ಮಹಾರಾಷ್ಟ್ರ ಶಾಸಕನ ಜೊತೆ ನವನೀತ್ ಕೌರ್ ಮದುವೆ
ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಹಾಟ್ ಮತ್ತು ಸೆಕ್ಸಿ ತಾರೆ ನವನೀತ್ ಕೌರ್‌ಗೆ ಕಂಕಣಬಲ ಕೂಡಿಬಂದಿದೆ. ಬಾಂದ್ರಾ ವಿಧಾನಸಭಾ ಕ್ಷೇತ್ರದ ಪಕ್ಷೇತರ ಶಾಸಕ ರವಿ ರಾಣ ಅವರನ್ನು ವರಿಸಲಿದ್ದಾರೆ ನವನೀತ್. ಈ ವರ್ಷಾಂತ್ಯಕ್ಕೆ ಇವರಿಬ್ಬರ ಮದುವೆ ನಡೆಯಲಿದೆ ಎನ್ನುತ್ತವೆ ಬಾಲಿವುಡ್ ಮೂಲಗಳು.
ತಮ್ಮ ವೃತ್ತಿ ಜೀವನಕ್ಕಿಂತ ಮದುವೆ ಬಹು ಮುಖ್ಯ ಎಂದು ನವನೀತ್ ಕೌರ್ ತೀರ್ಮಾನಿಸಿದ್ದಾರಂತೆ. ಪಂಜಾಬಿ ಬೆಡಗಿಗೆ ಕಡೆಗೂ ಕಂಕಣಬಲ ಕೂಡಿಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಮದುವೆ ಬಳಿಕ ಚಿತ್ರರಂಗಕ್ಕೆ ಗುಡ್ ಬೈ ಹೇಳಲಿದ್ದಾರೆ.
ಇನ್ನು ರವಿ ರಾಣಾ ಬಗ್ಗೆ ಹೇಳುವುದಾದರೆ, ಸಾಮಾನ್ಯವಾಗಿ ಒಬ್ಬ ರಾಜಕಾರಣಿ ಎಂದರೆ ವಯಸ್ಸು ಐವತ್ತು ದಾಟಿರುತ್ತದೆ ಎಂಬ ಚಿತ್ರಣ ಮೂಡುತ್ತದೆ. ಆದರೆ ರವಿ ರಾಣ ವಯಸ್ಸು ಮಾತ್ರ ಇನ್ನೂ ಇಪ್ಪತ್ತೊಂಬತ್ತು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ದರ್ಶನ' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಈಕೆ ಬಳಿಕ ತೆಲುಗಿನಲ್ಲಿ ಮಿಂಚಿದ್ದರು.


Click it and Unblock the Notifications











