twitter
    For Quick Alerts
    ALLOW NOTIFICATIONS  
    For Daily Alerts

    ಅಮೆರಿಕಾದಲ್ಲಿ ಕನ್ನಡ ಸಿನಿಮಾಗಳ ನಕಲಿ ವಿಸಿಡಿ ?

    By Staff
    |

    * ದಟ್ಸ್‌ಕನ್ನಡ ಬ್ಯೂರೊ

    ಅಮೆರಿಕಾದ ಮಾರುಕಟ್ಟೆಗಳಲ್ಲಿ ಕನ್ನಡ ಚಿತ್ರಗಳ ನಕಲಿ ವಿಹೆಚ್‌ಎಸ್‌ ಮತ್ತು ವಿಸಿಡಿಗಳು ಮಾರಾಟವಾಗುತ್ತಿವೆಯೇ ?
    ಇಂಥದೊಂದು ಅನುಮಾನ ಕನ್ನಡ ಚಿತ್ರಪ್ರೇಮಿ ವಿ. ಲಕ್ಷ್ಮೀ ಕಾಂತ್‌ ಅವರದು.

    ವಿಷಯ ಇಷ್ಟು -
    ಕ್ಯಾಲಿಫೋರ್ನಿಯಾದ ಸನ್ನಿವೇಲ್‌ನ ನ್ಯೂ ಇಂಡಿಯನ್‌ ಗ್ರಾಸರಿ ಸ್ಟೋರ್ಸ್‌ ನಲ್ಲಿ ಇತ್ತೀಚೆಗಷ್ಟೇ ತೆರೆ ಕಂಡಿದ್ದ ‘ಹುಚ್ಚ’ ಹಾಗೂ‘ಮೆಜೆಸ್ಟಿಕ್‌’ ಕನ್ನಡ ಚಿತ್ರಗಳ ವಿಸಿಡಿಗಳನ್ನು ಕಂಡು ಕೊಂಡ ಲಕ್ಷ್ಮೀಕಾಂತ್‌, ಅವುಗಳನ್ನು ಮನೆಗೆ ತಂದು ಪ್ಲೇ ಮಾಡಿದಾಗ ಎದುರಾದದ್ದು ನಿರಾಶೆ. ವಿಸಿಡಿಗಳ ಪ್ರಿಂಟ್‌ ಗುಣಮಟ್ಟ ತೀರಾ ಕಳಪೆಯಾಗಿತ್ತು .

    ಕಳಪೆ ಗುಣಮಟ್ಟದ ವಿಸಿಡಿಗಳ ಬಗ್ಗೆ ವಿಚಾರಿಸೋಣವೆಂದರೆ ವಿಸಿಡಿ ಮೇಲೆ ವಿಳಾಸಗಳ ಪತ್ತೆಯಿಲ್ಲ . ವಿಸಿಡಿ ಲೇಬಲ್‌ ಮೇಲೂ ಯಾವುದೇ ಮಾಹಿತಿ ಕಂಡು ಬರಲಿಲ್ಲ. ವಿಸಿಡಿ ಮೇಲೆ ನಕಲಿತನವು ಗೊತ್ತಾಗದ ಹಾಗೆ ನಾಜೂಕಾಗಿ ಲೇಬಲ್‌ಗಳನ್ನು ಅಂಟಿಸಲಾಗಿತ್ತು. ಆದರೆ ಸಂಪರ್ಕ ವಿಳಾಸ ಮಾತ್ರ ಇರಲಿಲ್ಲ.

    ವಿಸಿಡಿ ಅಂಗಡಿಗೆ ಫೋನಾಯಿಸಿದ ಲಕ್ಷ್ಮಿಕಾಂತ್‌, ಈ ವಿಸಿಡಿಗಳು ನಕಲಿ ಎಂದು ದೂರಿತ್ತರು. ಆದರೆ ಈ ದೂರಿನ ಮೂಲಕ ಅಂಗಡಿ ಮಾಲಿಕರು ಏನೂ ಕ್ರಮ ಕೈಗೊಳ್ಳುವುದಕ್ಕಾಗಲಿಲ್ಲ.

    ಅಂದಹಾಗೆ, ಪ್ರತಿ ಚಿತ್ರದ ವಿಸಿಡಿ ಬೆಲೆ 5 ಡಾಲರ್‌. ಇವು ಸಾಗಾರದಾಚೆಯಿಂದ ಅಂದರೆ ಭಾರತದಿಂದ ಬಂದ ಕ್ಯಾಸೆಟ್‌ಗಳಲ್ಲ . ಒಂದು ಮೂಲದ ಪ್ರಕಾರ ಅಮೆರಿಕಾದಲ್ಲಿ 461 ಕನ್ನಡ ವಿಸಿಡಿಗಳ ಮಾರಾಟವಾಗುತ್ತಿದೆ.

    ಇದು ಹುಚ್ಚ ಅಥವಾ ಮೆಜೆಸ್ಟಿಕ್‌ ಸಿನಿಮಾ ವಿಸಿಡಿಗಳ ಕರ್ಮಕಥೆ ಮಾತ್ರವಲ್ಲ . ಸಾಕಷ್ಟು ಕನ್ನಡ ವಿಸಿಡಿಗಳ ಹಣೆಬರಹವೇ ಇಷ್ಟು. ‘ದೂರದರ್ಶನ, ಉದಯಟೀವಿ ಮತ್ತು ಈಟೀವಿಯಲ್ಲಿ ಪ್ರಸಾರವಾಗುವ ಚಿತ್ರಗಳನ್ನು ಎಸ್‌ಎಲ್‌ಪಿ ಮೋಡ್‌ನಲ್ಲಿ ರೆಕಾರ್ಡ್‌ ಮಾಡಿದಾಗ ಗುಣಮಟ್ಟ ಕಳಪೆಯಾಗುತ್ತದೆ. ನಕಲಿ ಕೆಲಸ ಮಾಡುವವರು ಈ ಮಾದರಿಯನ್ನು ಅನುಸರಿಸಿರಬೇಕು’ ಎನ್ನುವುದು ಲಕ್ಷ್ಮಿಕಾಂತ್‌ ಅನುಮಾನ.

    ಕನ್ನಡ ಚಿತ್ರಗಳ ನಕಲಿ ವಿಸಿಡಿಗಳ ಮಾರಾಟವನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಜವಾಬ್ದಾರಿ ಈಗ ಕನ್ನಡ ಚಿತ್ರೋದ್ಯಮದ ಮೇಲಿದೆ. ಚಿತ್ರೋದ್ಯಮಕ್ಕೆ ಅಷ್ಟು ಪುರುಸೊತ್ತು ಇದೆಯಾ ?

    Post your views

    ಮುಖಪುಟ / ಸ್ಯಾಂಡಲ್‌ವುಡ್‌

    Thursday, April 18, 2024, 21:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X