»   » ಕುತೂಹಲಕಾರಿ ಚಿತ್ರ "ನಂಪ್ರೀತಿ".. ನಿರೀಕ್ಷೆ ಕೂಡದು

ಕುತೂಹಲಕಾರಿ ಚಿತ್ರ "ನಂಪ್ರೀತಿ".. ನಿರೀಕ್ಷೆ ಕೂಡದು

Subscribe to Filmibeat Kannada

ಸಿನಿಮಾ ಮಾಡೋದು ಅಂದ್ರೆ ಏನ್ ತಮಾಷೆನಾ? ಇಲ್ಲಿ ದುಡ್ಡೇ ದೊಡ್ಡಪ್ಪ. ಉತ್ತಮ ಕಥೆ, ಚಿತ್ರಕಥೆ, ಸಂಭಾಷಣೆ, ನಟ-ನಟಿಯರ ಕಾಲ್ ಷೀಟ್ ... ಏನು ಬೇಕೆಂದರೂ ದುಡ್ಡು ಹಾಕಲೇ ಬೇಕು. ಅದಕ್ಕಾಗಿ ಐನಾತಿ ನಿರ್ಮಾಪಕರನ್ನು ಹುಡುಕಬೇಕು ಎನ್ನುವವರಿಗೆ ಯುವಕರ ತಂಡವೊಂದು ಸರಿಯಾಗಿ ಗೂಸಾ ಕೊಟ್ಟಿದೆ!

ಇದು ದೊಡ್ಡ ಬ್ಯಾನರ್‌ನ ಚಿತ್ರವಂತೂ ಅಲ್ಲವೇ ಅಲ್ಲ. ಈ ಚಿತ್ರದಲ್ಲಿ ಪ್ರಸಿದ್ಧ ನಾಯಕ, ನಾಯಕಿ ಹುಡುಕಿದರೂ ಕಾಣುವುದಿಲ್ಲ. ನಿಮ್ಮ ಅಮೂಲ್ಯವಾದ ಎರಡೂವರೆ ಗಂಟೆಗಳ ಕಾಲವನ್ನು ಹರಣ ಮಾಡುವುದಿಲ್ಲ.ಆದರೆ ಇದ್ವಾವ ಸೀಮೆ ಸಿನಿಮಾ ಎನ್ನುತ್ತೀರಾ?

ಚಿತ್ರದ ಹೆಸರು 'ನಂ ಪ್ರೀತಿ' ಅಂಥ. ಚಿತ್ರದ ಸಬ್ ಟೈಟಲ್ 'ನಿರೀಕ್ಷೆ ಕೂಡದು'! ಆದ ಕಾರಣ ಪಕ್ಕಾ ಫಾರ್ಮುಲಾ ಚಿತ್ರವನ್ನು ನಿರೀಕ್ಷಿಸಿ ಹೋಗುವಂತಿಲ್ಲ.ಒಂದೇ ದಿನ ಕೇವಲ 7 ಗಂಟೆಗಳಲ್ಲಿ 'ನಂ ಪ್ರೀತಿ' ಚಿತ್ರೀಕರಣಗೊಂಡಿದೆ. ಚಿತ್ರದ ಖರ್ಚು ಕೇವಲ 20 ಸಾವಿರ ರು.ಗಳು. 20 ನಿಮಿಷ ಕಾಲಾವಧಿ ಯ ಈ ಚಿತ್ರದಲ್ಲಿ 3 ಹಾಡುಗಳು ಇವೆ.

ಇಷ್ಟೆಲ್ಲಾ ವಿಶೇಷಗಳುಳ್ಳ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ ಕವೀಶ್ ಶೃಂಗೇರಿ ಅವರದ್ದು. ನಾಯಕ ನಟನಾಗಿ ಕುಶಾಲ್ ರಾಘವೇಂದ್ರ ಹಾಗೂ ನಾಯಕಿಯಾಗಿ ನಿರ್ಮಲಾ ನಟಿಸಿದ್ದಾರೆ. ಛಾಯಗ್ರಹಣ ಸುನಿಲ್ ಶಿವಮೊಗ್ಗ , ಚಿತ್ರಕ್ಕೆ ಸಂಗೀತ ಆನಂದ ಎನ್.ಕುಮಾರ್. ನಿರ್ಮಾಪಕ ಸಾಕ್ಷಿರಾಜ್.

ನಂ ಪ್ರೀತಿ ಚಿತ್ರದ ಪ್ರೀಮಿಯರ್ ಷೋ ಇದೇ ಭಾನುವಾರ (ಜೂ.22) ಸಂಜೆ 4 ಗಂಟೆಗೆ ಸುಚಿತ್ರಾ ಫಿಲ್ಮ್ ಸೊಸೈಟಿಯಲ್ಲಿ (ಬನಶಂಕರಿ 2ನೇ ಹಂತ, ಬೆಂ-70) ಆಯೋಜಿಸಲಾಗಿದೆ. ತಪ್ಪದೆ ಹೋಗಿ ವೀಕ್ಷಿಸಿ. ಚಿತ್ರತಂಡದೊಂದಿಗಿನ ಸಂವಾದದಲ್ಲಿ ಭಾಗವಹಿಸಿ ನಿಮ್ಮ ಕುತೂಹಲವನ್ನು ತಣಿಸಿಕೊಳ್ಳಿ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ರಾಜ್ ಕುಮಾರ್:9448171069
ರಾಘವೇಂದ್ರ:9886683008

ನಿರ್ಮಾಣಗಾರರ ಹಿನ್ನೆಲೆ: ಕ್ರಿಯಾಶೀಲ ನಿರ್ಮಾಪಕ ಸಾಕ್ಷಿರಾಜ್ ಅಲಿಯಾಸ್ ರಾಜ್ ಕುಮಾರ್ ಅವರು ಈಗಾಗಲೇ ಐಟಿರಂಗ ಕನ್ನಡಿಗರಿಗೆ ಟೀ ಶರ್ಟ್ ನಲ್ಲಿ ಕನ್ನಡ ಮೂಡಿಸಿ ಚಿರಪರಿಚಿತರಾಗಿದ್ದಾರೆ. ಇನ್ನೂ ಸಾಹಿತ್ಯಾಸಕ್ತರಿಗೆ ಅವರ ಸಮಾಜಸೇವಕರ ಸಮಿತಿ ತಂಡ, ಡಿವಿಜಿ ಕಾರ್ಯಕ್ರಮಗಳಿಂದ ಚಿರಪರಿಚಿತ. ಸಮಾಜ ಸೇವೆಯ ಉದ್ದೇಶವನ್ನೇ ತಿದ್ದಿ ಬರೆದಿರುವ ಇರುವ ತಂಡ ಗ್ರಾಮೀಣ ಭಾಗದ ಶಾಲೆ ನಡೆಸಿ, ಅಬಲಾಶ್ರಮಕ್ಕೆ ನೆರವು ನೀಡಿ ತನ್ನನ್ನು ತಾನು ಗುರುತಿಸಿಕೊಂಡಿದೆ.

(ದಟ್ಸ್‌ ಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada