ರಜಿನಿಯ ಮೆಚ್ಚಿನ ನಾಯಕಿ ಯಾರು ಗೊತ್ತಾ?

ಎಂಜಿಆರ್, ಶಿವಾಜಿಗಣೇಶನ್ ಹಾಗೂ ಡಾ. ರಾಜ್ ಅವರೊಡನೆ ಸರೋಜಾದೇವಿ ಅವರ ಅಭಿನಯ ನೋಡಿ ಮರುಳಾಗಿ ಹೋಗಿದ್ದೆ. ಅವರು ನಾಯಕಿ ಆಗಿದ್ದ ಕಾಲದಲ್ಲಿ ನಾನು ಇದ್ದಿದ್ದರೆ ಹೇಗಾದರೂ ಅವಕಾಶ ಗಿಟ್ಟಿಸಿಕೊಂಡು ನಟಿಸುತ್ತಿದೆ ಎಂದು ಭಾವಪರವಶರಾಗಿ ರಜಿನಿ ಹೇಳಿದ್ದಾರೆ.
ರಜಿನಿ ಅವರ ಪತ್ನಿ ಲತಾ ಅವರು ನಡೆಸುವ ಆಶ್ರಮ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿರಿಯ ನಟಿ ಬಿ. ಸರೋಜಾದೇವಿ ಅವರನ್ನು ಸನ್ಮಾನಿಸಲಾಯಿತು.ನಟಿ ಎಸ್ ಎನ್ ಲಕ್ಷ್ಮಿ, ನಿರ್ದೇಶಕ ಮುಕ್ತಾ ಶ್ರೀನಿವಾಸನ್ ಅವರನ್ನು ಕೂಡ ಗೌರವಿಸಲಾಯಿತು. ರಜಿನಿ ಅವರ ಮಗಳು ಸೌಂದರ್ಯ ಹಾಗೂ ನಟ ಶಿಂಬು, ನಕುಲ್ ಅವರು ಈ ಶಾಲೆಯ ಹಳೆಯ ವಿದ್ಯಾರ್ಥಿಗಳಾಗಿರುವುದು ವಿಶೇಷ.


Click it and Unblock the Notifications