ತಂಗಿ ಮದುವೆಗೆ ಕೈಕೊಟ್ಟ ರಾಧಿಕಾ ಪಂಡಿತ್!

By Rajendra

ನಟಿ ರಾಧಿಕಾ ಪಂಡಿತ್ ತಂಗಿ ಪ್ರಿಯಾ ಲವ್ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಹುಡುಗನ ಹೆಸರು ರಾಹುಲ್. ಇವರಿಬ್ಬರ ಮದುವೆ ಇಂದು (ಅ.18) ನೆರವೇರಿತು. ಆದರೆ ರಾಧಿಕಾ ಪಂಡಿತ್ ಮಾತ್ರ ಮದುವೆಗೆ ಬರಲಿಲ್ಲ. ಅಯ್ಯೋ ಶಿವನೇ ರಾಧಿಕಾ ಪಂಡಿತ್ ಹೀಗ್ಯಾಕೆ ಮಾಡಿದರು. ಇಷ್ಟಕ್ಕೂ ಮದುವೆ ಎಲ್ಲಿ ನಡೆಯಿತು. ಏನಿದು ಕತೆ? ಇದೇ ತಾನೆ ನಿಮ್ಮ ಅನುಮಾನ. ಮುಂದೆ ಓದಿ ಎಲ್ಲವೂ ನಿಮಗೇ ಅರ್ಥವಾಗುತ್ತದೆ!

ಹಳೆ ಮೈಸೂರು ಪ್ರಾಂತ್ಯದಲ್ಲಿ ಬೊಂಬೆ ಕೂರಿಸುವ ಪದ್ಧತಿ ಸುಮಾರು 500 ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ಇಂದಿನ ಗಡಿಬಿಡಿಯಲ್ಲಿ ಇಂತಹ ಶ್ರೀಮಂತ ಪರಂಪರೆಯನ್ನು ಆಚರಿಸುವ ಪುರುಸೊತ್ತಾದರೂ ಎಲ್ಲಿದೆ? ಈ ಸಾಂಸ್ಕೃತಿಕ ಆಚಾರ ವಿಚಾರ, ಪದ್ಧತಿ ಪರಂಪರೆಗಳನ್ನು ನೆನಪಿಸುವ ಕೆಲಸವನ್ನು ಸಖತ್ ಹಾಟ್ ರೇಡಿಯೋ ಸ್ಟೇಷನ್ ರೇಡಿಯೋ ಮಿರ್ಜಿ ಆಯೋಜಿಸಿತ್ತು.

ಬೊಂಬೆಗಳ ಮದುವೆಗೆ ಸೋಮವಾರ (ಅ.18)ರ ಮಧ್ಯಾಹ್ನ 3 ರಿಂದ 4 ಗಂಟೆಯ ಶುಭ ಮುಹೂರ್ತವನ್ನು ನಿಗದಿಪಡಿಸಲಾಗಿತ್ತು. ಈ ಮದುವೆಗೆ ಎಲ್ಲ ಮಾಧ್ಯಮ ಮಿತ್ರರನ್ನು ಆಹ್ವಾನಿಸಲಾಗಿತ್ತು. ಬೊಂಬೆಗಳಿಗೆ ರಾಹುಲ್ ಮತ್ತು ಪ್ರಿಯಾ(ರಾಧಿಕಾ ಪಂಡಿತ್ ತಂಗಿ) ಎಂದು ಹೆಸರಿಡಲಾಗಿತ್ತು. ಈ ಮದುವೆಗೆ ಅತಿಥಿ, ಅಭ್ಯಾಗತರೆಲ್ಲಾ ಆಗಮಿಸಿದ್ದರು.

ಆದರೆ ಎಷ್ಟು ಹೊತ್ತು ಕಾದರೂ ಹೆಣ್ಣಿನ ಕಡೆಯವರು ಬರಲಿಲ್ಲ. ಗಂಡಿನ ಕಡೆಯವರೇನೋ ಮದುವೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಪುರೋಹಿತರೂ ಬಂದದ್ದಾಯಿತು. ಮುಹೂರ್ತ ಸಮೀಪಿಸುತ್ತಿದ್ದರೂ ಹೆಣ್ಣಿನ ಕಡೆಯವರು ನಾಪತ್ತೆ. ಇನ್ನೇನು ಗಡಿಯಾರದ ಮುಳ್ಳು ಮುಹೂರ್ತ ಮೀರುವುದರಲ್ಲಿತ್ತು ಅಷ್ಟರಲ್ಲಿ ಹೆಣ್ಣಿನ ಕಡೆಯವರ ದಿಢೀರೆಂದು ಬಂದೇ ಬಿಟ್ಟರು.

ಕೈಯಲ್ಲಿ ಅಕ್ಷತೆ ಕಾಳು ಹಿಡಿದು ನಿಂತಿದ್ದವರೆಲ್ಲಾ ನಿಟ್ಟುಸಿರು ಬಿಟ್ಟರು. ಪುರೋಹಿತರು "ಮಾಂಗಲ್ಯಂ ತಂತು ನಾನೇನಾ..." ಮಂತ್ರಗಳನ್ನು ಪಠಿಸುತ್ತಿದ್ದರೆ ಅಕ್ಷತೆ ಹಾಕಿ ಎಲ್ಲರೂ ಮದುವೆಗೆ ಶುಭ ಕೋರಿದರು. ಅಂತೂ ಇಂತೂ ಮದುವೆ ಮುಗೀತಪ್ಪಾ ಎಂಬ ಸಮಾಧಾನ. ಬಳಿಕ ಕೊಬ್ಬರಿ ಹೋಳಿಗೆ, ಚಕ್ಕುಲಿ, ಕೋಡುಬಳೆ ವಿನಿಯೋಗವಾಯಿತು.

'ಗಾನ ಬಜಾನಾ' ನಾಯಕ ತರುಣ್ ಚಂದ್ರಹಾಗೂ ನಾಯಕಿ ರಾಧಿಕಾ ಪಂಡಿತ್ ಹೆಣ್ಣಿನ ಕಡೆಯವರು. ಬೊಂಬೆ ಪ್ರಿಯಾ ತನ್ನ ತಂಗಿ ಎಂದು ತರುಣ್ ಚಂದ್ರ ಹೇಳಿದರು. ಇದು ಗುರು ಹಿರಿಯರು ನಿಶ್ಚಯಿಸಿದ ಮದುವೆಯೋ ಅಥವಾ ಪ್ರೇಮ ವಿವಾಹವೋ ಎಂದು ಕೇಳಲಾಗಿ. ಅವರು ಇದು ಲವ್ ಮ್ಯಾರೇಜ್ ಅಂದ್ರು. ಅದಕ್ಕೆ ಇರಬೇಕು ಮುನಿಸಿಕೊಂಡು ರಾಧಿಕಾ ಪಂಡಿತ್ ಮದುವೆಗೆ ಬಂದಿರಲಿಲ್ಲ.

ರೇಡಿಯೋ ಮಿರ್ಚಿ ಕಾರ್ಯಕ್ರಮ ಮುಖ್ಯಸ್ಥೆಯಾದ ದಿವ್ಯಶ್ರೀ ಅವರು ಮದುವೆ ಗಂಡು ರಾಹುಲ್‌ರನ್ನು ಆಶೀರ್ವದಿಸಿದರು. ದಸರಾ ಹಬ್ಬದ ಪ್ರಮುಖ ಆಕರ್ಷಣೆಗಳಲ್ಲಿ ಬೊಂಬೆ ಹಬ್ಬವೂ ಒಂದು. ನನ್ನ ಬೊಂಬೆ ಮಗನ ಮದುವೆಯನ್ನು ಕಣ್ಣಾರೆ ನೋಡಿ ನನಗೆ ತುಂಬಾ ಸಂತಸವಾಯಿತು ಎಂದು ಅವರು ಹೇಳಿದರು. ಒಟ್ಟಾರೆಯಾಗಿ ಅದು ಬೊಂಬೆ ಮದುವೆ ಎಂಬುದನ್ನು ಬಿಟ್ಟರೆ ಉಳಿದಂತೆ ನಿಜವಾದ ಮದುವೆಯನ್ನು ಮೀರುವಂತಿತ್ತು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X