ಕನ್ನಡ ನಿರ್ಮಾಪಕರಿಗೆ ಸಮೀರಾ ರೆಡ್ಡಿ ಮಸ್ತ್ ಆಫರ್

By Rajendra

ಬಾಲಿವುಡ್ ನಟಿ ಸಮೀರಾ ರೆಡ್ಡಿ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದ ನಟಿ. ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಬಂಗಾಳಿ ಚಿತ್ರಗಳಲ್ಲಿ ಅಭಿನಯಿಸಿರುವ ಈಕೆಯ ಜೀವನದಲ್ಲಿ ತೀರದ ಬಯಕೆಯೊಂದು ಕಾಡುತ್ತಿದೆ.

ಬಹುಶಃ ಆಕೆಯ ಮದುವೆ ಇರಬಹುದು ಎಂದು ನೀವು ತಿಳಿದುಕೊಂಡರೆ ತಪ್ಪಾಗುತ್ತದೆ. ಸುಮಾರು ಭಾಷೆಗಳಲ್ಲಿ ಅಭಿನಯಿಸಿರುವ ತಾವು ಕನ್ನಡ ಚಿತ್ರದಲ್ಲಿ ನಟಿಸಿಲ್ಲ ಎಂಬುದೇ ಆಕೆಯ ಕೊರಗು. ಇದೇ ತಮ್ಮನ್ನು ಬಹುಕಾಲದಿಂದ ಕಾಡುತ್ತಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.

"ಕನ್ನಡ ಚಿತ್ರಗಳನ್ನು ನಾನು ಬಹಳ ಇಷ್ಟಪಡುತ್ತೇನೆ. ಬಾಲ್ಯದಿಂದಲೂ ಹಲವಾರು ಕನ್ನಡ ಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ. ನಟಿಯಾಗಿ ಬದಲಾದ ನಂತರ ನನಗೆ ಇದುವರೆಗೂ ಕನ್ನಡದಿಂದ ಯಾವುದೇ ಆಫರ್‌ಗಳು ಬಂದಿಲ್ಲ. ಕನ್ನಡದಲ್ಲಿ ನನಗೆ ಬಹಳಷ್ಟು ಗೆಳೆಯರಿದ್ದಾರೆ. ಅವರು ಬಯಸಿದರೆ ತಾನು ಕನ್ನಡದಲ್ಲಿ ನಟಿಸಲು ಸಿದ್ಧ" ಎಂದಿದ್ದಾರೆ.

"ಕನ್ನಡದಲ್ಲಿ ಅವಕಾಶಗಳು ಬರಬಹುದು ಎಂದು ಚಾತಕ ಪಕ್ಷಿಯಂತೆ ಕಾಯುತ್ತಿದ್ದೇನೆ. ಬರಿ ಕಾದದ್ದೇ ಬಂತು. ಇದುವರೆಗೂ ಕನ್ನಡ ಚಿತ್ರರಂಗದಿಂದ ಯಾರೊಬ್ಬರೂ ತಮ್ಮನ್ನು ಸಂಪರ್ಕಿಸಲಿಲ್ಲ.ಒಂದು ವೇಳೆ ಕರೆಬಂದರೆ ಕೂಡಲೆ ಒಪ್ಪಿಕೊಳ್ಳುತ್ತೇನೆ " ಎಂದು ಸವಾಲಿನಂತೆ ಮಾತುಮುಗಿಸಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Actress Sameera Reddy said that I have acted in almost all the leading languages in the Indian Cinema. But, I have not acted in Kannada movies alone. That is my one of the main unfulfilled desire.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X