ಕಾಲೇಜು ದಿನಗಳಲ್ಲಿ ಕಿರಾತಕನಾಗಿದ್ದೆ; ಯಶ್
ಕಿರಾತಕ ಅಂದ್ರೆ ಯಾರು? ಅವನೊಬ್ಬ ಮಹಾ ತರ್ಲೆ, ಉಡಾಳ, ಪೋಕರಿ, ತಂಟೆಕೋರ ಎನ್ನಬಹುದು. ಕಾಲೇಜು ದಿನಗಳಲ್ಲಿ ನಾನು ಅಷ್ಟೆ 'ಕಿರಾತಕ'ನಾಗಿದ್ದೆ ಎನ್ನುತ್ತಾರೆ ಯುವನಟ ಯಶ್. ಅವರು ಹಾಗೆ ಅನ್ನಲು ಕಾರಣವೂ ಇದೆ. ಏಕೆಂದರೆ ಅವರು ಈಗ ಕಿರಾತಕ ಚಿತ್ರದ ನಾಯಕ ನಟ.
ಈ ಚಿತ್ರದ ಚಿತ್ರೀಕರಣ ಮೈಸೂರರು ಮತ್ತು ಮಂಡ್ಯದಲ್ಲಿ ಭರದಿಂದ ನಡೆಯುತ್ತಿದೆ. ಚಿತ್ರದ ಮುಖ್ಯ ಸನ್ನಿವೇಶಗಳನ್ನು ಇಲ್ಲಿಯೇ ಚಿತ್ರೀಕರಿಸಲಾಗುತ್ತದೆ. ಇನ್ನೂ ಒಂದು ವಾರ ಕಾಲ ತಾವು ಮೈಸೂರಿನಲ್ಲಿಯೇ ಇರುವುದಾಗಿ ಯಶ್ ತಿಳಿಸಿದ್ದಾರೆ. ಇದು ತಮಿಳಿನ ಕಲಾವಾಣಿ ಚಿತ್ರದ ರೀಮೇಕ್.
ಮೂಲದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಭವ್ಯಾ ಕನ್ನಡ ಚಿತ್ರದಲೂ ನಾಯಕಿಯಾಗಿ ಕಾಣಿಸುತ್ತಿದ್ದಾರೆ. ಚಿತ್ರದಲ್ಲಿ ಯಶ್ ಅವರ ತಾಯಿಯಾಗಿ ನಟಿ ತಾರಾ ಅಭಿನಯಿಸುತ್ತಿದ್ದಾರೆ. ಇದೊಂದು ಹಾಸ್ಯ ಪ್ರಧಾನ ಚಿತ್ರವಾಗಿದ್ದು ಗ್ರಾಮೀಣ ಹಿನ್ನೆಲೆಯಲ್ಲಿ ಕತೆ ಸಾಗುತ್ತದೆ ಎನ್ನುತ್ತಾರೆ ಯಶ್. ಪ್ರದೀಪ್ ಚಿತ್ರದ ನಿರ್ದೇಶಕರು.


Click it and Unblock the Notifications











