»   » ಪ್ರಜ್ವಲ್ ದೇವರಾಜ್ ಭದ್ರನಿಗೆ ಸೆನ್ಸಾರ್ ಗ್ರೀನ್ ಸಿಗ್ನಲ್

ಪ್ರಜ್ವಲ್ ದೇವರಾಜ್ ಭದ್ರನಿಗೆ ಸೆನ್ಸಾರ್ ಗ್ರೀನ್ ಸಿಗ್ನಲ್

Posted By:
Subscribe to Filmibeat Kannada

ಪ್ರಜ್ವಲ್ ದೇವರಾಜ್ ಹಾಗೂ ಡೈಸಿ ಶಾ ಮುಖ್ಯಭೂಮಿಕೆಯಲ್ಲಿರುವ ಚಿತ್ರ ಭದ್ರ. ಎಂ.ಎನ್.ಕೆ ಮೂವೀಸ್ ಲಾಂಛನದಲ್ಲಿ ಎಂ.ಎನ್.ಕುಮಾರ್ ನಿರ್ಮಿಸಿರುವ 'ಭದ್ರ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ಚಿತ್ರದ ತಾರಾಗಣದಲ್ಲಿ ಸತ್ಯಜಿತ್, ಶರಣ್, ಬುಲೆಟ್ ಪ್ರಕಾಶ್, ಕಾಶಿ, ಗಿರೀಶ್, ಸಂಪತ್ ಮುಂತಾದವರಿದ್ದಾರೆ. ಮಹೇಶ್‌ರಾವ್ ಚಿತ್ರಕಥೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ಶ್ರೀಗುರು ಸಂಗೀತ ನೀಡಿದ್ದಾರೆ.

ಜೈಆನಂದ್ ಛಾಯಾಗ್ರಹಣ, ಶ್ರೀಕಾಂತ್ ತೆಂಗಿನತೋಟ ಸಂಕಲನ, ರವಿವರ್ಮ ಸಾಹಸ ನಿರ್ದೇಶನ ಹಾಗೂ ಉಮೇಶ್‌ಕುಮಾರ್ ನಿರ್ಮಾಣ ನಿರ್ವಹಣೆಯಿರುವ ಈ ಚಿತ್ರಕ್ಕೆ ಶಂಕರ್ ಬಿಲ್ಲೆಮನೆ ಸಂಭಾಷಣೆ ಬರೆದಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

English summary
Director Magesh Rao's forthcoming movie ‘Bhadra’ has now received an official green signal as the movie has earned a clean U/A certificate’ by the censor board. The film featuring Prajwal Devraj and Daisy Shah in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada