»   » ಪರಮೇಶಿಗೆ ಶಿವಣ್ಣನ ವಿಭಿನ್ನ ಪ್ರಚಾರ ತಂತ್ರ

ಪರಮೇಶಿಗೆ ಶಿವಣ್ಣನ ವಿಭಿನ್ನ ಪ್ರಚಾರ ತಂತ್ರ

Posted By:
Subscribe to Filmibeat Kannada

ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಬೇರೆ ಭಾಷೆಯವರೇ ಜಾಸ್ತಿ ಅನ್ನುವುದು ಸಹಿಸಿಕೊಳ್ಳಲು ಕಸ್ಟವಾದರೂ ನಿಜ. "ಗಾರ್ಡನ್ ಸಿಟಿ", "ಕಾಸ್ಮೋಪಾಲಿಟನ್ ಸಿಟಿ"ಎಂದು ಕರೆಸಿಕೊಳ್ಳುವ ಈ ನಮ್ಮ ಬೆಂಗಳೂರು ದೇಶದ ಎಲ್ಲ ಭಾಗದ ಜನರನ್ನು ಆಕರ್ಷಿಸಿ ಇಲ್ಲೇ ನೆಲೆವುರುವಂತೆ ಮಾಡುತ್ತದೆ. ಇಲ್ಲಿ ಇರುವವರೆಲ್ಲ ಕನ್ನಡ ಚಿತ್ರವನ್ನು ನೋಡುತ್ತಾರಾ? ಉತ್ತರ - ಇಲ್ಲ.

ಅಥವಾ ನಮ್ಮ ನಿರ್ದೇಶಕರಿಗೆ ಮುಂಗಾರು ಮಳೆ, ದುನಿಯಾ ಅಥವಾ ಮಿಲನ ಚಿತ್ರದ ಹಾಗೆ ಮತ್ತೆ ಅದೇ ಗುಣಮಟ್ಟದಚಿತ್ರ ನಿರ್ಮಿಸಲು ಆಗುತ್ತಾ? ಯಾಕೆಂದರೆ ಉತ್ತಮ ಚಿತ್ರಗಳನ್ನು ಅನ್ಯ ಭಾಷಿಗರು ಕೂಡ ನೋಡುವುದರಿಂದ ಪ್ರಚಾರ ತಂತ್ರದಲ್ಲಿ ವಿಭಿನ್ನತೆ ಅಗತ್ಯ. ಯಾಕೆಂದರೆ ನಮ್ಮ ಕನ್ನಡ ಚಿತ್ರರಂಗದ ವ್ಯಾಪ್ತಿ ಬಹಳ ಚಿಕ್ಕದು, ತೆಲುಗು, ತಮಿಳಿನ ಹಾಗೆ ಅಲ್ಲ.

ಈ ಕನ್ನಡೇತರರನ್ನು ನಮ್ಮ ಕನ್ನಡ ಚಿತ್ರವನ್ನು ನೋಡುವ೦ತೆ ಮಾಡಲು ನಮ್ಮ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ನಿರ್ಮಾಪಕ ಮತ್ತು ನಿರ್ದೇಶಕರಿಗೆ ಹೊಸ ತಂತ್ರ ಹೇಳಿಕೊಟ್ಟಿದ್ದಾರೆ. ನಮ್ಮ ಕನ್ನಡ ಚಿತ್ರದ ಬ್ಯಾನರ್, ಪೋಸ್ಟರ್ ಅಥವಾ ಚಿತ್ರಕ್ಕೆ ಸಂಬಂಧಪಟ್ಟ ಯಾವುದೇ ಜಾಹಿರಾತುಗಳನ್ನು ಕನ್ನಡದ ಜೊತೆಗೆ ಇಂಗ್ಲಿಷ್ ನಲ್ಲೂ ಬಿಡುಗಡೆ ಮಾಡಬೇಕೆಂದು ಶಿವಣ್ಣನ ಸಲಹೆ . ಈ ತರದ ಜಾಹಿರಾತುಗಳಿಂದ ಕನ್ನಡೇತರರು ಕೂಡ ಚಿತ್ರದ ಬಗ್ಗೆ ಮಾಹಿತಿ ಪಡೆದು ಹೆಚ್ಚಿನ ಸಂಖ್ಯೆಯಲ್ಲಿ ಚಿತ್ರ ವೀಕ್ಷಿಸಲು ಬರಬಹುದು ಎಂದು ಶಿವರಾಜ್ ಕುಮಾರ್ ಅಭಿಪ್ರಾಯ.

ಪರಮೇಶಿ ಪಾನವಾಲ ಚಿತ್ರದ ಧ್ವನಿ ಸುರಳಿ ಬಿಡುಗಡೆ ಸಮಾರಂಭದ ನಂತರ ಚಿತ್ರದ ಪ್ರಚಾರದ ಬಗ್ಗೆ ಪ್ರಶ್ನಿಸಿದಾಗ ಶಿವರಾಜ್ ಮೇಲ್ಕಂಡ ಮಾತುಗಳನ್ನು ಹೇಳಿದರು. "ನಾನು ನನ್ನ ಈ ಹಿಂದಿನ ಚಿತ್ರದ ಸೋಲು ಅಥವಾ ಗೆಲುವಿನ ಬಗ್ಗೆ ಜಾಸ್ತಿ ಯೋಚಿಸದೆ ಮುಂದಿನ ಚಿತ್ರದ ಗೆಲುವಿನ ಬಗ್ಗೆ ಆಲೋಚಿಸುತ್ತೇನೆ" ಎಂದರು. ಶಿವರಾಜ್ ಅಭಿನಯದ ಪರಮೇಶಿ ಪಾನವಾಲ ಬಿಡುಗಡೆಗೆ ಸಿದ್ದವಾಗಿದ್ದು, 'ನಂದ' ಮತ್ತು 'ಹೊಡಿಮಗ' ಶೂಟಿಂಗ್ ಕೆಲಸ ಮುಗಿದಿದೆ.

(ದಟ್ಸ್ ಕನ್ನಡ ಸಿನಿ ಡೆಸ್ಕ್)

ಪರಮೇಶ ಪಾನ್ ವಾಲ ಧ್ವನಿಸುರಳಿ ಬಿಡುಗಡೆ | ಸುರ್ವೀನ್ ಚಾವ್ಲಾ ಗ್ಯಾಲರಿ

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X