ರೋಮ್, ಇಟಲಿ, ಆಸ್ಟ್ರೀಯಾ ಸುತ್ತಿಬಂದ ಜಾಕಿ
ಪಾರ್ವತಮ್ಮ ರಾಜ್ ಕುಮಾರ್ ನಿರ್ಮಿಸುತ್ತಿರುವ 'ಜಾಕಿ' ವಿದೇಶದಲ್ಲಿ 3 ಗೀತೆಗಳನ್ನು ಚಿತ್ರೀಕರಿಸಿಕೊಂಡು ಹಿಂತಿರುಗಿದೆ. ಪುನೀತ್ ರಾಜ್ ಕುಮಾರ್ ಮತ್ತು ಭಾವನಾ ಅಭಿನಯದಲ್ಲಿ ಈ ಹಾಡುಗಳ ನ್ನು ಸತ್ಯ ಹೆಗಡೆ ಛಾಯಾಗ್ರಹಣದಲ್ಲಿ ಚಿತ್ರೀಕರಿಕೊಳ್ಳಲಾಗಿದೆ.
ರೋಮ್, ಇಟಲಿ, ಆಸ್ಟ್ರೀಯಾ, ಸೌತ್ ಆಫ್ರಿಕ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರೀಕರಣಗೊಂಡ 3 ಹಾಡುಗಳ ಸಾಹಿತ್ಯ ಹೀಗಿದೆ. 'ಎರಡು ಜಡೆಯನು ಎಳೆದು ಹೇಳುವೆನು', 'ಶಿವಾ ಅಂತ ಹೋಗುತ್ತಿದ್ದೆ ರೋಡಿನಲ್ಲಿ' ಹಾಗೂ 'ಎಡವಟ್ಟಾಯ್ತು ತಲೆ ಕೆಟ್ಟೋಯ್ತು' ಎಂಬ ಗೀತೆಗಳಿಗೆ ಪುನೀತ್ ಮತ್ತು ಭಾವನಾ ಹೆಜ್ಜೆ ಮೇಲೆ ಹೆಜ್ಜೆ ಹಾಕಿ ಕುಣಿದಿದ್ದಾರೆ.
ಈ ಬೊಂಬಾಟ್ ಹಾಡುಗಳಿಗೆ ಹರ್ಷ, ಇಮ್ರಾನ್ ಮತ್ತು ತೆಲುಗು ಚಿತ್ರರಂಗದ ಗಣೇಶ್ ನೃತ್ಯ ಸಂಯೋಜಿಸಿದ್ದಾರೆ. ದುನಿಯಾ ಸೂರಿ ಆಕ್ಷನ್, ಕಟ್ ಹೇಳಿರುವ ಈ ಹಾಡುಗಳು ಸತ್ಯ ಹೆಗಡೆ ಕ್ಯಾಮರಾದಲ್ಲಿ ಬಂಧಿಯಾಗಿವೆ. ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಹರಿಕೃಷ್ಣ ಸಂಗೀತ ಪೋಣಿಸಿದ್ದಾರೆ. 'ಜಾಕಿ' ಚಿತ್ರ ಸೆಪ್ಟೆಂಬರ್ ನಲ್ಲಿ ತೆರೆಕಾಣಲಿದೆ ಎಂದು ನಟ, ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ತಿಳಿಸಿದ್ದಾರೆ.
ರವಿವರ್ಮ ಹಾಗೂ ಡ್ಯಾನಿ ಅವರ ಸಾಹಸ ಸಂಯೋಜನೆ ಚಿತ್ರಕ್ಕಿದೆ. ಪುನೀತ್ ಮತ್ತು ಭಾವನಾ ಜತೆಯಲ್ಲಿ ರಂಗಾಯಣ ರಘು, ಹೊನ್ನವಳ್ಳಿ ಕೃಷ್ಣ, ರವಿಕಾಳೆ, ಸತ್ಯಜಿತ್, ಶೋಭರಾಜ್, ರಾಜು ತಾಳಿಕೋಟೆ, ಬುಲೆಟ್ ಪ್ರಕಾಶ್, ಸಂಪತ್, ಉಮೇಶ್, ರವಿಕಿರಣ್, ಸಿದ್ದರಾಜು, ಹರ್ಷಿಕಾ, ನಿಶಾ, ನಾಯಿಚಂದ್ರು, ಪೆಟ್ರೋಲ್ ಪ್ರಸನ್ನ, ಅಪೂರ್ವ, ಸುಶ್ಮಾ ಬಿರಾದಾರ್ ಅವರನ್ನು ತೆರೆಯ ಮೇಲೆ ಕಾಣಬಹುದು.


Click it and Unblock the Notifications











