'ಹರಿಶ್ಚಂದ್ರ ಘಾಟ್'ಚಿತ್ರದಲ್ಲಿ ರವಿ ಬೆಳಗೆರೆ

By Staff

ಬಿಡುವಿಲ್ಲದ ಚಟುವಟಿಕೆಗಳ ನಡುವೆಯೇ 'ಹಾಯ್ ಬೆಂಗಳೂರು' ಪತ್ರಿಕೆಯ ಸಂಪಾದಕ ರವಿ ಬೆಳಗೆರೆ ಮತ್ತೆ ಬಣ್ಣ ಹಚ್ಚಿದ್ದಾರೆ! ಬಿ.ಪಿ.ಶೀನಿವಾಸ್ ನಿರ್ದೇಶನ ಮತ್ತು ನಿರ್ಮಾಣದಲ್ಲಿ ಬರುತ್ತಿರುವ 'ಹರಿಶ್ಚಂದ್ರ ಘಾಟ್' ಚಿತ್ರದಲ್ಲಿ ರವಿ ಅಭಿನಯಿಸಲಿದ್ದಾರೆ. ಶ್ರೀನಿವಾಸ್ ಅವರ ಮತ್ತೊಂದು ಚಿತ್ರ 'ಮುಸ್ಸಂಜೆ ಗೆಳತಿ' ಬಿಡುಗಡೆಯಾಗಬೇಕಿದೆ.

ಸ್ಮಶಾನದಲ್ಲಿ ಕೆಲಸ ಮಾಡುವ ಅನಾಥ ಹುಡುಗನೊಬ್ಬನ ಕತೆಯನ್ನ್ನು ಹರಿಶ್ಚಂದ್ರ ಘಾಟ್ ಚಿತ್ರ ಒಳಗೊಂಡಿದೆ. ಸ್ಮಶಾಣ ಕಾಯುವ ಹುಡುಗ ಶ್ರೀಮಂತ ಹುಡುಗಿಯ ಪ್ರೇಮದ ಬಲೆಗೆ ಬೀಳುತ್ತಾನೆ. ರವಿ ಬೆಳಗೆರೆ ಈ ಚಿತ್ರದಲ್ಲಿ ಮುಖ್ಯ ಪಾತ್ರವನ್ನು ಪೋಷಿಸಲಿದ್ದಾರೆ.

ಹೆಂಡತಿಯನ್ನು ಕಳೆದುಕೊಂಡು ವಿಧುರನ ಪಾತ್ರ ರವಿ ಅವರದು. ಆಕೆ ಇನ್ನೂ ಜೀವಂತವಾಗಿದ್ದಾರೆ ಎಂದು ಭಾವಿಸಿ ನಿತ್ಯ ಸ್ಮಶಾಣಕ್ಕೆ ಬರುತ್ತಿರುತ್ತಾರೆ. ತಮ್ಮ ಪ್ರೀತಿಯ ಮಡದಿಯನ್ನುನೆನೆದು ಕಣ್ಣೀರಿಡುವ ಸೂಕ್ಷ್ಮ ಭಾವನೆಗಳನ್ನು ವ್ಯಕ್ತಪಡಿಸುವ ಪಾತ್ರದಲ್ಲಿ ರವಿ ಕಾಣಿಸಲಿದ್ದಾರೆಎನ್ನುತ್ತಾರೆ ಶ್ರೀನಿವಾಸ್. ಇದು ರವಿ ಬೆಳಗೆರೆ ಮಾತ್ರ ಮಾಡುವಂತಹ ಪಾತ್ರ. ಹಾಗಾಗಿ ಅವರನ್ನೇ ಆಯ್ಕೆ ಮಾಡಿದ್ದೇನೆ. ರವಿ ಸಹ ಒಪ್ಪಿಕೊಂಡಿದ್ದಾರೆ ಎನ್ನುತ್ತಾರೆ ಶ್ರೀನಿವಾಸ್.

ರವಿ ಬೆಳಗೆರೆ ಈಗಾಗಲೇ ವಾರಸ್ದಾರ, ಗಂಡ ಹೆಂಡತಿ ಮತ್ತು ಮಾದೇಶ ಚಿತ್ರಗಳಲ್ಲಿ ನಟಿಸಿದ್ದಾರೆ. 'ಮುಖ್ಯಮಂತ್ರಿ ಐ ಲವ್ ಯು' ಎಂಬ ಚಿತ್ರದ ಮೂಲಕ ಅವರು ನಿರ್ದೇಶನಕ್ಕೂ ಕೈ ಹಾಕಿದ್ದರು. ಸದ್ಯಕ್ಕೆ ವಿವಾದಾತ್ಮಕ ಅಂಶಗಳಿರುವ ಕಾರಣ ಆ ಚಿತ್ರ ಕೋರ್ಟಿನ ಕಟಕಟೆಯಲ್ಲಿದೆ.

ಇತ್ತೀಚೆಗಷ್ಟೇ 'ಹರಿಶ್ಚಂದ್ರ ಘಾಟ್' ಚಿತ್ರ ಬೆಂಗಳೂರು ಕಾಕ್ಸ್ ಟೌನ್ ನ ಹರಿಶ್ಚಂದ್ರ ಘಾಟ್ ಸ್ಮಶಾಣದಲ್ಲಿ ಸೆಟ್ಟೇರಿತು. 'ಲಾಸ್ಟ್ ಸ್ಟಾಪ್' ಎಂಬ ಅಡಿಬರಹವನ್ನು ಈ ಚಿತ್ರಕ್ಕೆ ನೀಡಲಾಗಿದೆ. ಶೇಕಡ 50 ರಷ್ಟು ಚಿತ್ರೀಕರಣ ಸ್ಮಶಾಣದಲ್ಲೇ ನಡೆಯಲಿದೆಯಂತೆ. ಈ ಚಿತ್ರದಲ್ಲಿ ಶ್ರೀನಿವಾಸ್ ಧನಿಕ ವ್ಯಕ್ತಿಯಾಗಿ ಕಾಣಿಸಲಿದ್ದಾರೆ. ಅವರ ಮಗಳು ಶಾಲಿನಿ ಈ ಚಿತ್ರದಲ್ಲಿ ಅವರ ಮಗಳಾಗಿಯೇ ಕಾಣಿಸಲಿದ್ದಾರೆ. ಚಿತ್ರದ ನಾಯಕಿ ಸಹ ಅವರು.

ಗಂಗಾ ಕಾವೇರಿ ಚಿತ್ರದಲ್ಲಿ ನಟಿಸಿದ್ದ ಅರ್ಜುನ್ ಈ ಚಿತ್ರದ ನಾಯಕ ನಟ. ಜೈಪಾಲ್ ಸಂಗೀತ ಚಿತ್ರಕ್ಕಿದೆ. ಶಿವಸಮಯ ಅವರ ಚಿತ್ರಕತೆ ಮತ್ತು ಸಾಹಿತ್ಯವಿದೆ. ಮುಸ್ಸಂಜೆ ಗೆಳತಿ ಚಿತ್ರ ಆಗಸ್ಟ್ 28ರಂದು ಬಿಡುಗಡೆಯಾಗಲಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X