ತೆಲುಗಿನಲ್ಲಿ ಕಿಚ್ಚ ಸುದೀಪ್‌ಗೆ ಭರ್ಜರಿ ಛಾನ್ಸ್
ಕಿಚ್ಚ ಸುದೀಪ್‌ಗೆ ತೆಲುಗು ಚಿತ್ರರಂಗದಲ್ಲಿ ಭರ್ಜರಿ ಛಾನ್ಸ್ ಸಿಕ್ಕಿದೆ. 'ಮಗಧೀರ'ದಂತಹ ಭಾರಿ ಬಜೆಟ್ ಚಿತ್ರ ನಿರ್ದೇಶಿಸಿದ್ದ, ತೆಲುಗು ಚಿತ್ರರಂಗದ ಯಶಸ್ವಿ ನಿರ್ದೇಶಕ ಎಸ್ ಎಸ್ ರಾಜಮೌಳಿ ಆಕ್ಷನ್, ಕಟ್‌ನಲ್ಲಿ ಸುದೀಪ್ ಚಿತ್ರ ಸೆಟ್ಟೇರಲಿದೆ. ಚಿತ್ರಕ್ಕೆ 'ಈಗ' ಎಂದು ಹೆಸರಿಡಲಾಗಿದೆ. ಆನಿಮೇಷನ್ ಮತ್ತು ಲೈವ್ ಆಕ್ಷನ್ ಚಿತ್ರ ಇದಾಗಿದೆ.
ಈ ಚಿತ್ರವನ್ನು ಸಹ ನಿರ್ಮಾಣ ಮಾಡಲು ವಾಲ್ಟ್ ಡಿಸ್ನಿ ಕಂಪನಿಯನ್ನು ಸಂಪರ್ಕಿಸಲಾಗಿದೆಯಂತೆ. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಖಳನಟನಾಗಿ ನಟಿಸಲು ಈಗಾಗಲೆ ತಮ್ಮ ಒಪ್ಪಿಗೆ ಸೂಚಿಸಿದ್ದಾರೆ. ಈ ವಿಷಯವನ್ನು ರಾಜಮೌಳಿ ಟ್ವೀಟ್ ಮಾಡುವ ಮೂಲಕ ಅತ್ತ ತೆಲುಗು ಇತ್ತ ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ.
"ರಾಮ್ ಗೋಪಾಲ್ ವರ್ಮಾ ಅವರ 'ರಣ್' ಹಾಗೂ 'ರಕ್ತ ಚರಿತ್ರ' ಚಿತ್ರಗಳನ್ನು ನೋಡಿದ್ದೇನೆ. ಸುದೀಪ್ ಅವರ ನಟನೆ ಇಷ್ಟವಾಯಿತು. ಹಾಗಾಗಿ ಅವರನ್ನು ಸಂಪರ್ಕಿಸಿದೆ. ಕೂಡಲೆ ಅವರು ಈಗ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದರು" ಎಂದು ಟ್ವೀಟ್ ಮಾಡಿದ್ದಾರೆ ರಾಜ ಮೌಳಿ.
More from Filmibeat
ಸುದೀಪ್ ರಕ್ತ ಚರಿತ್ರ ಎಸ್ ಎಸ್ ರಾಜಮೌಳಿ ಕಿಚ್ಚ ಸುದೀಪ್ ಈಗ ರಾಮ್ ಗೋಪಾಲ್ ವರ್ಮಾ ರಣ್ ಟ್ವಿಟ್ಟರ್ sudeep eega ss rajamouli kichcha sudeep rakta charitra twitter


Click it and Unblock the Notifications











