twitter
    For Quick Alerts
    ALLOW NOTIFICATIONS  
    For Daily Alerts

    ಸಾರಥಿ,ಪರಮಾತ್ಮನಾಟಕ್ಕೆ ಬಾಕ್ಸ್ಆಫೀಸ್ ಧೂಳಿಪಟ!!

    |

    Box Office
    ಕನ್ನಡ ಚಿತ್ರದ ಮಾರುಕಟ್ಟೆ ಕುಸಿದಿಲ್ಲ ಎನ್ನುವುದಕ್ಕೆ ಈ ಎರಡು ಚಿತ್ರಗಳೇ ಉದಾಹರಣೆ. ದರ್ಶನ್ ಅಭಿನಯದ 'ಸಾರಥಿ' ಮತ್ತು ಪುನೀತ್ ಅಭಿನಯದ 'ಪರಮಾತ್ಮ' ಬಾಕ್ಸ್ ಆಫೀಸ್‌ನಲ್ಲಿ ಪೈಪೋಟಿಗೆ ಬಿದ್ದಂತೆ ತುಂಬಿದ ಪ್ರದರ್ಶನ ಕಾಣುತ್ತಿದೆ. ರಾಜ್ಯದಾದ್ಯಂತ ಎರಡೂ ಚಿತ್ರಗಳ ಕಲೆಕ್ಷನ್ ಯಾವ ರೀತಿ ಇದೆಯೆಂದರೆ ಈ ಚಿತ್ರಗಳು 2011ರ ಬ್ಲಾಕ್ ಬಸ್ಟರ್ ಚಿತ್ರದ ಪಟ್ಟಿಗೆ ಸೇರುವತ್ತ ಮುಂದಡಿ ಇಟ್ಟಿವೆ.

    130ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿರುವ 'ಸಾರಥಿ' ಚಿತ್ರ ವಾರ ವಾರ ತನ್ನ ಥಿಯೇಟರ್ ಸಂಖ್ಯೆಗಳನ್ನು ಹೆಚ್ಚುಸುತ್ತಾ ನಿರ್ಮಾಪಕರಿಗೆ, ಹಂಚಿಕೆದಾರರಿಗೆ ಮತ್ತು ಚಿತ್ರಮಂದಿರದ ಮಾಲೀಕರಿಗೆ ಜೇಬು ತುಂಬಾ ಹಣದ ಹೊಳೆ ಹರಿಸುತ್ತಿದೆ.

    'ಪರಮಾತ್ಮ' ಆಟ 95ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಜೋರಾಗಿಯೇ ನಡೆಯುತ್ತಿದೆ. ಬೆಂಗಳೂರಿನಲ್ಲಿರುವ ಎಲ್ಲಾ ಮಲ್ಟಿಪ್ಲೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನ ಕಾಣುತ್ತಿರುವುದು ಗಮನಾರ್ಹ. ಪಿವಿಆರ್‌ನಲ್ಲಿ ಚಿತ್ರ 7 ಪ್ರದರ್ಶನ ಕಾಣುತ್ತಿದ್ದರೆ, ಐನಾಕ್ಸ್‌ನಲ್ಲಿ ಐದು ಪ್ರದರ್ಶನ ಕಾಣುತ್ತಿದೆ.

    ಕನ್ನಡ ಚಿತ್ರ ಪ್ರದರ್ಶಿಸದ ಚಿತ್ರಮಂದಿರಗಳು ಈ ಎರಡು ಚಿತ್ರಗಳ ಕಲೆಕ್ಷನ್ ನೋಡಿ ಬೆರಗಾಗಿವೆ. ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಾದ ನರ್ತಕಿ ಮತ್ತು ಸಂತೋಷ್ ಚಿತ್ರ ಮಂದಿರದಲ್ಲಿ ಪುನೀತ್ ಮತ್ತು ದರ್ಶನ್ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟುತ್ತಿದೆ.

    ಎರಡು ಚಿತ್ರಗಳ ದರ್ಬಾರ್ ಯಾವ ರೀತಿ ಇದೆಯೆಂದರೆ ಬ್ಲ್ಯಾಕ್ ಟಿಕೆಟ್ ಮಾರುವವರು "ಬೇಕಾದ್ರೆ ತಗೊಳ್ರೀ.. ನೋಡ್ತಾ ಇರಿ ಹತ್ತೇ ನಿಮಿಷದಲ್ಲಿ ಟಿಕೆಟ್ ಎಲ್ಲಾ ಸೋಲ್ಡ್ ಔಟ್ ಆಗುತ್ತೆ ನೋಡಿ" ಎಂದು ಪ್ರೇಕ್ಷಕರಿಗೆ ಪುಸಲಾಯಿಸುತ್ತಿರುವುದು ಚಿತ್ರಮಂದಿರಗಳ ಮುಂದೆ ಕಾಣಬಹುದು. (ಒನ್‌ಇಂಡಿಯಾ ಕನ್ನಡ)

    English summary
    Two Kannada movies Sarathi and Paramathma doing wonder in Kannada Box office. Both films are heading towards Block Buster movies of 2011.
    Tuesday, October 18, 2011, 13:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X