೆ ಕುಳಿತು ಕೇಳಿದ ಪುಸ್ತಕವನ್ನು ಅದೆಲ್ಲಿಂದಲೋ ಹುಡುಕಿ ತಂದು ಕೊಡುತ್ತಿದ್ದ ಶಾನಭಾಗ್ ಅವರನ್ನೂ ಮರೆಯಲು ಸಾಧ್ಯವಿಲ್ಲ. ಸುಮಾರು 35 ವರ್ಷಗಳ ಕಾಲ ಬೆಂಗಳೂರಿಗರ ಜ್ಞಾನತೃಷೆಯನ್ನು ತಣಿಸಿದ ಶಾನಭಾಗ್ ಅವರ 'ಪ್ರೀಮಿಯರ್ ಬುಕ್ ಸ್ಟೋರ್' ಮತ್ತೆ ಸುದ್ದಿಯಲ್ಲಿದೆ.

ಶಾನಭಾಗ್ ಅವರು ಕಟ್ಟಿ ಬೆಳೆಸಿ, ಅಪಾರ ಅಭಿಮಾನಿಗಳನ್ನು ಗಳಿಸಿದ ಕಥೆ ಸಾಕ್ಷ್ಯಚಿತ್ರದ ಮುಖಾಂತರ ಮತ್ತೆ ಜನತೆಯ ಮುಂದೆ ಬಂದಿದೆ. 'ಮಿ. ಶಾನಭಾಗ್ಸ್ ಶಾಪ್' ಎಂಬ ಕಿರುಚಿತ್ರವನ್ನು 100 ಅಂಡ್ ಒನ್ ರುಪೀ ಪ್ರೊಡಕ್ಷನ್ ತಯಾರಿಸಿದ್ದು, ಭಾನುವಾರ ಜನವರಿ 23ರಂದು ಬೆಳಿಗ್ಗೆ 11 ಗಂಟೆಗೆ ಬನಶಂಕರಿ ಎರಡನೇ ಹಂತದಲ್ಲಿರುವ ಸುಚಿತ್ರಾ ಫಿಲ್ಮಂ ಸೊಸೈಟಿಯಲ್ಲಿ ಪ್ರದರ್ಶಿತವಾಗುತ್ತಿದೆ.

ಸುಚಿತ್ರಾ ಸ್ಕೂಲ್ ಆಫ್ ಸಿನೆಮಾ ಅಂಡ್ ಡ್ರಾಮ್ಯಾಟಿಕ್ ಆರ್ಟ್ಸ್ ಪ್ರಸ್ತುತಪಡಿಸುತ್ತಿರುವ ಈ ಕಿರುಚಿತ್ರವನ್ನು ಆಶಾ ಘೋಷ್ ನಿರ್ಮಿಸಿ ನಿರ್ದೇಶಿಸಿದ್ದಾರೆ. ಈ ಕಿರುಚಿತ್ರ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನ್ಯೂಯಾರ್ಕ್ ನಲ್ಲಿಯೂ ಪ್ರದರ್ಶಿತಗೊಂಡಿದೆ. ಈ ಚಿತ್ರದಲ್ಲಿ ಪ್ರೀಮಿಯರ್ ಬುಕ್ ಸ್ಕೋರ್ ನ ಇತಿಹಾಸ ಮತ್ತು ಅಭಿಮಾನ ಬೆಳೆಸಿಕೊಂಡಿದ್ದ ಓದುಗರ ಬಗ್ಗೆ ಶಾನಭಾಗ್ ಅವರು ಮಾತನಾಡಿದ್ದಾರೆ.

ಸುಚಿತ್ರಾದಲ್ಲಿ ಚಿತ್ರ ಪ್ರದರ್ಶನದ ನಂತರ 'How to manage change in Bangalore' ವಿಷಯ ಕುರಿತು ಸಂವಾದವೂ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 080-26711785. [ಪುಸ್ತಕ ಪ್ರೀತಿ]

More from Filmibeat

English summary
Suchitra school of cinema and dramatic arts is presenting a short film Mr. Shanbhag's Shop produced by 100&One Rupee Productions on Jan 23, Sunday at Suchitra Film Society, Banashankari, Bangalore. Shanbhag ran Premier book store in Bangalore for more than 35 years.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X