ಶಶಾಂಕ್ ಆಕ್ಷನ್, ಕಟ್‌ನಲ್ಲಿ ಪುನೀತ್ ರಾಜ್ ಕುಮಾರ್
'ಕೃಷ್ಣನ್ ಲವ್ ಸ್ಟೋರಿ' ಚಿತ್ರದ ಮೂಲಕ ಹ್ಯಾಟ್ರಿಕ್ ಬಾರಿಸಿದ ನಿರ್ದೇಶಕ ಶಶಾಂಕ್ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾಯಕ ನಟ ಬೇರಾರು ಅಲ್ಲ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್. ಸೂರಿ ನಿರ್ದೇಶನದ ಚಿತ್ರದ ಬಳಿಕ ಶಶಾಂಕ್, ಪುನೀತ್ ಕಾಂಬಿನೇಷನ್ ಚಿತ್ರ ಸೆಟ್ಟೇರಲಿದೆ.
ಈ ಚಿತ್ರಕ್ಕೆ ಶ್ರೀನಿವಾಸಮೂರ್ತಿ, ಸುರೇಶ್ ಗೌಡ ನಿರ್ಮಾಪಕರು. ಈಗಾಗಲೆ ಶಶಾಂಕ್ ಜೊತೆ ಶ್ರೀನಿವಾಸಮೂರ್ತಿ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಸದ್ಯಕ್ಕೆ 'ಜರಾಸಂಧ' ಚಿತ್ರದಲ್ಲಿ ಬ್ಯುಸಿಯಾಗಿರುವ ಶಶಾಂಕ್ ಆ ಚಿತ್ರದ ಬಳಿಕ ಚಿತ್ರಕತೆ ಹೆಣೆಯಲಿರುವುದಾಗಿ ತಿಳಿಸಿದ್ದಾರೆ.
ಯೋಗರಾಜ್ ಭಟ್, ಪುನೀತ್ ಕಾಂಬಿನೇಷನ್ ಚಿತ್ರ 'ಪರಮಾತ್ಮ", ಅದಾದ ಬಳಿಕ ಸೂರಿ ನಿರ್ದೇಶನದ ಚಿತ್ರ ಸೆಟ್ಟೇರಬೇಕಾಗಿದೆ. ಇವೆಲ್ಲಾ ಮುಗಿದ ಬಳಿಕವಷ್ಟೇ ಶಶಾಂಕ್ ನಿರ್ದೇಶನದಪುನೀತ್ ಚಿತ್ರ ಸೆಟ್ಟೇರಲಿದೆ. ಅಲ್ಲಿಯವರೆಗೂ ಚಿತ್ರಕತೆ ಹೆಣೆಯಲು ಶಶಾಂಕ್‌ಗೆ ಸಾಕಷ್ಟು ಸಮಯವೂ ಸಿಗಲಿದೆ.
"ಚಿತ್ರದ ನಿರ್ಮಾಪಕ ಸುರೇಶ್ ಗೌಡ ತಮ್ಮನ್ನು ಭೇಟಿ ಮಾಡಿ ಅತ್ಯುತ್ತಮ ಚಿತ್ರಕತೆ ರಚಿಸಲು ಹೇಳಿದ್ದಾರೆ. ಪುನೀತ್ ನನ್ನ ಮೆಚ್ಚಿನ ನಟ. ನನ್ನ ವೃತ್ತಿ ಜೀವನದಲ್ಲಿ ಮರೆಯಲಾಗದ ಚಿತ್ರ ಇದಾಗಲಿದೆ" ಎಂದಿದ್ದಾರೆ ಶಶಾಂಕ್. ಒಟ್ಟಿನಲ್ಲಿ ಭರವಸೆಯ ನಿರ್ದೇಶಕನಿಗೆ ಯಶಸ್ವಿ ನಟ ಸಿಕ್ಕಂತಾಗಿದೆ. [ಪುನೀತ್]


Click it and Unblock the Notifications











