ರಮ್ಯಾ ಮತ್ತು ರಾಫೆಲ್ ಸೇರಬೇಕು ಅಂತ ಬರೆದಾಗಿದೆ

By Rajendra

'ಸಂಜು ವೆಡ್ಸ್ ಗೀತಾ' ಚಿತ್ರ ಸೆಂಚುರಿ ಬಾರಿಸಿದೆ. ಈ ಸಂಭ್ರಮವನ್ನು ಹಂಚಿಕೊಳ್ಳಲು ಚಿತ್ರತಂಡ ಜು.17ರಂದು ವಿದ್ಯಾಪೀಠ ಬಳಿಯ ಶಂಕರನಾಗ್ ಸರ್ಕಲ್ ಬಳಿ ಕಾರ್ಯಕ್ರಮ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗೃಹ ಸಚಿವ ಆರ್ ಅಶೋಕ್ ಹಾಗೂ ತಮಿಳು ಚಿತ್ರ ನಟ ಧನುಷ್ ಆಗಮಿಸಿದ್ದರು.

ಇದೆಲ್ಲಕ್ಕಿಂತ ಮತ್ತೊಂದು ಸರ್‌ಫ್ರೈಸ್ ಎಂದರೆ ನಟಿ ರಮ್ಯಾ ತನ್ನ ಬಾಯ್‌ಫ್ರೆಂಡ್ ರಾಫೆಲ್ ಜೊತೆ ಕಾರ್ಯಕ್ರಮಕ್ಕೆ ಬಂದಿದ್ದದ್ದು. ಈ ಹಿಂದೆ ತನ್ನ ಬಾಯ್‌ಫ್ರೆಂಡ್ ಜೊತೆ ಕೂತು ಸಂಜು ವೆಡ್ಸ್ ಗೀತಾ ಚಿತ್ರವನ್ನು ಬೆಂಗಳೂರು ಸಾಗರ್ ಚಿತ್ರಮಂದಿರದಲ್ಲಿ ನೋಡಿ ಎಂಜಾಯ್ ಮಾಡಿದ್ದರು.

ಈಗ ಶತದಿನೋತ್ಸವ ಕಾರ್ಯಕ್ರಮದಲ್ಲಿ ಇಬ್ಬರೂ ಆಗಮಿಸುವ ಮೂಲಕ ಎಲ್ಲರ ಗಮನವನ್ನು ಸೆಳೆದರು. ಸದ್ಯಕ್ಕೆ ತಮ್ಮ ಕೈಯಲ್ಲಿ ಪ್ರಾಜೆಕ್ಟ್‌ಗಳಿದ್ದು ಅವು ಮುಗಿಸಿ ಬಳಿಕವಷ್ಟೆ ಮದುವೆಯಾಗುವುದಾಗಿ ರಮ್ಯಾ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಚಿತ್ರ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ರಮ್ಯಾ ಕೃತಜ್ಞತೆಗಳನ್ನು ತಿಳಿಸಿದರು.

ಈ ವರ್ಣರಂಜಿತ ಕಾರ್ಯಕ್ರಮಕ್ಕೆ ಚಿತ್ರದ ನಾಯಕ ನಟ ಶ್ರೀನಗರ ಕಿಟ್ಟಿ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಾಕ್‌ಲೈನ್ ವೆಂಕಟೇಶ್, ಸುರೇಶ್ ಗೌಡ, ಜಗ್ಗೇಶ್, ರವಿ ಬೆಳಗೆರೆ, ಯೋಗರಾಜ್ ಭಟ್, ಸೂರಿ, ಪ್ರೇಮ್ ಮುಂತಾದರು ಉಪಸ್ಥಿತರಿದ್ದರು. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
The unit of movie Sanju Weds Geetha had a grand function to celebrate and Tamil actor Danush was the main star attraction on the occasion. But the biggest surprise was that Golden girl Ramya a.k.a. Divya Spandana attended the event with her boyfriend Raphael.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X